ಸಾರ್ವಜನಿಕರಿಗೆ ನಂಬಿಕೆಇಲ್ಲದಂತಾಗಿದೆಯಂತೆ, ನಂದಿಹಳ್ಳಿ ಗ್ರಾಮಪಂಚಾಯಿತಿಯ ಆಡಳಿತದ ವ್ಯವಸ್ಥೆಯ ಬಗ್ಗೆ…!!!

ಮನುಷ್ಯನ ಬೆಳವಣಿಗೆ ಅವನ ಒಂದು, ಕೃತಿಯಲ್ಲಿದ್ದರೆ ಕಚೇರಿಗಳ ಬೆಳವಣಿಗೆ ಕಾರ್ಯದಲ್ಲಿರುತ್ತದೆ ಎನ್ನುವ ಒಂದು ವಾಕ್ಯವನ್ನು ಹಲವಾರು ಚಿಂತಕರು ಮಾತನಾಡುವುದುದನ್ನು ನಿಮಗೆ ನಮಗೆ ಗೊತ್ತಿರುವ ಸಂಗತಿ ಆದರೆ, ಈಗಿನ ಪರಿಸ್ಥಿತಿ ಇದರ ತದ್ವಿರುದ್ಧ ಅಂದರೆ ಹಲವಾರು ಸ್ಥಳೀಯ ಮಟ್ಟದಲ್ಲಿ ಕಾರ್ಯವನ್ನು ನಿರ್ವಹಿಸುವ ಕಚೇರಿಗಳೆಂದರೆ ಹಳ್ಳಿಗಳು ಮತ್ತು ಅಲ್ಲಿನ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಸುವ್ಯಸ್ತೆಯಲ್ಲಿ ಸಲೀಸಾಗಿ ಸಾಗಬೇಕು ಅಂದರೆ ಅಲ್ಲಿನ ಗ್ರಾಮಮಟ್ಟದ ಅಧಿಕಾರಿಗಳ ಕಾರ್ಯವೈಖರಿ ಬಹುಮುಖ್ಯವಾದ ಸಂಗತಿ ಅಂದರೆ ಗ್ರಾಮಗಳು ಅಭಿವೃದ್ಧಿಯಾಗಬೇಕೆಂದೆ ತಾಲೋಕು ಪಂಚಾಯತಿ ಮಟ್ಟದಲ್ಲಿನ ಆಡಳಿತ ವ್ಯವಸ್ಥೆಗೆ ತನ್ನ ಒಂದು ಹೆಗಳನ್ನು ಕೊಟ್ಟು ಹಳ್ಳಿಗಳ ಸುಧಾರಣೆ ಮತ್ತು ಅಭಿವೃದ್ಧಿಗೆ ಒತ್ತು ಕೊಡಲು ಸುಮಾರು 4ರಿಂದ 6ಹಳ್ಳಿಗಳಿಗೊಂದು ಗ್ರಾಮಪಂಚಾಯಿತಿಯನ್ನು ರಾಜ್ಯಸರ್ಕಾರ ನಿರ್ಮಿಸಿದೆ ಅಂದರೆ ಆ ಒಂದು ಗ್ರಾಮಪಂಚಾಯಿತಿಯ ಕಾರ್ಯ ಏನು?

