ಯುವತಿ ಕಾಣೆ
ಚಿತ್ರದುರ್ಗ, ಮಾರ್ಚ್ :
ಹೊಸದುರ್ಗ ತಾಲ್ಲೂಕಿನ ಬೆಲಗೂರು ಗ್ರಾಮದ ನಿವಾಸಿ ಪ್ರೇಕ್ಷಾ (18) ಎಂಬ ಯುವತಿ ಮಾರ್ಚ್ 19ರಂದು ಚಿತ್ರದುರ್ಗದಿಂದ ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾಗಿರುವ ಯುವತಿ ಚಹರೆ ಇಂತಿದೆ. ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಸಿಮೆಂಟ್ ಮತ್ತು ಕಪ್ಪು ಮಿಶ್ರಿತ ಟಾಪ್, ಕೆಂಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ, 5 ಅಡಿ ಎತ್ತರವಿದ್ದು ಕನ್ನಡ ಭಾಷೆ ಮಾತನಾಡುತ್ತಾಳೆ.
ಈ ಮೇಲ್ಕಂಡ ಚಹರೆಯುಳ್ಳ ಯುವತಿ ಬಗ್ಗೆ ಮಾಹಿತಿ ದೊರೆತ ಕೂಡಲೆ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು 08194-222933, 9480803145, ಪೊಲೀಸ್ ಉಪಾಧೀಕ್ಷಕರು ಚಿತ್ರದುರ್ಗ ಉಪವಿಭಾಗ 08194-222430, 9480803120, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 08194-222782 ಗೆ ಸಂಪರ್ಕಿಸಬೇಕೆಂದು ಚಿತ್ರದುರ್ಗ ಕೋಟೆ ಠಾಣೆ ಠಾಣಾಧಿಕಾರಿ ತಿಳಿಸಿದ್ದಾರೆ…

ವರದಿ. ಚಕ್ರಿ ಬಸವರಾಜ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
