ಕೂಡ್ಲಿಗಿ:ಶ್ರೀಕಂಪಳ ದೇವರ ಭಕ್ತರ ಪಾದಾಯಾತ್ರೆ- ವಿಜಯ ನಗರ ಜಿಲ್ಲೆ ಹಂಪಿ ಸಮೀಪದ ತುಂಗಭದ್ರಾ ನದಿ ತಟದ ಚಕ್ರತೀರ್ಥ ದಲ್ಲಿ ಮ್ಯಾಸ ಬೇಡ ( ಮ್ಯಾಸ ನಾಯಕ ) ಬುಡಕಟ್ಟು ಸಮುದಾಯ ಗಳ ಶ್ರೀ ಕಂಪಳ ದೇವರು ಹಾಗು ಪಾಪೇ ದೇವರ ಐತಿಹಾಸಿಕ ಗಂಗಾ ಪೂಜೆಗೆ ಚಿತ್ರದುರ್ಗ ,ಚಳ್ಳಕೆರೆ , ಮೊಳಕಾಲ್ಮೂರು , ಬಳ್ಳಾರಿ , ಸಂಡೂರು,ಜಗಳೂರು , ಕೂಡ್ಲಿಗಿ , ಹೊಸಪೇಟೆ ,ತಾಲ್ಲೂಕುಗಳಿಂದ ಸಾವಿರಾರು ಜನರು ಆಗಮಿಸಿದ್ದರು. ಜಗಳೂರು ತಾಲ್ಲೂಕಿನಿಂದ ಮಾಜಿ ಶಾಸಕರು ಹೆಚ್.ಪಿ.ರಾಜೇಶ್ ನೇತೃತ್ವದಲ್ಲಿ ನೂರಾರು ಮುಖಂಡರು ಭಾಗವಹಿಸಿದ್ದರು.
ಈ ವೇಳೆ ಮಾಜಿ ಸಚಿವರು ಹಾಲಿ ಶಾಸಕರಾದ ಇ.ತುಕಾರಾಂ , ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ .ನೇರಲಗುಂಟೆ ಮಾಜಿ ಜಿ.ಪಂ.ಸದಸ್ಯೆ ಶ್ರೀ ಮತಿ ಶಶಿರೇಖಾ ಮುತ್ತಯ್ಯ , ಉಪವಿಭಾಗ ಅಧಿಕಾರಿ ಲೋಕೇಶ್ , ಸಾಹಿತಿ ವಿರುಪಾಕ್ಷಪ್ಪ ಪೂಜಾರ್ , ಬುಡಕಟ್ಟು ಸಮಿತಿ ಅಧ್ಯಕ್ಷರು ಗರೇಗಲ್ ಪಾಪಯ್ಯ ಕಾರ್ಯದರ್ಶಿ ಪ್ರಸಾದ್ ದೊಡ್ಡಮನಿ , ಸೇರಿದಂತೆ ಜಗಳೂರು ತಾಲ್ಲೂಕಿನ ಹಲವು ಮುಖಂಡರು ಭಾಗವಹಿಸಿದ್ದರು *ಕೂಡ್ಲಿಗಿ:ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಂಡ ನಾಗರೀಕರು*- ಕೂಡ್ಲಿಗಿ ಪಟ್ಟಣದಲ್ಲಿ ಶ್ರೀಕಂಪಳರಂಗಸ್ವಾಮಿ ದೇವರ ಉತ್ಸವ ಹಾಗೂ ಭಕ್ತರ ಯಾತ್ರೆಯನ್ನು ಬಹು ಶ್ರದ್ಧೆಭಕ್ತಿಯಿಂದ ಬರಮಾಡಿಕೊಳ್ಳಲಾಯಿತು.ಹಂಪಿಯಿಂದ ಆಗಮಿಸಿದ ಭಕ್ತರ ಯಾತ್ರೆಯು ಮಾ 7ರಂದು ಬೆಳಿಗ್ಗೆ ಕೂಡ್ಲಿಗಿ ಪಟ್ಟಣ ಪ್ರವೇಸಿತು, ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ, ಹಾಗೂ ಉಪಾಧ್ಯಕ್ಷ ಪಾಪಯ್ಯ,ಪಪಂ ಉಪಾಧ್ಯಕ್ಷರು, ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಜನಪ್ರತಿನಿಧಿಗಳು,ವ ಚಂದ್ರಶೇಖರ ಪಟ್ಟದ ಹಿರಿಯನಾಗರೀಕರು, ಸಮುದಾದ ಹಿರಿಯರು ಮುಖಂಡರು.ಯುವ ಮುಖಂಡರು, ನಾಗರೀಕರು ಯಾತ್ರೆಯ ಮೆರವಣಿಗೆಯನ್ನು ಭಕ್ತಿ ಶ್ರದ್ಧೆಯಿಂದ ಬರಮಾಡಿಕೊಂಡರು.ನಂತರ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆಗೈದು,ನಂತರ ಪಟ್ಟಣದ ಪ್ರಮುಖ ರಸ್ಥೆಯ ಮೂಲಕ ಹಾಗೂ ಮದಕರಿ ವೃತ್ತ, ಶ್ರೀ ಕೊತ್ತಲಾಂಜನೇಯ ಪಾದಗಟ್ಟೆ ಮೂಲಕ ಚಿತ್ರದುರ್ಗ ರಸ್ತೆಯ ಮೂಲಕ ಬೀಳ್ಕೊಡಲಾಯಿತು

ವರದಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