ಸರಕಾರದ ಅನುಮೋದನೆಯಂತೆ ಸಂಬಂಧ ಪಟ್ಟ ಗ್ರಾಮಪಂಚಾಯಿತಿಯ ಅಧಿಕಾರಿಗೆ ಸರ್ಕಾರದ ಸುತ್ತೋಲೆಯಂತೆ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳ ಮೂಲಭೂತ ಸೌಕರ್ಯದ ವ್ಯಾಪ್ತಿಯಲ್ಲಿ ಬರುವ, ನೀರು, ಬೆಳಕು, ಉದ್ಯೋಗ, ಶೌಚಾಲಯ, ವಸತಿಯ ಹಾಗೂ ಇನ್ನು ಹಲವಾರು ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಸುಲಭವಾಗಿ ಸಿಗಲಿ ಹಾಗೂ ಇದರ ಒಂದು ಅವಕಾಶದಿಂದ ವಂಚನೆಯಾಗುವುದು ಬೇಡ ಅನ್ನುವ ಮನೋಭಾವನೆಯಿಂದ ಕಲ್ಪಿಸಿರುವ ಒಂದು ಆಡಳಿತವೆನ್ನುವುದು ತಮಗೆಲ್ಲ ಗೊತ್ತಿರುವ ಸಂಗತಿ ಆಗಂತ ಇವೆಲ್ಲ ಅಷ್ಟು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವೇ?
ಇಲ್ಲ ಸುಲಭದ ಮಾತಲ್ಲ!!!
ಈ ಒಂದು ಸರ್ಕಾರದ ಸವಲತ್ತುಗಳನ್ನು ಪಡೆಯುವುದು ಸುಲಭದ ವಿಷಯವಲ್ಲ ಬಿಡಿ, ಎಲ್ಲಾ ಗೊತ್ತಿರುವವರೇ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ನಮ್ಮಂತ “ಪತ್ರಕರ್ತರೆ” ಈ ಸವಲತ್ತುಗಳನ್ನು ಸರ್ಕಸ್ ಮಾಡುವ ಸನ್ನಿವೇಶಗಳು ಇದ್ದ ಸಮಯದಲ್ಲಿ ಇನ್ನು ಜನಸಾಮಾನ್ಯರು ಪಡೆಯುವುದು ಕನಸಿನ ಮಾತು. ಅಂದರೆ ಉಳ್ಳವರ ಪಾಲು ಮತ್ತು ಗ್ರಾಮಪಂಚಾಯಿತಿಯ ಸದಸ್ಯರ ಸಂಬಂದಿಕರ ಪಾಲು ಇಲ್ಲ ಸಂಬಂಧಪಟ್ಟ ವಾರ್ಡ್ ಸದಸ್ಯರಿಗೆ ಹಣವನ್ನು ಕೊಟ್ಟರೆ ಅದು ಸಿಕ್ಕರೆ ಸಿಗಬಹುದು? ಸಿಗದೇ ಇರಬಹುದು!

ಅರ್ಥವಾಗಿರಬಹುದು ನಮ್ಮ ಒಂದು ಪತ್ರಿಕಾ ಓದುಗರಿಗೆ ಬಹಳ ದಿನಗಳ ನಂತರ ಗ್ರಾಮಪಂಚಾಯಿತಿಗಳ ಸುದ್ದಿಗಳ ಕಡೆ ನಮ್ಮ ಎಚ್ಚರಿಕೆ ಪತ್ರಿಕಾ ತಂಡದ ದಾಪುಗಲು, ಸರಿ ಅದು ಏನೇ ಇರಲಿ ಈಗ ನಾವು ಹೇಳಹೊರಟಿರುವ ಗ್ರಾಮಪಂಚಾಯಿತಿ ಇರುವುದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ “ನಂದಿಹಳ್ಳಿ “ಗ್ರಾಮಪಂಚಾಯಿತಿಯ ಚಿತ್ರಣದ ಬಗ್ಗೆ ಇಲ್ಲಿ ಸುತ್ತಮುತ್ತಲಿನ ಜನರು ಕೃಷಿಯನ್ನೇ ಅವಲಂಬಿಸಿ ಜೀವನವನ್ನು ಮಾಡುತ್ತಿರುವ ಬಡವರು ಆದರೆ ಸರ್ಕಾರದ ಸವಲತ್ತನ್ನು ಗ್ರಾಮಪಂಚಾಯಿತಿಯ ಮಟ್ಟದಲ್ಲಿ ಪಡೆಯಬೇಕೆಂದರೆ ಲಂಚದ ಕುದುರೆಯನ್ನು ಹತ್ತಲೇ ಬೇಕು ಇಲ್ಲ, ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಸಂಬಂಧ ಪಟ್ಟ ಹಳ್ಳಿಗಳ ಸ್ಥಳೀಯರು,

ನಂದಿಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಈ ಇಂದೇ ಇದ್ದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಾರು ಅಂದರೆ ಹಲವಾರು ಯೋಜನೆಗಳನ್ನು ಅಂದರೆ 14ನೆ ಹಣಕಾಸು ಯೋಜನೆಯಲ್ಲಿ ಮತ್ತು ಆಶ್ರಯ ಮನೆ ಯೋಜನೆಯಲ್ಲಿ ದುಡ್ಡು ಕೊಟ್ಟವರಿಗೆ ಮನೆ ಮುಂಜೂರು ಮಾಡಿದ್ದರೆ ಅಲ್ಲಿರುವ ಸ್ಥಳೀಯ ಸದಸ್ಯರ ಜೊತೆಗೆ ಸೇರಿ 10ರಿಂದ 20ಸಾವಿರ ರೂಪಾಯಿಗಳನ್ನು ಕೊಟ್ಟವರಿಗೆ ಮಾತ್ರ ಆಶ್ರಯ ಮನೆ ಮುಂಜೂರು ಮಾಡುವ ಕಾರ್ಯ ಮಾಡಿದ್ದರೆ, ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿಯೂ ಸಹ ಭಾರಿ ಭ್ರಷ್ಟಾಚಾರ ಆಗಿದೆ ಹಾಗೂ “ಸ್ವಚ್ಚ ಭಾರತ ಮಷಿನ್ “ಯೋಜನೆಯಲ್ಲಿಯು ಒಂದೊಂದು ಮನೆಗೆ 2ಇಲ್ಲ 3 ಶೌಚಾಲಯಗಳನ್ನು ನಿರ್ಮಿಸದೆ ಬಿಲ್ ತೆಗೆದಿರುವ ಅನುಮಾನವು ಸಹ ಇದೆ ಎನ್ನುತ್ತಾರೆ ಸ್ಥಳೀಯರು, ಹಾಗೂ ವಜಗೊಂಡಿರುವ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಈಗಾಗಲೇ ದೂರು ಇದ್ದು ಇದು ನ್ಯಾಯಲಯದ ಮೆಟ್ಟಿಲು ಏರಿದೆ ಇದನ್ನು ಕಾಯ್ದು ನೋಡೋಣ ಎನ್ನುತ್ತಾರೆ, ಇವರಿಗೆಲ್ಲ ನ್ಯಾಯಲಯ ಸರಿಯಾದ ಶಿಕ್ಷೆ ಕೊಡಲಿ ಎಂಬುದೇ ನಮ್ಮ ಮೂಲ ಉದ್ದೇಶ ವಿವೇಚನೆಯಿಲ್ಲದoಗೆ ಹಗರಣ ಮಾಡಿದ್ದರೆ ಅನ್ನುವ ಒಂದು ಕೂಗು ಸಂಬಂಧ ಪಟ್ಟ ಗ್ರಾಮಗಳ ಸಾರ್ವಜನಿಕರಿoದ ಕೇಳಿಬರುತ್ತಿದೆ, ಮತ್ತು ಹಲವು ಪತ್ರಿಕೆಗಳಲ್ಲಿ ಇದರ ಬಗ್ಗೆ ಸುದ್ದಿಯಾದರೂ ಬರೀ, ದೂರನ್ನು ನೀಡುವುದು ಮತ್ತು ವೃತ್ತಿಯಿಂದ ಅಮಾನತು ಮಾಡುವುದರಿಂದ ಏನು ಪ್ರಯೋಜನವಿಲ್ಲ ಏಕೆಂದರೆ ಒಬ್ಬ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಾನು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ, ತನ್ನ ಎಲ್ಲಾ ಹಣದ ಕನಸನ್ನು ನನಸು ಮಾಡಿಕೊಳ್ಳುತ್ತಾನೆ ಅಂದರೆ ನೀವೇ ವಿಚಾರ ಮಾಡಿ, ಇಂತಹ ಅಧಿಕಾರಿಗಳು ನಮ್ಮ ಒಂದು ಸಮಾಜಕ್ಕೆ ಬೇಕಾ ಸರ್ಕಾರದ ಹಣವನ್ನು ಲೂಟಿ ಮಾಡಿಕೊಂಡು,ಅವರು ಮತ್ತು ಅವರ ಕುಟುಂಬಗಳು ಸೇಫ್ ಆಗಿರುತ್ತವೆ ಅಂತವರನ್ನು, ಹುದ್ದೆಯಿಂದ ವಜಾಮಾಡಿದರೆ ಪ್ರಯೋಜನವಿಲ್ಲ, ಅಂತವರನ್ನು ವಜಮಾಡುವುದರ ಜೊತೆಗೆ, ಜೈಲಿಗೆ ದಾರಿಯನ್ನು ತೋರಿಸಬೇಕು ಮತ್ತು ಸರ್ಕಾರದ ಹಣವನ್ನು ಎಷ್ಟು ಲೂಟಿಯನ್ನು ಮಾಡಿರುತ್ತಾರೋ ಅದರ ಅಸಲು ಮತ್ತು ಬಡ್ಡಿಯೊಂದಿಗೆ ಹಣವನ್ನು ವಸೂಲಿ ಮಾಡಿ ಬುದ್ದಿಯನ್ನು ಕಲಿಸಿದರೆ ಮಾತ್ರ ಇನ್ನುಳಿದ ಅಧಿಕಾರಿಗಳಿಗೆ ಪಾಠವನ್ನು ಕಲಿಸಿದಂತಾಗುತ್ತದೆ.
ನೋಡಿ ಹಡಗಲಿ ತಾಲೂಕಿನಲ್ಲಿ ಹಲವಾರು ಗ್ರಾಮಪಂಚಾಯಿತಿಗಳಲ್ಲಿ ಸಾಕಷ್ಟು ಹಗರಣಗಳ ಕಂತೆಗಳಿವೆ ಅನ್ನುವ ಒಂದು ದೂರುಗಳು ನಮ್ಮ ಒಂದು ಪತ್ರಿಕಾ ತಂಡದ ಗಮನಕ್ಕೆ ಬರುತ್ತಿದ್ದು ಬಹಳ ಆತಂಕದ ವಿಷಯ ಎನ್ನುವುದು ಮಾತ್ರ ಸತ್ಯ, ಇನ್ನಾದರೂ ಇಂತಹ ಭ್ರಷ್ಟ ಅಧಿಕಾರಿಗಳಿಗೆ ಅವರ ಇಲಾಖೆಯ ಮೇಲಾಧಿಕಾರಿಗಳು ಬುದ್ದಿಯನ್ನು ಕಲಿಸಲಿ ಇಲ್ಲ ಮನೆಯ ಕಡೆಗೆ ದಾರಿಯನ್ನು ತೋರಿಸಬೇಕು ಎನ್ನುವುದೇ ನಮ್ಮ ಪತ್ರಿಕಾ ತಂಡದ ಉದ್ದೇಶ….. ಮತ್ತೊಂದು ಗ್ರಾಮಪಂಚಾಯಿತಿಯ ಸುದ್ದಿಯೊಂದಿಗೆ ಮತ್ತೊಂದು ಸಂಚಿಕೆಯಲ್ಲಿ ನಿಮ್ಮಗಳ ಮುಂದೆ…

ವರದಿ.ಮಂಜುನಾಥ್, ಎಚ್, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend