;

ವಿಜಯನಗರ ಜಿಲ್ಲಾ ಯುವರಂಗ ತರಬೇತಿ ಮತ್ತು ಕಾಲೇಜು ನಾಟಕೋತ್ಸವದ ತೆರೆ ಹಿಂದಿನ ನಾಟಕ…!!!

“ವಿಜಯನಗರ ಜಿಲ್ಲಾ ಯುವರಂಗ ತರಬೇತಿ ಮತ್ತು ಕಾಲೇಜು ನಾಟಕೋತ್ಸವದ ತೆರೆ ಹಿಂದಿನ ನಾಟಕ” @ಮರಿಯಮ್ಮನಹಳ್ಳಿ

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ರಂಗಾಯಣ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಾಲೇಜು ಯುವ ರಂಗ ತರಬೇತಿ ಮತ್ತು ನಾಟಕೋತ್ಸವ ಕಾರ್ಯಕ್ರಮಕ್ಕೆ ವಿಜಯ ನಗರ ಜಿಲ್ಲೆಯ ಸಂಚಾಲಕರಾದ ಬಿ ಎಂ ಎಸ್ ಪ್ರಭು ರವರು ಮರಿಯಮ್ಮನಹಳ್ಳಿಯ ಕಾಲವಿದರಾದ ಸರದಾರ್ ಬಾರಿಗಿಡ,ಬಿ ಎಂ ಯೋಗೀಶ್,ಎಲ್ ಪ್ರಶಾಂತ್ ಕುಮಾರ್ ರವರಿಗೆ ಆಯ್ದುಕೊಂಡ ಕಾಲೇಜುಗಳಿಗೆ ನಾಟಕ ನಿರ್ದೇಶನ ಮಾಡಲು ನಿರ್ದೇಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ,
ಈಗ ಅವರ ನಿರ್ದೇಶನದ ನಾಟಕವನ್ನು ಅಭಿನಯಿಸುವ ಕಾಲೇಜುಗಳು ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸಪೇಟೆ, ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಟ್ಟೂರಿನ ಇಂದು ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿ ಕಾಲೇಜುಗಳು ಬೇರೆ ಬೇರೆ ಭಾಗದಲ್ಲಿ ಇವೆ ಈ ಕಾಲೇಜುಗಳಲ್ಲಿ ರಂಗ ಚಟುವಟಿಕೆ ನಡೆಸುವ ಅಗತ್ಯವು ಇದೆ ಸರಿ ಆದರೆ ನಿರ್ದೇಶಕರು ಮೂರು ಜನ ಮರಿಯಮ್ಮನಹಳ್ಳಿಯವರೇ!!
ಹಾಗೇ ನೋಡಿದರೆ ಮೊದಲು ಬಳ್ಳಾರಿ ಜಿಲ್ಲೆಗೆ ಒಳಪಡುತ್ತಿರುವ ಕಾಲದಲ್ಲೂ ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಯಾವುದೇ ಯೋಜನೆಗಳು ಮರಿಯಮ್ಮನಹಳ್ಳಿಯನ್ನ ದಾಟಿ ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟರು ತಾಲೂಕುಗಳಿಗೆ ಯಾವೂ ತಲುಪಿಲ್ಲ!! ಈ ನಿಟ್ಟಿನಲ್ಲಿ ಈ ತಾಲೂಕುಗಳಲ್ಲಿ ಕಲಾವಿದರು, ತರಬೇತಿ ಪಡೆದ ಅಥವಾ ನಾಟಕ ಪದವಿ /ಡಿಪ್ಲೊಮಾ ಪಡೆದವರೇ ಪ್ರತಿ ತಾಲೂಕಿನಲ್ಲಿ ಸಕ್ರಿಯವಾಗಿ ರಂಗ ಚಟುವಟಿಕೆಯಲ್ಲೇ ಬದುಕು ಕಟ್ಟಿಕೊಳ್ಳು ಪ್ರಯತ್ನದಲ್ಲಿ ಕನಿಷ್ಟ 10 ಜನರಾದರೂ ಕಲಾವಿದರು ಇದ್ದಾರೆ ಅವರೆಲ್ಲಾ ಮೂಲ ಊರಿನಲ್ಲಿ ಅವಕಾಶಗಳ ಕೊರತೆಯ ಕಾರಣದಿಂದಾಗಿ ಬೇರೆ ಬೇರೆ ಊರುಗಳಲ್ಲಿ ಕುಟುಂಬ ಬಿಟ್ಟು ಕೆಲಸ ಮಾಡುತ್ತಿದ್ದಾರೆ!

