ಜನಾಗ್ರಹ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಿಎಸ್ ಪಿ ಯಿಂದ ಮನವಿ.
ಸಿಂಧನೂರು : ಸ್ವತಂತ್ರ ಭಾರತವನ್ನು ಜಾತಿಮುಕ್ತ ಮತ್ತು ಬಡತನ ಮುಕ್ತಸಮಾಜವನ್ನಾಗಿ ನಿರ್ಮಿಸುವುದು ಬಾಬಾ ಸಾಹೇಬ್ ಅಂಬೇಡ್ಕರರವರ ಕನಸಾಗಿತ್ತು.ಸಂವಿಧಾನದ ಆಶಯದಂತೆ ಬಹುಜನ ಸಮಾಜಕ್ಕೆ ದಕ್ಕಬೇಕಾದ ಮೂಲಭೂತ ಹಕ್ಕು ಮತ್ತು ಅಧಿಕಾರವನ್ನುಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಿ ಜನಾಗ್ರಹ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಹನುಮಂತರಾಯ ಕಪಗಲ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಪಾಟೀಲ್ ಮತ್ತು ಹುಮನಾಬಾದ್ ತಹಸೀಲ್ದಾರ ಪ್ರದೀಪ್ ಕುಮಾರ್ ಹಿರೇಮಠ ವಿರುದ್ಧ ಕ್ರಮಕ್ಕೆ ಒತ್ತಾಯ. ಬೀದರ ಬಿಎಸ್ಪಿಪದಾಧಿಕಾರಿಗಳ ವಿರುದ್ಧ ಹುಮನಾಬಾದ ಠಾಣೆಯಲ್ಲಿ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು,ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಪ್ರಕಾರ ಎಸ್ಸಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ, ಎಸ್ಸಿ ಎಸ್ಟಿ ಮೀಸಲಾತಿ 18% ಎಸ್ಟಿ ಮೀಸಲಾತಿ 7.5 % ಮೀಸಲಾತಿ ಮಾಡಬೇಕು,ಎಸ್ಸಿ ಎಸ್ಟಿ ನೌಕರರ ಮುಂಬಡ್ತಿ ಮೀಸಲಾತಿ ರಕ್ಷಣೆ,ಖಾಸಗಿ ಕ್ಷೇತ್ರದಲ್ಲಿ ಓಬಿಸಿ ಎಸ್ಸಿ-ಎಸ್ಟಿ ಜನಾಂಗಕ್ಕೆ ಮೀಸಲಾತಿ,ಬಗರ್ ಹುಕುಂ ಸಾಗುವಳಿ ಸಕ್ರಮ, ಸರ್ಕಾರಿ ಜಮೀನಿನಲ್ಲಿ ಗುಡಿಸಲುಮನೆ ಕಟ್ಟಿಕೊಂಡಿರುವ ಬಡವರಿಗೆ 94.c 94.CE ಮತ್ತು ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಕಾಯ್ದಿರಿಸಬೇಕು,ವಿಶೇಷ ಅಭಿಯಾನದ ಮೂಲಕ ಬ್ಯಾಕ್ ಲಾಗ್ ಹುದ್ದೆ ತುಂಬಬೇಕು, ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಮತ್ತು ಅವರಿಗೆ ನಾಗರಿಕ ಸೌಲಭ್ಯಕ್ಕಾಗಿ ಒತ್ತಾಯ, ಪೌರಕಾರ್ಮಿಕರ, ಗ್ರಾಮ ಸಹಾಯಕರ, ಅತಿಥಿ ಉಪನ್ಯಾಸಕರ,ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ, ಬಿಸಿಯೂಟ ನೌಕರರ, ಸೇರಿದಂತೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಸೇವೆ ಕಾಯಂಗೆ ಇನ್ನೂ ಅನೇಕ ಬೇಡಿಕೆಗಳಿಗೆ ಆಗ್ರಹಿಸಿ ಬೀದರ್ ನಲ್ಲಿ ಜನಾಗ್ರಹ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಹನುಮಂತರಾಯ ಕಪ್ಪಗಲ್ ಜಿಲ್ಲಾಧ್ಯಕ್ಷರು, ನರಸಪ್ಪ ರಾಯಚೂರು ರಾಜ್ಯ ಕಾರ್ಯದರ್ಶಿ,ಹುಲುಗಪ್ಪ ಮಲ್ಕಾಪುರು ತಾಲೂಕು ಅಧ್ಯಕ್ಷರು ಸಿಂಧನೂರು, ಹನುಮಂತಪ್ಪ ಬೂದಿವಾಳ ಕ್ಯಾಂಪ್ ಉಪಾಧ್ಯಕ್ಷರು,
ದೊಡ್ಡಬಸವ,ಚಂದ್ರು ಮಡಿವಾಳ ,ನರೇಂದ್ರ ಆರ್ಯ ಭಾಗಿಯಾಗಿದ್ದರು…
ವರದಿ.ದುಗ್ಗಪ್ಪ sindanuಜನಾಗ್ರಹ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಿಎಸ್ ಪಿ ಯಿಂದ ಮನವಿ.

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030