ಇಟ್ಟಿಗಿಯಲ್ಲಿ ಜರುಗಿದ ಕಲ್ಲೇಶ್ವರಸ್ವಾಮಿಯ ರಥೋತ್ಸವ ಜರುಗಿತು…!!!

ಇಟ್ಟಿಗಿಯಲ್ಲಿ ಜರುಗಿದ ಕಲ್ಲೇಶ್ವರಸ್ವಾಮಿಯ ರಥೋತ್ಸವ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ದಿನಾಂಕ:02:03:2022 ರ ಬುಧವಾರದಂದು ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೇರವೇರಿತು. ಕಳೆದ ಎರಡು ವರ್ಷಗಳಿಂದ ಕರೋನ ಮಹಾಮಾರಿಯಿಂದ ಸ್ಥಗಿತಗೊಂಡದ್ದ ಊರಿನ ಪ್ರಮುಖ ಆಚರಣೆಗಳಿಗೆ ಈಗೀಗ ಮುಕ್ತಿ ಸಿಕ್ಕಾಂತಾಗಿದೆ. ಮುಂಜಾನೆಯಿಂದ ಶುರುವಾದ ವೀರಭದ್ರೇಶ್ವರ ದೇವತಾ ಕಾರ್ಯ ಸ್ವಮೇಳ ವಾದ್ಯ ಹಾಗೂ ವೀರಗಾಸೆ ನಂದಿಕೋಲಿನ ಕುಣಿತದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಗ್ರಾಮದ ಆರಾಧ್ಯದೈವವಾದ ಕಲ್ಲೇಶ್ವರ ಸ್ವಾಮಿಗೆ ಅಭಿಷೇಕ, ವಿಷೇಶವಾಗಿ ಅಲಂಕಾರಗಳೊಂದಿಗೆ ಭಕ್ತರು ದೇವರ ದರ್ಶನ ಪಡೆದರು.

ಮತ್ತೆ ಸಂಜೆಯಾಗುತ್ತಲೆ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ಸ್ವಾಮಿಯ ಪಟಾಕ್ಷಿ ಹರಾಜು ಕಾರ್ಯಕ್ರಮ ನಡೆಯಿತು.ಭಕ್ತರು ಹರಾಜಿನಲ್ಲಿ ಭಾಗವಹಿಸಿ ಕೊನೆಗೆ ಹೆಚ್ ಬಿ ಹಳ್ಳಿ ನಾಗರಾಜ್ ಅವರಿಗೆ 77 ಸಾವಿರಕ್ಕೆ ರಥೋತ್ಸವದ ಪಟಾಕ್ಷಿ ಹರಾಜು ಆಯಿತು.ನಂತರ ಕಲ್ಲೇಶ್ವರ ಸ್ವಾಮಿಯ ರಥವನ್ನು ಗ್ರಾಮದ ಭಕ್ತರು ಎಳೆದು ಸಂಭ್ರಮಿಸಿದರು. ಪ್ರತಿ ವರ್ಷವೂ ಇದೇ ರೀತಿಯಲ್ಲಿ ರಥೋತ್ಸವ ಜರುಗಿ ಕಲ್ಲೇಶ್ವರ ಸ್ವಾಮಿಯ ಕೃಪೆಯಿಂದ ಸಕಾಲಕ್ಕೆ ಮಳೆ-ಬೆಳೆ ಚೆನ್ನಾಗಿ ಆಗಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend