;

ಅಂತಾರಾಜ್ಯ ದರೋಡೆಕೋರರನ್ನು ಬಂದಿಸುವಲ್ಲಿ ಯಶಸ್ವಿಯಾದ ಸಿಂದನೂರಿನ ಪೊಲೀಸ್ ಅಧಿಕಾರಿಗಳು -ನಿಖಿಲ್. ಬಿ. ಶ್ಲಾಘನೀಯ…!!!

13 ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತಾರಾಜ್ಯ ದರೋಡೆಕೋರರನ್ನು ಬಂದಿಸುವಲ್ಲಿ ಯಶಸ್ವಿ -ನಿಖಿಲ್. ಬಿ. ಶ್ಲಾಘನೀಯ.

ಸಿಂಧನೂರು : 13 ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತಾರಾಜ್ಯ ದರೋಡೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್. ಬಿ. ರವರು ಶ್ಲಾಘನೀಯ ವ್ಯಕ್ತಪಡಿಸಿದರು.

ಸಿಂಧನೂರು ನಗರದ ಗ್ರಾಮೀಣ ಪೊಲೀಸ್ ಠಾಣೆ ಯಲ್ಲಿ ಸುದ್ದಿಗೋಷ್ಟಿ ಉದ್ದೆಶಿಸಿ ಮಾತನಾಡಿದ ಅವರು ಸಿರುಗುಪ್ಪ- ಸಿಂಧನೂರು ರಸ್ತೆಯಲ್ಲಿ, ಧಡೇಸೂಗೂರು ಸಮೀಪದ ಕೆ.ಇ.ಬಿ ಸಬ್ ಸ್ಟೇಶನ್ ಹತ್ತಿರ ಕರ್ನೂಲ್ ಜಿಲ್ಲೆಯ ಕುರಿ ವ್ಯಾಪಾರದವರು ಪಿಕಪ್ ವಾಹನದಲ್ಲಿ ಕುರಿ ಸಂತೆಗೆ ಹೋಗುವಾಗ ಅವರ ವಾಹನದ ಹಿಂದಿನಿಂದ ಕಳ್ಳರು ಬುಲೆರೋ ಮ್ಯಾಕ್ಸ್ ಪವರ್ ವಾಹನದಲ್ಲಿ ಓವರ್ ಟೇಕ್ ಮಾಡಿ ಅಡ್ಡಗಟ್ಟಿ ನಿಲ್ಲಿಸಿ ರಾಡ್ ಮತ್ತು ಗಾಜಿನ ಬಾಟಲಿಗಳಿಂದ ಹಲ್ಲೇ ಮಾಡಿ “ನೀ ದಗರ ಡಬ್ಬುಲು ತೀಯಿ, ದುಡ್ಡು ತೆಗಿ ಅಂತಾ ಅರ್ಧಂಭರ್ಧ ತೆಲುಗು ಮತ್ತು ಕನ್ನಡದಲ್ಲಿ ಅಂದು ದುಡ್ಡಿನ ಚೀಲವನ್ನು ಎಳೆದಾಡಿ ಕುರಿ ವ್ಯಾಪಾರಸ್ಕರ ತಲೆಗೆ ಬಾಟಲಿಯಿಂದ ಹೊಡೆದು ರಾಡ್ ನಿಂದ ನಡುವಿಗೆ ಮತ್ತು ನಡುವಿನ ಕೆಳಗೆ ಹೊಡೆದು ಒಳಪೆಟ್ಟು ಮತ್ತು ಕಂದುಗಟ್ಟಿದ ಗಾಯಗೊಳಿಸಿ ಅವರಿಂದ ಕುರಿ ಖರೀದಿ ಸಲುವಾಗಿ ತಂದಿದ್ದ ನಗದು ಹಣ ರೂ.3,27,000/- ಗಳನ್ನು ಕಿತ್ತುಕೊಂಡು ಹೋಗಿದ್ದು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.6 ತಿಂಗಳಿನಿಂದ ಬಲೆ ಬಿಸಿದ್ದು ಗದಗ ಜಿಲ್ಲೆಯಲ್ಲಿ ಎರಡು ಬಾರಿ ಅಧಿಕಾರಿಗಳ ತಂಡದ ಮೇಲೆ ಬಾಟಲಿಯಿಂದ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದರು ಆದರೆ ಈ ಬಾರಿ ಸದರಿ ತಂಡದವರು ದಿ.21-03-2022 ರಂದು ಆರೋಪಿತರಾದ 1).ಅಮರೇಶ ಮೋದಿಕಾರ್‌ ತಂ/ಮಾಕಲ್ ರಾಮಣ, 26ವರ್ಷ, ಜಾ:ಮೋಡಿಕಾರ್, ಸಾ.ಜನತಾ ಕಾಲೋನಿ ಸಿಂಧನೂರು 2) ದುರ್ಗಪ್ಪ @ ದುರುಗೇಶ 3)ಸಂಜೀವ, 4)ರಾಮಸ್ವಾಮಿ ಇವರುಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಈ ಆರೋಪಿತರು ರಾಯಚೂರು ಜಿಲ್ಲೆಯಲ್ಲಿ 03 ಪ್ರಕರಣದಲ್ಲಿ ದಡೆಸೂಗೂರು ಮತ್ತು ಅಂಭಾಮಠ ಗ್ರಾಮೀಣ ಠಾಣೆ,ನಗರ ಠಾಣೆಯಲ್ಲಿ ಹಂದಿ ಕಳ್ಳತನ,ಕೊಪ್ಪಳ 02, ವಿಜಯನಗರ 01, ಮಂಡ್ಯ 01, ತುಮಕೂರು ಜಿಲ್ಲೆಯಲ್ಲಿ 02, ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿ 03 ಹಾಗೂ ಅನಂತಪುರಂ ಜಿಲ್ಲೆಯಲ್ಲಿ 01 ಪುಕರಣ ಹೀಗೆ ಒಟ್ಟು 13 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.

ದಸ್ತಗಿರಿ ಮಾಡಿ ಯೋಗ್ಯ ವಿಚಾರಣೆ ಗೊಳಪಡಿಸಿದ್ದು, ಸದರಿ ಆರೋಪಿತರು ಈ ಫಿರ್ಯಾದಿದಾರರಿಂದ ಅವರಿಗೆ ಹಲ್ಲೆ ಮಾಡಿ ಹಣ ದರೋಡೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವರಿಂದ ನಗದು ಹಣ ಎರಡು ಲಕ್ಷ ರೂ,03 ಮೋಟರ್ ಸೈಕಲುಗಳು ಮತ್ತು ದರೋಡೆ ಮಾಡಲು ಉಪಯೋಗಿಸಿದ ಬುಲೆರೋ ಮ್ಯಾಕ್ಸ್ ಟ್ರಕ್ ವಾಹನವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸದರಿ ಪುಕರಣದಲ್ಲಿ ಆರೋಪಿತರು ಮತ್ತು ಸ್ವತ್ತಿನ ಪತ್ತೆ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಶ್ರೀ ವೆಂಕಟಪ್ಪ ನಾಯಕ ಪೊಲೀಸ್ ಉಪಾಧೀಕ್ಷಕರು ಸಿಂಧನೂರು ರವರ ನೇತೃತ್ವದಲ್ಲಿ ಉಮೇಶ್ ಎನ್. ಕಾಂಬಳೆ ಪೊಲೀಸ್ ವೃತ್ತ ನಿರೀಕ್ಷಕರು, ಪಿ.ಎಸ್.ಐ ಎರಿಯಪ್ಪ ಗ್ರಾಮೀಣಪೊಲೀಸ್ ಠಾಣೆ, ಹನುಮಂತಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ಚಂದ್ರಪ್ಪ ಹೆಚ್,ತುರ್ವಿಹಾಳ ಪೊಲೀಸ್ ಠಾಣೆ, ಶಂಕರಗೌಡ ಬಳಗಾನೂರು ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿ ಯವರಾದ ರಾಘವೇಂದ್ರ, ಕಟ್ಟಪ್ಪ ಪರಶುರಾಮ, ದ್ಯಾಮಣ್ಣ, ಶರಣಪ್ಪ, ಅನಿಲಕುಮಾರ್ – ಜಿ. ಕೆ. ಹೊನ್ನುಸಾ, ಸಿದ್ದಪ್ಪ, ಚಾಂದಪಾಷಾ, ಅಮರೇಗೌಡ, ಅಮರೇಶ, ಮಂಜುನಾಥ, ಅನಿಲಕುಮಾರ, ದೊಡ್ಡಬಸವ, ಸಂಗನಗೌಡ,ಅಶೋಕ, ದೇವರಡ್ಡಿ ಮತ್ತು ಡಿಪಿಓ ಸಿಡಿಆರ್ ಸೇಲ್ ಅಜೀಂಪಾಷ ರವರನ್ನೊಳಗೊಂಡ ತಂಡವನ್ನು ರಚಿಸಿಕೊಂಡು ಕಾರ್ಯಚರಣೆ ಯಶಸ್ವಿಯಾಗಿದ್ದಾರೆ.ಸದರಿ ತಂಡದ ಕಾರ್ಯವನ್ನು ಮೆಚ್ಚಿ ನಿಖಿಲ್.ಬಿ IPS ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ರವರು ಶ್ಲಾಘಿಸಿ, ಐವತ್ತು ಸಾವಿರ ನಗದು ಬಹುಮಾನವನ್ನು ಘೋಷಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *