ಕೋವಿಡ್ ನಿಯಮ ಉಲ್ಲಂಘಿಸಿ ನಾಟಕ ಪ್ರದರ್ಶನ ಒಂಬತ್ತು ಜನ ಕಲಾವಿದರ ಮೇಲೆ ಪ್ರಕರಣ ದಾಖಲು…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲ್ಲೂಕು ಕಾನ ಹೊಸಹಳ್ಳಿ.
ಕೋವಿಡ್ ನಿಯಮ ಉಲ್ಲಂಘಿಸಿ ನಾಟಕ ಪ್ರದರ್ಶನ ಒಂಬತ್ತು ಜನ ಕಲಾವಿದರ ಮೇಲೆ ಪ್ರಕರಣ ದಾಖಲು
ಕುಮತಿ : ಕಾನಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಕುಮತಿ ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಪ್ರಯುಕ್ತ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಜಿಲ್ಲೆಯಲ್ಲಿ ಕೋವಿಡ್ ನಿಯಮ ಇರುವುದರಿಂದ, ಕುಮತಿ ಗ್ರಾಮದಲ್ಲಿ ಕಲಾವಿದರು ಪರವಾನಿಗೆ ಇಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಗೂಡಿ ಸಿ, ಕೋವಿಡ್ ನಿಯಮವನ್ನು ಉಲ್ಲಂಘಿಸಿ ನಾಟಕ ಪ್ರದರ್ಶನ ಮಾಡುತ್ತಿರುವ ವಿಷಯ ತಿಳಿದು, ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಚಾ ಮನೂರು ರವರು ಗ್ರಾಮಕ್ಕೆ ಭೇಟಿ ನೀಡಿ., ಅನುಮತಿ ಇಲ್ಲದೆ ಕೋರೋನ ನಿಯಮ ಪಾಲಿಸದೆ ಕಾನೂನು ಉಲ್ಲಂಘನೆ ಮಾಡಿದ, ಕುಮತಿ ಗ್ರಾಮದ ವೀರಭದ್ರಯ್ಯಸ್ವಾಮಿ ಓಬಣ್ಣ ಇನ್ನುಳಿದ ಏಳು ಜನ ಒಟ್ಟು ಒಂಬತ್ತು ಜನ ಕಲಾವಿದರ ಮೇಲೆ ಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend