ಜೆಡಿಎಸ್ ಕಛೇರಿಯಲ್ಲಿ ಪುನೀತ್ ಹುಟ್ಟು ಹಬ್ಬಆಚರಣೆ.
ಸಿಂಧನೂರು : ನಗರದ ಗಂಗಾವತಿ ರಸ್ತೆಯ ತಾಲೂಕು ಯುವ ಜೆಡಿಎಸ್ ಕಛೇರಿಯಲ್ಲಿ ಕರುನಾಡ ಕೋಟ್ಯಾಧಿಪತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.
ಪುನೀತ್ ರಾಜಕುಮಾರ್ ಅವರ ಅಗಲಿಕೆ ನಮ್ಮ ನಾಡಿಗೆ ತುಂಬಲಾಗದ ನಷ್ಟ, ಎಷ್ಟೋ ಕುಟುಂಬಗಳಿಗೆ, ಸಾವಿರಾರು ವಿಧ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ನಮ್ಮ ನಾಡಿಗೆ ಮಾದರಿಯಾಗಿರುವ ಡಾ.ಪುನೀತ್ ರಾಜಕುಮಾರ್ ಅವರ ಜೀವನದ ಹಾದಿಯನ್ನು ಈ ಸಂಧರ್ಭದಲ್ಲಿ ನೆನಪಿಸಿಕೊಳ್ಳಲಾಯಿತು. ಎಡಗೈಯಿಂದ ಮಾಡಿದ್ದು ಬಲಗೈಗೆ ಗೊತ್ತಾಗದಾಗೆ ಪುನೀತ್ ರಾಜ್ ಕುಮಾರ್ ಅವರು ಸಹಾಯ ಮಾಡಿದ್ದು ಸ್ವಂತ ಅಣ್ಣನಿಗೆ ಗೊತ್ತಿಲ್ಲ. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಹುಟ್ಟು ಸಾವಿನ ನಡುವೆ ಬದುಕು ಸಾರ್ಥಕತೆ ಪಡೆಯಬೇಕಾದರೆ ಪುನೀತ್ ರವರು ಮಾಡಿದಂತಹ ಒಳ್ಳೆಯ ಕೆಲಸ ಎಲ್ಲರಿಗೂ ಮಾದರಿಯಾಗಲಿ. ನಾವು ಕೂಡ ಅವರಂತೆ ಒಳ್ಳೆಯ ಕೆಲಸ ಮಾಡಬೇಕು ಎನ್ನುವ ಸ್ಫೂರ್ತಿಯನ್ನು ತುಂಬಿದ್ದಾರೆ. ಅವರ ಹಾದಿಯಲ್ಲಿ ನಾವುಗಳೆಲ್ಲ ನಡೆಯಬೇಕು. ಜೇಮ್ಸ್ ಚಿತ್ರ ದೇಶಾದ್ಯಂತ ಬಿಡುಗಡೆಯಾಗಿದೆ.ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಆಗಿದೆ,ಪುನಿತ್ ಮತ್ತೆ ಹುಟ್ಟಿ ಬರಲಿ ಎಂದು ನಾವೆಲ್ಲ ಹಾರೈಸೋಣ ಎಂದು ಕೇಕ್ ಕಟ್ ಮಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ ಮಾತನಾಡಿದರು.
ಜೆಡಿಎಸ್ ಮುಖಂಡ ನದಿಮುಲ್ಲಾ ಮಾತನಾಡಿ ಸಿ.ಎಸ್ ಅಶ್ವಥ್ ರವರು ಹಾಡಿದ ‘ ಒಳಿತು ಮಾಡು ಮನುಷ್ಯ ನೀ ಇರೋದು ಮೂರು ದಿವಸ, ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ ಪ್ರೀತಿ ಪ್ರೇಮ ಹಂಚಿ ಹೋಗಬೇಕು ಅಲ್ಲಿ ಸತ್ತಮೇಲೂ ನಿನಗೆ ಹೆಸರುಂಟು ಇಲ್ಲಿ ಎಂಬ ಹಾಡಿಗೆ ತಕ್ಕಂತೆ ಪುನೀತ್ ರಾಜಕುಮಾರ ನಡೆದುಕೊಂಡಿದ್ದಾರೆ. ಅವರು ರಾಜಕೀಯದಿಂದ ದೂರವಿದ್ದರೂ ಸಹ ಕನ್ನಡಕ್ಕಾಗಿ, ಕನ್ನಡ ಪ್ರಾದೇಶಿಕ ಪಕ್ಷಗಳಿಗಾಗಿ ಅದರ ಉಳಿವಿಗಾಗಿ ಬಯಸುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಅಲ್ಲಮಪ್ರಭು, ಪಂಪಾಪತಿ ಸಾಹುಕಾರ, ಅಜ್ಮೀರ್ ಸಾಬ್, ಮೈಬೂಬ್ ಎತ್ಮಾರಿ ,ಸುಮಿತ ತಡಕಲ್, ಪದ್ಮಾನಾಯ್ಡು, ಮಮ್ಮದ್ ಅಲಿ, ಹನುಮಂತ ಹಂಚಿನಾಳ ಕ್ಯಾಂಪ್, ಆಸಿಫ್ , ಭಾಷಾ ಸಾಲಗುಂದ ಖಾನ್ ಸಾಬ್, ಮಂಜು, ಪುನೀತ್ ಅಭಿಮಾನಿ ಸಂಘದ ಅಧ್ಯಕ್ಷ ಪವನ್, ಚನ್ನಬಸವ ಹಿರೇಮಠ ಇನ್ನೂ ಅನೇಕರಿದ್ದರು.
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
