ಇಂದು ಹೊಸಪೇಟೆಯಲ್ಲಿ ಜೆಸಿಸ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನೆರವೇರಿಸಲಾಯಿತು.ಮುಖ್ಯ ಅತಿಥಿಯಾಗಿ ಬಿಎನ್ಎಸ್ ಮೃತ್ಯುಂಜಯ ನಿವೃತ್ತ ಮುಖ್ಯೋಪಾಧ್ಯಾಯರು ಡಣಾಪುರ, ನಾಗರಾಜ್ CRP ಡಾಕ್ಟರ್ ಕೆಎಚ್ ಗುರುಬಸವರಾಜ್ ಚೇರ್ಮನ್ ಆಫ್ ಜೆಸಿಸ್ ಸ್ಕೂಲ್, ಡಾಕ್ಟರ್ ಬಿವಿ ಭಟ್ ಕಾರ್ಯದರ್ಶಿ ಜೆಎಸ್ಎಸ್ ಶಾಲೆ,ಕೆ ಗಂಗಾಧರ್ ಫೌಂಡರ್ ಆಫ್ ಜೆಸಿಸ್ ಶಾಲೆ, ಕಮಲ ದಿಕ್ಷಿತ್ ಮುಖ್ಯೋಪಾಧ್ಯಾಯರು, ಉಪಸ್ಥಿತರಿದ್ದರು.

ಅತ್ಯುತ್ತಮ ಯಶಸ್ವಿಯಾಗಿ ಮಕ್ಕಳು ಮತ್ತು ಶಿಕ್ಷಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು, ಇಂತಹ ವಸ್ತುಪ್ರದರ್ಶನಗಳು ಮಕ್ಕಳ ಜ್ಞಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವ ಜೊತೆಗೆ ಅನೇಕರು ಮಕ್ಕಳ ವಿಜ್ಞಾನ ಪ್ರದರ್ಶನವನ್ನು ಕಂಡು ಪ್ರೋತ್ಸಾಹಿಸಿದರು ಅನೇಕ ಶಾಲೆಗಳಿಂದಲೇ ಮಕ್ಕಳು ಆಗಮಿಸಿದ್ದರು ವಿಶೇಷವೆಂದರೆ ಪರಿಸರ ಭೌಗೋಳಿಕ,ವಿದ್ಯುತ್ ಉತ್ಪಾದನಾ ವಿಧಾನಗಳು,

ವಿದ್ಯುತ್ತಿನ ಹೊಸ ಹೊಸ ಪ್ರಯೋಗಗಳು ಕಂಡುಬಂತು ಆಹಾರ ಪದ್ಧತಿಗಳು ಮತ್ತು ನೃತ್ಯದ ಮೂಲಕ ಪರಿಸರವನ್ನು ಹೇಗೆ ಸಂರಕ್ಷಿಸಬೇಕೆಂದು ಇಲ್ಲಿ ತಿಳಿಸಲಾಯಿತು,ಹಾಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಬಿಟಿ ಮಂಜುನಾಥರು ಈ ವಿಜ್ಞಾನ ವಸ್ತು ಪ್ರದರ್ಶನಕ್ಕೆ ವೀಕ್ಷಿಸಿ ಅತ್ಯುತ್ತಮ ಎಂದು ಶ್ಲಾಘಿನೆಯನ್ನು ವ್ಯಕ್ತಪಡಿಸಿದರು..
ವರದಿ. ಗಣೇಶ್, ಬಿ, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
