;

ಜನ್ಮದಾತರ ಆದರ್ಶ ವ್ಯಕ್ತಿತ್ವವನ್ನು ನಾನು ಪಾಲಿಸುತ್ತಿದ್ದೇನೆ- ಪಿಎಸ್ ಐ ಸೌಮ್ಯ ಹಿರೇಮಠ …!!!

ಜನ್ಮದಾತರ ಆದರ್ಶ ವ್ಯಕ್ತಿತ್ವವನ್ನು ನಾನು ಪಾಲಿಸುತ್ತಿದ್ದೇನೆ- ಪಿಎಸ್ ಐ ಸೌಮ್ಯ ಹಿರೇಮಠ .

ಸಿಂಧನೂರು: ನನ್ನ ಜನ್ಮದಾತರ ಆದರ್ಶ ವ್ಯಕ್ತಿತ್ವ ವನ್ನು ನಾನು ಪಾಲಿಸುತ್ತಿದ್ದೇನೆ ಇಂದು ನನ್ನ ಯಶಸ್ಸಿಗೆ ಕಾರಣ ನನ್ನ ತಂದೆ ತಾಯಿಗಳು ಎಂದು ಸೌಮ್ಯ ಹಿರೇಮಠ ಹೇಳಿದರು.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ) ಹರೇಟನೂರು ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿ ಮಾಂದ್ಯ ಆಶ್ರಮದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐಗಳಾದ ಸೌಮ್ಯ ಎಂ. ಹಿರೇಮಠರವರು ತಮ್ಮಹುಟ್ಟು ಹಬ್ಬವನ್ನು ಆಶ್ರಮದಲ್ಲಿ ಅಲ್ಲಿನ ಅನಾಥ ಜೀವಿಗಳ ಇಷ್ಟದ ಮಹಾಪ್ರಸಾದ ವ್ಯವಸ್ಥೆ ಮಾಡಿಸಿ ಆಶ್ರಮದಲ್ಲಿನ ಹಿರಿಯ ಜೀವಿಗಳು ಮತ್ತು ಸಿಂಧನೂರಿನ ಗುರುಹಿರಿಯರ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು
ಮಾತನಾಡಿದರು.

ನನ್ನ ಬಾಳ ಸಂಗಾತಿಯಾದ ಮಹೇಶ ನನಗೆ ನೀಡುವ ಸಹಕಾರ ಹೆಚ್ಚಿನ ಮಟ್ಟಕ್ಕೆ ಬೆಳೆಸಬಹುದು. ನನ್ನ ಹುಟ್ಟುಹಬ್ಬವನ್ನು ಕಾರುಣ್ಯ ಆಶ್ರಯದಲ್ಲಿ ಆಚರಿಸಿಕೊಳ್ಳುವ ಅವಕಾಶ ಸಿಕ್ಕಿರಿರುವುದು ನನ್ನ ಪುಣ್ಯ.ತಂದೆ ತಾಯಿಗಳನ್ನು ಗೌರವದಿಂದ ಕಾಣಬೇಕು ಅಂದಾಗ ಮಾತ್ರ ಇಂತಹ ವೃದ್ಧಾಶ್ರಮಗಳು ಕಡಿಮೆಯಾಗುತ್ತವೆ ಎಂದರು. ಪುನೀತ ರಾಜಕುಮಾರ ಅಭಿಮಾನ ಬಳಗ, ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ಮತ್ತು ಹಲವಾರು ಸಂಘಟನೆಗಳು ಕೇಕ್ ಕತ್ತರಿಸುವ ಮೂಲಕ ನನ್ನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ನನಗೆ ಬಹಳ ಸಂತೋಷವನ್ನುಂಟು ಮಾಡಿದೆ. ತಾಲೂಕಿನ ಎಲ್ಲಾ ಸಂಘ-ಸಂಸ್ಥೆಗಳಿಗೆ ಗುರು ಹಿರಿಯರಿಗೆ ಧನ್ಯವಾದ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಿಎಸ್ಐ ಸೌಮ್ಯ ಹಿರೇಮಠ ಅವರ ಅಪಾರ ಕುಟುಂಬವರ್ಗ ಅವರ ಪತಿಯವರಾದ ಮಹೇಶ, ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು ಪಾ ಹಿರೇಮಠ, ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ, ಖ್ಯಾತವಾಣಿಜ್ಯೋದ್ಯಮಿಗಳಾದ ಹಾಗೂ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಯೋಗಿತಾ ರಾಜೇಶ ಹಿರೇಮಠ, ವೀರ ಮಹೇಶ್ವರಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಲ್ಲಿನಾಥ ಶಾಸ್ತ್ರೀ,ಅಮರಯ್ಯ ಸ್ವಾಮಿ ಹಿರೇಮಠ, ಅಲಬನೂರು ಮಲ್ಲಿಕಾರ್ಜುನ ಶಿಕ್ಷಕರು,ಮಹಿಳಾ ಘಟಕ ಅಧ್ಯಕ್ಷರಾದ ಶಾರದಾ ಹಿರೇಮಠ, ಜಲಜಾಕ್ಷಿ ಹಿರೇಮಠ, ಸುಮಾ ಲೋಕೇಶ, ಜಯಶ್ರೀ ಹಿರೇಮಠ,ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಮಂಜು ಗಿರಿಜಾಲಿ ಹಾಗೂ ಅವರ ಎಲ್ಲಾ ಪದಾಧಿಕಾರಿಗಳು.ಕಾರುಣ್ಯ ಆಶ್ರಮದ ಖಜಾಂಚಿ ಗಳಾದ ಬನಶಂಕರಿ ಶೇಖರಯ್ಯಸ್ವಾಮಿ ಹಿರೇಮಠ ಐಕೂರು. ಸದಸ್ಯರಾದ ವೀರಭದ್ರಗೌಡ ಗಿಣಿವಾರ ಸಿಬ್ಬಂದಿಗಳಾದ ಚನ್ನಬಸಯ್ಯ ಸ್ವಾಮಿ. ಸುಜಾತ. ಪಂಪಯ್ಯ ಸ್ವಾಮಿ ಜವಳಗೇರಾ. ಮಹೇಶ ವಿಶ್ವಕರ್ಮ. ಸರೋಜಾ. ರೇಖಾ. ಮಲ್ಲಿಕಾರ್ಜುನಸ್ವಾಮಿ ಲಿಂಗಸುಗೂರು. ಸಂಗನಗೌಡ ಗಿಣಿವಾರ ಹಾಗೂ ಕಾರುಣ್ಯ ಆಶ್ರಮದ ಅಭಿಮಾನಿಗಳು ಭಾಗವಹಿಸಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;