ಕಲಬುರಗಿ ರಂಗಾಯಣದ ನಿರ್ದೇಶಕರು ಮತ್ತು ಆಡಳಿತಾಧಿಕಾರಿಗಳು ಸಂಚಾಲಕರನ್ನಾಗಿ ನೇಮಿಸಿದ್ದಾರೆ ಅಷ್ಟೇ ಇಡೀ ಜಿಲ್ಲೆಗೆ ವಿಸ್ತರಿಸಲು ಪ್ರಾದೇಶಿಕತೆ ಮತ್ತು ಕಲಾವಿದರ ಲಭ್ಯತೆಯ ಆಧಾರದ ಮೇಲೆ ಆದರೂ ಗೌರವಾನ್ವಿತರು ಹಿರಿಯರು ಆದ ಸಂಚಾಲಕರು ಅಯಾ ತಾಲೂಕಿನ ಆಯ್ಕೆ ಮತ್ತು ನಿರ್ದೇಶಕರ ಆಯ್ಕೆ ವಿಚಾರದಲ್ಲಿ
ಸಹೃದಯತೆಯಿಂದ ವಿಶಾಲ ಮನೋಭಾವದಿಂದ ಯೋಚಿಸಿ ಕೆಲಸ ಮಾಡಬಹುದಿತ್ತು ಆದರೆ ತಮ್ಮ ಶಿಷ್ಯವರ್ಗವನ್ನ ಬೆಳೆಸುವ ಸಲುವಾಗಿ ಈ ಯುವ ರಂಗ ತರಬೇತಿ ಮತ್ತು ನಾಟಕೋತ್ಸವದಲ್ಲಿ ಪಕ್ಷಪಾತ ಮಾಡಿದ್ದಾರೆ!. ಮತ್ತು ಹೂವಿನ ಹಡಗಲಿಯ ಶ್ರೀ ಮತಿ ರುದ್ರಾಂಭ ಎಂ ಪಿ ಪ್ರಕಾಶ್ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಮೊದಲು ಆಯ್ಕೆ ಮಾಡಿಕೊಂಡು ಎಲ್ಲಾ ಸಿದ್ಧತೆ ಆದಮೇಲೆ ಇನ್ನೇನು ಉದ್ಘಾಟನೆ ಗೆ ಸಿದ್ದವಾಗಿದ್ದಾಗ ಕುಂಟು ನೆಪ ಒಡ್ಡಿ ಆಯ್ಕೆಯನ್ನ ರದ್ದು ಗೊಳಿಸಿ ತಮ್ಮ ಶಿಷ್ಯವರ್ಗಕ್ಕೆ ಅವಕಾಶ ಒದಗಿಸಿದ್ದಾರೆ ! ಅವಕಾಶ ಕೊಟ್ಟಂತೆ ಮಾಡಿ ಕಸಿದುಕೊಂಡರು!.
ಇವರು ಕೊಂದದ್ದು ಒಬ್ಬ ನಿರ್ದೇಶಕನ ಒಂದು ಪ್ರಯೋಗದ ಕನಸ್ಸನಲ್ಲ ರಂಗಭೂಮಿಗೆ ಭವಿಷ್ಯವಾಗಬಹುದಾಗಿದ್ದ ಯುವಕರ ಕನಸ್ಸುನ್ನ . ಮತ್ತು ಕಾಲೇಜಿನ ರಂಗ ಚಟುವಟಿಕೆಯ ನಿರೀಕ್ಷೆಯನ್ನ ಕೂಡ.
ಸಂಚಾಲಕರಿಗೆ ರಾಜಕೀಯ ಪ್ರಭಾವಿ ವ್ಯಕ್ತಿಗಳಿಂದ ಸಾಂಸ್ಕೃತಿಕವಾಗಿ ದೊಡ್ಡ ಗಣ್ಯ ಜನರಿಂದ ಪತ್ರಗಳು ಕರೆಗಳು ಬಂದಿದ್ದವಂತೆ ಹಾಗಾಗಿ ಅವರಿಗೆ ಅವಕಾಶ ಕೊಡಲಾಯಿತು ಎಂದು ಸಮರ್ಥನೆಯನ್ನೂ ಸಹ ಸಂಚಾಲಕರು ನೀಡಿದ್ದಾರೆ!! ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಕೂಡ ಈ ಕಾರ್ಯಕ್ರಮ ನಡೆಯುತ್ತಿದ್ದೆ ಆದರೆ ಈ ರೀತಿಯ ಪಕ್ಷಪಾತಿ ಧೋರಣೆಯಾಗಲಿ,ಪ್ರಭಾವಿ ಗಣ್ಯರಿಂದ ನಾಮ ಮುಂದ್ರೆ ಹಾಕಿಸುವುದಾಗಲಿ ಎಲ್ಲೂ ನಡೆದಿಲ್ಲ!! ಆದರೆ ವಿಜಯನಗರ ಜಿಲ್ಲೆ ಒಂದೇ ಈ ರೀತಿಯ ವ್ಯವಸ್ಥೆಯನ್ನ ಹೊಂದಿರುವುದು!!
ಮರಿಯಮ್ಮನಹಳ್ಳಿಯ ಎಂದರೆ ಹೆಚ್ಚು ರಂಗ ಕಲಾವಿದರು ಇರುವಂತ ಊರು ಅಲ್ಲಿ ಬಹುತೇಕ ಪ್ರತಿ ಮನೆಯಲ್ಲೂ ಒಬ್ಬ ಕಲಾವಿದರು ಸಿಗುತ್ತಾರೆ ಎಂಬುದು ಹೆಮ್ಮೆಯ ಸಂಗತಿ ಈ ಕಾರಣಕ್ಕಾಗಿ ಹೆಚ್ಚು ಪ್ರೀತಿಗೆ ಪಾತ್ರವಾಗಿದೆ. ಆದರೆ ಇತರೆ ತಾಲೂಕಿನಲ್ಲೂ ಜೀವಂತಿಕೆಯಿಂದ ಕೂಡಿದ ಕಲಾವಿದರು ಇರುವಾಗ ಅವರ ಕಡೆಗೂ ಒಂದು ಗಮನ ಇರಬೇಕು.ಸಮತೆಯ ರಂಗಭೂಮಿಯ ಮೂಲತತ್ವ ಅದನ್ನ ಮರೆಯಬಾರದು!

ಸಂಚಾಲಕರು ನಿರ್ದೇಶಕರ ಆಯ್ಕೆ ಮಾಡುವಾಗ ಬೇರೆ ತಾಲೂಕಿನ ಕಲಾವಿದರು ಕಾಣಲಿಲ್ವಾ.? ಅಥವಾ ಗೋತ್ತಿಲ್ವಾ.? ಅಂದರೆ ವಿಜಯನಗರ ಜಿಲ್ಲೆಗಳಲ್ಲಿ ಕಲಾವಿದರು ಇಲ್ವಾ.? ಮರಿಯಮ್ಮನಹಳ್ಳಿಯಲ್ಲಿ ಮಾತ್ರ ಕಂಡು ಬರುತ್ತಾರಾ.? ಅಥವಾ ಅಕ್ಕ ಪಕ್ಕದ ತಾಲೂಕಿನಲ್ಲಿ ಕಲಾವಿದರೇ ಇಲ್ವಾ.?!
ಜಿಲ್ಲಾ ಕೇಂದ್ರಕ್ಕೆ ಅದಕ್ಕೆ ಸೀಮಿತವಾದ ಹಲವಾರು ಕ್ರಮಗಳು ಸಿಗುತ್ತವೆ ಹಿಂದೂಳಿದ ತಾಲೂಕಿಗೆ ಅವಕಾಶಗಳು ಎಲ್ಲೂ ಸಿಗಲ್ಲ ಹಾಗಿದ್ದು ಹೊಸಪೇಟೆಯ ಕಾಲೇಜಿಗೆ ಅವಕಾಶ ಕೊಟ್ಟದ್ದು ಯಾಕೆ ?ಸರ್ಕಾರಿ ಕಾಲೇಜಿಗೆ ಮೊದಲ ಆದ್ಯತೆ ಇರುವಾಗ ಕೊಟ್ಟರಿನ ಇಂದು ಪದವಿ ಮಹಾವಿದ್ಯಾಲಯಕ್ಕೆ ಅವಕಾಶ ಕೊಟ್ಟದ್ದು ಯಾಕೆ? ಸರಕಾರ ಪದವಿ ಕಾಲೇಜು ಹೂವಿನ ಹಡಗಲಿಗೆ ತಪ್ಪಿಸಿ ಖಾಸಗಿ ಕಾಲೇಜಿಗೆ ಅವಕಾಶ ಕೊಡುವ ಅಗತ್ಯ ಇತ್ತಾ ?

ನಾಟಕೋತ್ಸವದ ಸಂಚಾಲಕರು ಮರಿಯಮ್ಮನಹಳ್ಳಿಯವರು, ವಿಜಯನಗರ ಜಿಲ್ಲೆಯ ಮೂರು ನಾಟಕಗಳ ನಿರ್ದೇಶಕರು ಮರಿಯಮ್ಮನಹಳ್ಳಿಯವರು, ನಾಟಕೋತ್ಸವ ನಡೆಯು ಸ್ಥಳ ಕೂಡ ಮರಿಯಮ್ಮನಹಳ್ಳಿಯಲ್ಲೇ!! ಹೀಗಾದಲ್ಲಿ ಸಾಂಸ್ಕೃತಿಕತೆಯನ್ನ ಜಿಲ್ಲಾ ವ್ಯಾಪಿ ಹೇಗೆ ಹರಡುತ್ತಾರೆ? ಇಲ್ಲಾ ಹೆಸರನ್ನಾದರೂ ಬದಲಾಯಿಸಿ ಬಿಡಿ ಮರಿಯಮ್ಮನಹಳ್ಳಿಗೆ ಸೀಮಿತವಾಗಿ ಕಾರ್ಯಕ್ರಮ ಮಾಡುವುದಾದರೆ ಇಡೀ ಜಿಲ್ಲೆಯ ಹೆಸರೇಕೆ ?
ಮರಿಯಮ್ಮನಹಳ್ಳಿಯ ಕಲಾವಿದರು ಅಷ್ಟೇ ಸಂಚಾಲಕರು, ನಾಟಕದ ನಿರ್ದೇಶಕರು, ಇನ್ನೂಳಿದ ತಾಲೂಕಿನ ಕಲಾವಿದರು ಸಂಗೀತಗಾರರು, ನೃತ್ಯಗಾರರು, ರಂಗಸಜ್ಜಿಕೆ ತಯಾರಿ, ಬೆಳಕಿನ ವಿನ್ಯಾಸಕಾರರು ಆಗಲು ಮಾತ್ರ ಯೋಗ್ಯತೆ ಉಳ್ಳವರಾ.? ಮರಿಯಮ್ಮನಹಳ್ಳಿಯ ಕಲಾವಿದರಿಗೆ ಮಾತ್ರಾ ಹಸಿವಿದೆ, ಹೆಂಡತಿ ಮಕ್ಕಳು ಇದ್ದಾರೆ, ತಂದೆ ತಾಯಿಯರು ಇದ್ದಾರೆ, ಅವರು ಮಾತ್ರ ಮನುಷ್ಯರಾ.?
ಕೊನೆಯದಾಗಿ ಒಂದು ಮಾತು
ರಂಗಭೂಮಿ ಈಗ ದುರಿತ ಕಾಲದಲ್ಲಿದೆ ಸೋಂಕಿನ ಕಾರಣ ಹಸಿವು,ಜನರ ಆಸಕ್ತಿಗಳು ಬದಲಾಗಿವೆ ರಂಗಭೂಮಿಗೆ ಹೊಸ ಪ್ರೇಕ್ಷಕರ ಕೊರತೆ ಇದೆ ರಂಗವನ್ನೇ ನಂಬಿ ಬದುಕುವವರ ಸ್ಥಿತಿ ಗಂಭೀರವಾಗುತ್ತಿದೆ.ರಂಗಕಲೆ ಸಮೂಹದ ಕೂಗಾಗಿ ಹೊರಹೊಮ್ಮಬೇಕಿದೆ ಮನೋರಂಜನೆಯಿಂದಾಚೆಗೆ ರಂಗಭೂಮಿ ಮಾಡಬೇಕಾದ ಅನೇಕ ಜವಾಬ್ದಾರಿಗಳು ಇವೆ . ರಂಗಭೂಮಿ ಈಗ ನಡೆಯುತ್ತಿರುವ ಹಾದಿ ಪ್ರೇಕ್ಷಕರಿಗೆ ಬೇಸರವಾಗಿದೆ ಹೊಸತನಕ್ಕಾಗಿ ಹಂಬಲಿಸುತ್ತಿದ್ದಾನೆ ಪ್ರೇಕ್ಷಕ ಪ್ರಭು ! ಈ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನ ಈ ಕಾರ್ಯಕ್ರಮದ ಮೂಲಕ ಕಂಡುಕೊಂಡಲ್ಲಿ ಸಾರ್ಥಕವಾದಿತು!

ವರದಿ. ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend