ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು; ಪೋಷಕರು–ಶಿಕ್ಷಕರ ಮಾತಿನ ಚಕಮಕಿ…!!!

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು; ಪೋಷಕರು–ಶಿಕ್ಷಕರ ಮಾತಿನ ಚಕಮಕಿ

ಯಡ್ರಾಮಿ : ತಾಲ್ಲೂಕಿನ ಇಜೇರಿ ಗ್ರಾಮದ ಮೌಲಾನಾ ಆಜಾದ್ ಶಾಲೆಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರು. ಇದನ್ನು ಗಮನಿಸಿದ ಶಾಲಾ ಮುಖ್ಯ ಶಿಕ್ಷಕ ಶಾಲೆಯ ಒಳಗಡೆ ಪ್ರವೇಶ ನಿರಾಕರಿಸಿ ಹೊರಗಡೆ ನಿಲ್ಲಿಸಿದರು.

6ರಿಂದ 10 ತರಗತಿವರೆಗೆ ಇಲ್ಲಿ 18 ಮುಸ್ಲಿಂ ವಿದ್ಯಾರ್ಥಿನಿಯರು ಇದ್ದು, ಇದರಲ್ಲಿ ಮೂವರು ಹಿಜಾಬ್ ಧರಿಸಿ ಬಂದಿದ್ದರು. ಅವರ ಮನವೊಲಿಸಿ ಹಿಜಾಬ್ ತೆಗೆಸಿ ಶಾಲೆ ಒಳಗಡೆ ಬಿಡಲಾಯಿತು. ಕೋರ್ಟ್‌ ಮಧ್ಯಂತರ ಆದೇಶ ಬಂದಿದೆ. ಶಾಲೆ ಒಳಗಡೆ ಹಿಜಾಬ್, ಶಾಲು ಧರಿಸಲು ಅವಕಾಶವಿಲ್ಲ. ಸಮಸ್ಯೆ ಬಿಗಡಾಯಿಸಿದರೆ ಶಾಲೆಗೆ ರಜೆ ನೀಡುತ್ತೇವೆ. ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಪೋಷಕರಿಗೆ ಶಿಕ್ಷಕರು ಕೋರ್ಟ್ ಆದೇಶದಂತೆ ನಡೆದುಕೊಳ್ಳಬೇಕಾಗುತ್ತದೆ. ಶಾಲೆಗೆ ಬರುವವರು ಹಿಜಾಬ್ ಧರಿಸದೆ ಶಾಲೆಗೆ ಬನ್ನಿ. ಇಲ್ಲದಿದ್ದರೆ ಮನೆಯಲ್ಲೇ ಇರಬಹುದು ಎಂದು ಮನವೊಲಿಸಲಾಯಿತು.

ಈ ಸಂದರ್ಭದಲ್ಲಿ ಪೋಷಕರು, ‘ನಿಮ್ಮ ಬಳಿ ಕೋರ್ಟ್ ಆದೇಶ ಇದೆಯೇ, ನಮ್ಮ ಮಕ್ಕಳು ಮೊದಲಿನಿಂದ ಹಿಜಾಬ್ ಧರಿಸಿಕೊಂಡೇ ಶಾಲೆಗೆ ಬಂದಿದ್ದಾರೆ. ಒಮ್ಮೆಲೇ ಹಿಜಾಬ್ ತೆಗೆಯಿರಿ ಎಂದರೆ ಹೇಗೆ?’ ಎಂದು ಪ್ರಶ್ನಿಸಿದರು.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಬರುವವರೆಗೂ ಹಿಜಾಬ್ ಧರಿಸಿ ಬಂದ ಮಕ್ಕಳನ್ನು ಶಾಲೆಯ ಒಳಗಡೆ ಬಿಡಬೇಡಿ ಎಂದು ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ಹಿಜಾಬ್ ಧರಿಸಿ ಬಂದ ಮಕ್ಕಳಿಗೆ ಶಾಲೆ ಒಳಗಡೆ ಪ್ರವೇಶ ನೀಡಿಲ್ಲ. ಹಿಜಾಬ್ ಧರಿಸದೆ ಬಂದ ಮಕ್ಕಳನ್ನು ಮಾತ್ರ ಶಾಲೆಯ ಒಳಗಡೆ ಪ್ರವೇಶ ನೀಡಲಾಗುವುದು ಎಂದು ಶಾಲಾ ಮುಖ್ಯ ಶಿಕ್ಷಕ ತಿಳಿಸಿದರು…

ವರದಿ. ಬಸವರಾಜ್ ಹಿರೇಮಠ್, ಕಲಬುರಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend