ಬಹುಜನ ದಲಿತ ಸಂಘರ್ಷ ಸಮಿತಿ ನಗರ ಘಟಕ ಪದಾಧಿಕಾರಿಗಳ ನೇಮಕ –
ಸಿಂಧನೂರು : ನಗರದ ಇಂದಿರಾನಗರದಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ
ವತಿಯಿಂದ ಮಹಿಳಾ ನಗರ ಘಟಕದ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರಾದ ಭೀಮೇಶ ಕವಿತಾಳ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಯಿತು.
ನೂತನ ಪದಾಧಿಕಾರಿಗಳು : ಶ್ರೀಮತಿ ಚಾಂದನಿ,( ನಗರ ಘಟಕ ಮಹಿಳಾ ಅಧ್ಯಕ್ಷೆ ) ಈರಮ್ಮ( ಉಪಾಧ್ಯಕ್ಷೆ ), ಶಶಿಕಲಾ(ಪ್ರಧಾನಕಾರ್ಯದರ್ಶಿ) ,ಶಾಬೀರ ಬೇಗಮ್ ( ಕಾರ್ಯದರ್ಶಿ ) ,ನಾಸಿರ ಬೇಗಮ್ ( ಸಹ ಕಾರ್ಯದರ್ಶಿ) , ಬಿ.ಬಿ.ಜಹೇರಾ ( ಸಂಘಟನಾ ಕಾರ್ಯದರ್ಶಿ ), ನೂರ್ ಜಾ ಬೇಗಮ್ (ಖಜಾಂಚಿ ) ಆಯ್ಕೆ ಮಾಡಲಾಯಿತು.
ತಾಲೂಕಿನ ದಲಿತ, ಹಿಂದುಳಿದ ಅಲ್ಪಸಂಖ್ಯಾತರು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸುತ್ತಿದ್ದು,ಮಹಿಳೆಯರನ್ನುಸಂಘಟಿಸುವ ಉದ್ದೇಶ ಮಹಿಳೆಯರಿಗೆ ಸಿಗಬಹುದಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ಮಾಡಬೇಕಾಗಿದೆ. ಆದರಿಂದ ಇಂದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಬಿಮೇಶ್ ಕವಿತಾಳ ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸೈರಾ ಬಾನು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಎನ್. ವೀರೇಶ, ರಾಜ್ಯ ಅಲ್ಪ ಸಂಖ್ಯಾತ ಘಟಕ ರಾಜ್ಯ ಸಂಚಾಲಕರು ಹುಸೇನ್ ಇಂದಿರಾ ನಗರ, ಹಾಗೂ ಬಾನು ಬೇಗಮ್ ಮತ್ತು ಇತರರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
