;

ಬೂತಲದಿನ್ನಿ ಗ್ರಾ.ಪಂ.ಯಲ್ಲಿ ಟಿಬಿ ಸೋಲಿಸಿ ಗ್ರಾಮ ಪಂಚಾಯಿತಿ ಗೆಲ್ಲಿಸಿ…!!!

ಬೂತಲದಿನ್ನಿ ಗ್ರಾ.ಪಂ.ಯಲ್ಲಿ ಟಿಬಿ ಸೋಲಿಸಿ ಗ್ರಾಮ ಪಂಚಾಯಿತಿ ಗೆಲ್ಲಿಸಿ”

ಸಿಂಧನೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ವಿಭಾಗ ರಾಯಚೂರು,ತಾಲೂಕು ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾರಪೂರು ಇವರ ಸಂಯುಕ್ತಾಶ್ರಯದಲ್ಲಿ “ಟಿಬಿ ಸೋಲಿಸಿ ಗ್ರಾಮ ಪಂಚಾಯಿತಿ ಗೆಲ್ಲಿಸಿ” ಅಭಿಯಾನವನ್ನು ಬೂತಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ಕ್ಷಯ ಮುಕ್ತ ಗ್ರಾ.ಪಂ. ಹಾಗೂ ಕ್ಷಯ ರೋಗದ ಕುರಿತು ಅರಿವು ಕಾರ್ಯಕ್ರಮ ಅಭಿಯಾನವನ್ನು ಗ್ರಾ.ಪಂ.ಅಧ್ಯಕ್ಷರಾದ ಶ್ರೀನಿವಾಸರವರು ಉದ್ಘಾಟಿಸಿದರು.

ತರಬೇತಿಯಲ್ಲಿ ತಾಲೂಕು ಆರೋಗ್ಯಧಿಕಾರಿಗಳಾದ ಗೀತಾ ಹಿರೇಮಠರವರು ಕ್ಷಯ ಮುಕ್ತ ಗ್ರಾ.ಪಂ. ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿದ್ದು. ಹಾಗಾಗಿ ಕ್ಷಯ ಮುಕ್ತ ಮಾಡಲು ಎಲ್ಲಾ ರೀತಿಯ ಸಹಕಾರ ಬೆಂಬಲ ನೀಡಲು ತಿಳಿಸಿದರು. ಈ ತರಬೇತಿಯಲ್ಲಿ ಡ.ಲಾಲ್ ಭ ಪಟೇಲ್ ಇವರು ಪ್ರತಿ ಬುಧವಾರ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ ಮಾಡುವಾಗ ಗ್ರಾ.ಪಂ.ಸದಸ್ಯರ ಸಹಕಾರ ಬೆಂಬಲಬೇಕು.ಟಿಬಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಸರಿಯಾಗಿ ಚಿಕಿತ್ಸೆ ಪಡೆದಿದ್ದಲ್ಲಿ ಅಂತವರಿಗೆ ಬೆಂಬಲ ನೀಡವುದು.

ಪ್ರವೀಣಕುಮಾರ ಡಿ.ಪಿ.ಎಸ್ ಕ್ಷಯ ರೋಗವು ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು,ಸಾಯಂಕಾಲದ ಜ್ವರ ಇರುವವರನ್ನು ಕಫ ಪರೀಕ್ಷೆ ಮಾಡಿಸಿ ಕ್ಷಯರೋಗ ಪತ್ತೆಹಚ್ಚಲು ಸಹಕರಿಸಲು ಮನವಿ ಮಾಡಿದರು.

ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀ ರಂಗನಾಥ್ ಗುಡಿ ಇವರು ಕ್ಷಯ ರೋಗ ಧೃಡಪಟ್ಟಲ್ಲಿ ಸರಕಾರದಿಂದ ಉಚಿತವಾಗಿ ಔಷಧೋಪಚಾರ & ಪೌಷ್ಟಿಕ ಅಹಾರಕ್ಕಾಗಿ ಮಾಸಿಕ 500/- ರೂ ಗಳ ಧನಸಹಾಯ ‘ನಿಕ್ಷಯ್ ಪೋಷಣ ಯೋಜನೆ’ಯ ಅಡಿಯಲ್ಲಿ ಪಡೆಯಲು ವಿನಂತಿಸಿದರು.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಲಿಂಗಪ್ಪರವರು ಮಾತನಾಡಿ ಕ್ಷಯಮುಕ್ತ ಗ್ರಾ.ಪಂ.ಮಾಡಲು ಎಲ್ಲಾ ರೀತಿಯ ಸಹಕಾರ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.ಈ ತರಬೇತಿ ಕಾರ್ಯಕ್ರಮವನ್ನು ತಾಲೂಕು ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕರಾದ ಅಮೀರ್ ನಿರೂಪಣೆ ಮಾಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ
ಮಲ್ಲಿಕಾರ್ಜುನ ಹಾಗೂ
ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕರಾದ ಯಮನೂರು, ಅಬ್ದುಲ್ ಹಮೀದ್,ನಬೀನಾ ಪಿಎಚ್ಸಿಒ, ದೀಪಿಕಾ ಸಿಎಚ್ಒ,ಸ್ವಸಹಾಯ ಗುಂಪಿನ ಸದಸ್ಯರು, ಯುವಕ ಸಂಘದ ಸದಸ್ಯರು ಹಾಗೂ ಅಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಇದ್ದರು..

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;