ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಮಾರ್ಚ್ 8 ರಂದು ಮಂಗಳವಾರ 2022 ರ ಮಹಿಳಾ ದಿನಾಚರಣೆಯನ್ನು ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ, ‘ಇಟ್ಟಿಗಿ ಗ್ರಾಮಪಂಚಾಯಿತಿ &ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ “ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗ್ರಾ ಪಂ ಅಧ್ಯಕ್ಷ ರಾದ ಶ್ರೀಮತಿ ಎಂ ಪುಷ್ಪಾಶಿವಪ್ಪ & ಸಂಜೀವಿನಿ ಒಕ್ಕೂಟ ದ ಅಧ್ಯಕ್ಷರಾದ ಶ್ರೀಮತಿ ಅಂಬಿಕಾ ಪಿಡಿಒ ಉಮೇಶ್ ಸರ್ ಕಾರ್ಯದರ್ಶಿ ಅಲ್ಲಭಕ್ಷಿ ಸರ್ ಗ್ರಾ ಪಂ ಸದಸ್ಯರಾದ ದ್ಯಾಮಕ್ಕ, ಪಾರ್ವತಮ್ಮ, ವಿನೋದ & ಎಲ್ ಸಿ ಆರ್ ಪಿ & ಎಂ ಬಿ ಕೆ ಹಾಗೂ ಅಂಗನವಾಡಿ &ಆಶಾ ಕಾರ್ಯಕರ್ತೆಯರು ಉದ್ಘಾಟನೆ ಮಾಡಿದರು. ಮಹಿಳಾ ದಿನಾಚರಣೆಯಂದು ನಾವು ನೆನೆಸಿಕೊಳ್ಳುವ ಧೀರ, ದಿಟ್ಟ ಮಹಿಳೆಯರ ಸಾಲಿನಲ್ಲಿ ಮಹಾಭಾರತದ ಪ್ರಮುಖ ಪಾತ್ರಧಾರಿ ದ್ರೌಪದಿ ಕೂಡ ಇದ್ದಾಳೆ. ದ್ರೌಪದಿಯ ಹಠ, ಛಲ ಕೌರವರ ಸಂಹಾರಕ್ಕೂ ಕಾರಣವಾಯಿತು. ಮಹಿಳೆ ತಾನು ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಲ್ಲಳು ಎನ್ನುವುದಕ್ಕೆ ದ್ರೌಪದಿ ಉತ್ತಮ ಉದಾಹರಣೆಯೆಂದರೆ ತಪ್ಪಾಗಲಾರದು.ದುಷ್ಟ ಸಮಾಜದ ಮುಂದೆ ಧ್ವನಿ ಎತ್ತಿದವರು:
ಆ ಕಾಲದಲ್ಲೂ ದುರುದ್ದೇಶಪೂರಿತ ಸಮಾಜದ ಮುಂದೆ ಧ್ವನಿ ಎತ್ತಿದ ದ್ರೌಪದಿ ಇತಿಹಾಸದ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬಳು ಎಂದು ಪರಿಗಣಿಸಲಾಗುತ್ತದೆ. ದ್ರೌಪದಿ ತನ್ನ ಜೀವನದಲ್ಲಿ ಸಾಕಷ್ಟು ಹೋರಾಟವನ್ನು ಎದುರಿಸಬೇಕಾಯಿತು. ಎಷ್ಟೋ ಬಾರಿ ಸಮಾಜದ ಮೂದಲಿಕೆಗಳನ್ನು ಕೇಳಬೇಕಾಗಿ ಬಂದರೂ ಆಕೆ ತನ್ನ ಸ್ಥೈರ್ಯವನ್ನು ಎಂದಿಗೂ ಕಳೆದುಕೊಂಡವಳಲ್ಲ. ದ್ರೌಪದಿ ತನ್ನ ಜೀವನದಲ್ಲಿ ಯಾರನ್ನೂ ಬಿಟ್ಟುಕೊಡಲಿಲ್ಲ ಮತ್ತು ಯಾರಿಗೂ ಹೆದರಲಿಲ್ಲ. ಸಭೆಯಲ್ಲಿ ದ್ರೌಪದಿಯನ್ನು ನಿಶ್ಯಸ್ತ್ರಗೊಳಿಸುವ ದಿಟ್ಟತನ ತೋರಿದಾಗ ತನಗಾಗಿ ಧ್ವನಿ ಎತ್ತಿ ಅಲ್ಲಿದ್ದ ಮಹಾನ್ ಯೋಧರಾದ ಪಿತಾಮಹ ಭೀಷ್ಮ, ದ್ರೋಣಾಚಾರ್ಯ, ಕೃಪಾಚಾರ್ಯರ ಆತ್ಮವನ್ನು ಜಾಗೃತಗೊಳಿಸುವ ಕೆಲಸ ಮಾಡಿದಳು. ಹೆಣ್ಣಿನ ಗೌರವಕ್ಕಾಗಿ ಯಜಮಾನನ ಮುಂದೆ ಏಕಾಂಗಿಯಾಗಿ ಧ್ವನಿ ಎತ್ತಿದವಳು.ಆದರೆ, ಮಹಿಳಾ ಸಬಲೀಕರಣದ ಈ ಪ್ರವೃತ್ತಿ ಹೊಸದಲ್ಲ. ಆ ಕಾಲದಲ್ಲೂ ಮಹಿಳೆಯರು ತಮ್ಮ ಬುದ್ದಿವಂತಿಕೆ ಹಾಗೂ ಧೈರ್ಯದಿಂದ ಹೇಗೆ ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ ಎಂಬುದು ಇತಿಹಾಸವನ್ನು ಕೆದಕಿದರೆ ತಿಳಿಯುತ್ತದೆ. ಈ ಲೇಖನದಲ್ಲಿ ನಾವು ಅಂತಹ ಧೈರ್ಯಶಾಲಿ ಮತ್ತು ದಿಟ್ಟ ಮಹಿಳೆಯ ಬಗ್ಗೆ ಮಾತನಾಡುತ್ತಿದ್ದೇವೆ, ಅವರು ತಮ್ಮದೇ ಆದ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ : ಮಾರ್ಚ್ 8 ರಂದು ಅಮೆರಿಕಾದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಮೆರವಣಿಗೆ ನಡೆಸಿದ್ದರು. ಅದರ ನಂತರ ಮುಂದಿನ ವರ್ಷ ಸಮಾಜವಾದಿ ಪಕ್ಷವು ಈ ದಿನದಂದೇ ಮಹಿಳಾ ದಿನವನ್ನು ಆಚರಿಸಲು ಘೋಷಿಸಿತು. 1917 ರಲ್ಲಿ ಮೊದಲ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಮಹಿಳೆಯರು ಆಹಾರಕ್ಕಾಗಿ ಮುಷ್ಕರ ನಡೆಸಿದ್ದರು. ಯುದ್ಧದ ಬಗ್ಗೆ ತಮ್ಮ ಅಭಿಪ್ರಾಯ ಮುಂದಿಟ್ಟಿದ್ದರು. ಇದರ ನಂತರ ಚಕ್ರವರ್ತಿ ನಿಕೋಲಸ್ ರಾಜೀನಾಮೆ ನೀಡಿದರು ಮತ್ತು ಮಹಿಳೆಯರು ಮತದಾನದ ಹಕ್ಕನ್ನು ಪಡೆದರು. ಇದರ ಹಿನ್ನಲೆಯಲ್ಲಿ ಯುರೋಪ್ನಲ್ಲಿ ಮಹಿಳೆಯರು ಕೆಲವು ದಿನಗಳ ನಂತರ ಮಾರ್ಚ್ 8 ರಂದು ಶಾಂತಿ ಕಾರ್ಯಕರ್ತರನ್ನು ಬೆಂಬಲಿಸಲು ರ್ಯಾಲಿಗಳನ್ನು ನಡೆಸಿದರು. ಈ ಕಾರಣಕ್ಕಾಗಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಪ್ರಾರಂಭಿಸಲಾಯಿತು. ನಂತರ 1975 ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುವ ಘೋಷಣೆ ಮಾಡಿತು.ಪ್ರಸಕ್ತ ಕಾಲದಲ್ಲಿ ಮಹಿಳೆಯರು ಅಡುಗೆ ಮನೆಗಷ್ಟೆ ಸೀಮಿತವಾಗದೆ ಬಾಹ್ಯಕಾಶದವರೆಗೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಮ್ಮ ಪತ್ರಕೆಕಡೆಯಿಂದ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು….

ವರದಿ.ಪ್ರಕಾಶ್, ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
