ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕುಂಬಳಗುಂಟೆ ಯಲ್ಲಿ ಕಾಯಕಶರಣರ ದಿನಾಚರಣೆಯನ್ನು ಆಚರಣೆ…!!!

ಕೂಡ್ಲಿಗಿ ತಾಲೂಕಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕುಂಬಳಗುಂಟೆ ಯಲ್ಲಿ ಕಾಯಕಶರಣರ ದಿನಾಚರಣೆಯನ್ನು ಆಚರಿಸಲಾಯಿತು.
ಮಹಾಶಿವರಾತ್ರಿಯ ಈ ಸಂದರ್ಭದಲ್ಲಿ ಕಾಯಕಯೋಗಿಯಾಗಿ ಶಿವನು ಸಹ ಕರ್ತವ್ಯವನ್ನು ನಿರ್ವಹಣೆ ಮಾಡುತ್ತಿದ್ದು, ಶಿವ ಶರಣರು”ಬದುಕಿಗೊಂದು ನೆಲೆ ,ಕಾಯಕಕೊಂದು ಬೆಲೆ ಎಂಬ ನಿಟ್ಟಿನಲ್ಲಿ ಕಾಯಕ ಮಾಡುತ್ತಾ ಲೋಕದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಮಾದರಿ ಯಾಗಿದ್ದಾರೆ.ಅವರ ಭದ್ರ ಅಡಿಪಾಯದಲ್ಲಿ ನಾವುಗಳು ಇಂದು ನೆಡೆದುಕೊಳ್ಳಬೇಕಾಗಿದೆ ಎಂದು ಹಿರಿಯ ಶಿಕ್ಷಕರಾದ ಶ್ರೀ ಹನುಮಂತರಡ್ಡಿ ಯವರು ಮಕ್ಕಳಿಗೆ ತಿಳಿಯಪಡಿಸಿದರು.
ಮಕ್ಕಳು ಕಾಯಕ ಯೋಗಿಗಳಾದ ಅಯ್ದಕ್ಕಿ ಲಕ್ಕಮ್ಮ,ಅಂಬಿಗರ ಚೌಡಯ್ಯ,ಮಡಿವಾಳ ಮಾಚಿದೇವ,ಮೇದಾರ ಚನ್ನಯ್ಯ, ಚಮ್ಮಾರ ಹರಳಯ್ಯ ನವರ ಯಶೋಗಾಥೆಗಳನ್ನುಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ಶ್ಯಾಮಸುಂದರ ಸಪಾರೆ,ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು,ಶಿಕ್ಷಣಪ್ರೇಮಿಗಳು, ಶಿಕ್ಷಕರಾದ ಶಾರದ,ರೂಪ,ಮಂಜುನಾಥ,ಬಸವರಾಜ,ರಫೀಕ್ ಹಾಗೂ ಮಕ್ಕಳು ಹಾಜರಿದ್ದರು…

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend