ಇಂದು ಪರಶುರಾಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಉಪನ್ಯಾಸ ಕಾರ್ಯಕ್ರಮ
ಮಹಿಳಾ ದೌರ್ಜನ್ಯ ಮತ್ತು ಕಾನೂನು ವಿಷಯವಾಗಿ ಪರಶುರಾಮಪುರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಮತಿ ಸ್ವಾತಿ ಡಿಸಿಯವರು ವಿಷಯಕ್ಕೆ ಸಂಬಂಧಿಸಿದಂತೆ ಸದರಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಹಿಳೆಯನ್ನು ಸಮಾಜ ನೋಡುವ ದೃಷ್ಟಿಕೋನ ಸಮಾಜದಲ್ಲಿ ಮಹಿಳೆಯ ಮೇಲಾಗುತ್ತಿರುವ ಶೋಷಣೆಗಳು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮೊಬೈಲ್ನಿಂದ ಹಾಳಾಗುತ್ತಿರುವ ಬಗ್ಗೆ ಮುಂದುವರೆದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಬಗ್ಗೆ ಹಾಗೂ ಕಾನೂನಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಹಾಗೆಯೇ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ!! ರವಿಕುಮಾರ್ ಅವರು ಮಾತನಾಡುತ್ತ ಸ್ತ್ರೀ ತಾಯಿ ಸ್ವರೂಪಿಯಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇತಿಹಾಸದ ಉಪನ್ಯಾಸಕರಾದ ಶ್ರೀಮತಿ ಶ್ರೀದೇವಿ ಅವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಸುಪ್ರೀತಾ ಗೌತಮಿ ರಾಜೇಶ್ವರಿ ರಂಜಿತಾ ಹರೀಶ್ ಮುಂತಾದವರು ಮಾತನಾಡಿದರು. ಸಮಾಜಶಾಸ್ತ್ರದ ಉಪನ್ಯಾಸಕರಾದ ಗೌಡಪ್ಪನವರ ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿನಿ ಸೌಮ್ಯ ಅವರು ವಂದನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರಾದ ಸಮಾಜಶಾಸ್ತ್ರದ ಕೆ ಶ್ರೀನಿವಾಸ್ ಎನ್ಎಸ್ಎಸ್ ಅಧಿಕಾರಿಯಾದ ವೀರಭದ್ರಪ್ಪ ಕನ್ನಡ ವಿಭಾಗದ ಲಿಂಗೇಶ್ವರ, ಸತೀಶ್ , ವಾಣಿಜ್ಯಶಾಸ್ತ್ರ ಉಪನ್ಯಾಸಕರದ ಅಜಯ್ ಯಾದವ್ ಮಂಜುನಾಥ್ ಮಹಮ್ಮದ್ ಸಾದತ್ ಬಿಟಿ ಭರತ್ ರೋಹಿತ್ ರಜನೀಶ್ ಗೌಡ ಚಿತ್ತಯ್ಯ ಕಲಾವತಿ ಮುಂತಾದವರು ಉಪಸ್ಥಿತರಿದ್ದರು…

ವರದಿ.ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
