ಮಹಾಲಿಂಗಪುರ ನಗರದ ಮುಧೋಳ್-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಕಬ್ಬಿನ ಟ್ರ್ಯಾಕ್ಟರ್ ಪಲ್ಟಿ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಗರದ ಅಂಬೇಡ್ಕರ್ ವೃತ್ತದ ಸಮೀಪ ಕಬ್ಬಿನ ಟ್ರ್ಯಾಕ್ಟರ್ ಪಲ್ಟಿಯಾಗಿ ಮುಧೋಳ್-ನಿಪ್ಪಾಣಿ ರಾಜ್ಯ ಹೆದ್ದಾರಿ ಕೆಲ ಹೊತ್ತು ಬಂದ್ ಆಗಿದ್ದು ಸಾರ್ವಜನಿಕ ವಾಹನ ಸವಾರರು ಸಂಚಾರಿಸಲು ಪರದಾಡುವಂತಾಯಿತು.
ಜಿಲ್ಲೆಯಲ್ಲಿ ಕೆಲವು ತಾಲ್ಲೂಕಿನಾದ್ಯಾಂತ ಇರುವ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲು ಬಳಸುವ ಟ್ರ್ಯಾಕ್ಟರಗಳಿಗೆ ಕೆಲವು ಅವೈಜ್ಞಾನಿಕವಾಗಿ ಟ್ರ್ಯಾಲಿಗಳನ್ನು(ತ್ರಿಕಾಟ) ಬಳಸುತಿದ್ದು ಬೇಕಾಬಿಟ್ಟಿಯಾಗಿ ಕಬ್ಬು ತುಂಬಿ ಟ್ರ್ಯಾಕ್ಟರ್ ಚಾಲಕರು ಅಜಾಗೃಕತೆಯಾಗಿ ಚಲಾಯಿಸುವುದರಿಂದ ಇಂತ ಘಟನೆಗಳು ನಡೆಯುತ್ತಿರುವದು ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡು ವಾಹನ ಚಾಲಕರಿಗೆ ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಬೇಕು.

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
