;

ಬೆಲ್ಲದ ನಗರಿಗೆ ಬಂತು ವಿಭಿನ್ನ ಸರ್ಕಾರಿ ಕಟ್ಟಡಗಳ ಉದ್ಘಾಟನೆ ಸಮಾರಂಭ…!!!

ಸ್ಲಗ್ :- ಬೆಲ್ಲದ ನಗರಿಗೆ ಬಂತು ವಿಭಿನ್ನ ಸರ್ಕಾರಿ ಕಟ್ಟಡಗಳ ಉದ್ಘಾಟನೆ ಸಮಾರಂಭ.

ವಾಯ್ಸ್ ಓವರ್ :- ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪಟ್ಟಣ ಎಂದರೆ ಸಾಕು ಮುಂಬೈ ಮಾರ್ಕೆಟನಲ್ಲಿ ಹೇಳುವಷ್ಟು ಹೆಸರು ವಾಸಿಯಾದ ಭಾವೈಕ್ಯ ಸ್ಥಳ. ವಾಣಿಜ್ಯ,ಪಾರಿಜಾತ,ಹೀಗೆ ಹಲವಾರುಗಳಲ್ಲಿ ಹೆಸರಾದ ಮಹಾಲಿಂಗಪುರ ಪಟ್ಟಣ ಈಗ ಅಭಿವೃದ್ಧಿಗೂ ಒಂದು ಹೆಜ್ಜೆ ಮುಂದಿಟ್ಟು ಜನರ ಪ್ರೀತಿಗೆ ಪಾತ್ರರಾದ ಪುರಸಭೆ ಅಧ್ಯಕ್ಷ ಶ್ರೀಮತಿ ಸ್ನೇಹಲ ಶಿವಾನಂದ ಅಂಗಡಿ ಅವರು ಪಟ್ಟಣದ ಬಸ್ ನಿಲ್ದಾಣ ಹತ್ತಿರ ಪುರಸಭೆ ಅನುದಾನದಲ್ಲಿ ಮಹಾಲಿಂಗೇಶ್ವರ ತಿನಿಸು ಕಟ್ಟೆ ನಿರ್ಮಿಸಿ ಸಾರ್ವಜನಿಕ ಗಮನ ಸೇಳೆದಿದ್ದಾರೆ ಅದರಂತೆ ಮಹಾಲಿಂಗಪುರ ಜಾನಪದ ಪಾರಿಜಾತದ ಬುನಾದಿಯಾಗಿದ್ದ ಕೌಜಲಗಿ ನಿಂಗಮ್ಮನ ರಂಗ ಮಂದಿರ ನಿರ್ಮಾಣವಾಗಿದ್ದು ಇದರ ಜೊತೆ ಶಿಕ್ಷಣ ಇಲಾಖೆಯ ನೂತನ ಪದವಿ ಪೂರ್ವ ಕಾಲೇಜು ನಿರ್ಮಾಣವಾಗಿ ನಿಂತು ಉದ್ಘಾಟನೆಗೆ ಮದುವನಗಿತ್ತಿಯಂತೆ ಕಾಣುತ್ತಿವೆ ಮತ್ತು ಬಹುದಿನಗಳ ಬೇಡಿಕೆಯಾಗಿದ್ದ ಸ್ಮಶಾನದ ಅಭಿವೃದ್ಧಿ ಪಡಿಸಿ ಅಲ್ಲಿ ಅತ್ಯಾಧುನಿಕ ಲೈಟ್ ಗಳನ್ನು ಅಳವಡಿಸಿದ್ದು ಇವುಗಳು ಕೂಡ ಇದೆ ಹನ್ನೆರಡನೆ ತಾರೀಖು ಶನಿವಾರ ಉದ್ಘಾಟನೆಯಾಗಲಿವೆ ಎಂದು ಪುರಸಭೆ ಹಾಲಿ ಸದಸ್ಯ ಮಾಜಿ ಅಧ್ಯಕ್ಷರಾದ ಶೇಖರ ಅಂಗಡಿಯವರು ತಿಳಿಸಿದ್ದಾರೆ ನೀಲಕಂಠೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಪಕ್ಷದ ಮುಖಂಡರುಗಳು ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲ್ಲಿದ್ದು ಸರ್ಕಾರದ ಹಲಾವಾರು ಸಚಿವರು ಶಾಸಕರು ಭಾಗವಹಿಸಲ್ಲಿದ್ದಾರೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಬಸನಗೌಡ ಪಾಟೀಲ,ಅಶೋಕಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೋಳಿ,
ಸಜನಸಾಬ ಪೆಂಡಾರಿ,
ಜಿ.ಎಸ್.ಗೊಂಬಿ,
ಶ್ರೀಮಂತ ಹಳ್ಳಿ,
ಅಶೋಕ ಅಂಗಡಿ,
ಇನ್ನೂ ಅನೇಕರು ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು.

 

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;