ಅಧಿಕಾರಿಗಳ ಮೇಲೆ ಹಲ್ಲೆ ಖಂಡಿಸಿ ವೀರಶೈವ ಸಮಾಜದ ವತಿಯಿಂದ ಮನವಿ ಪತ್ರ
ಜೇವರ್ಗಿ: ಕರ್ತವ್ಯ ನಿರತ ಹುಮನಾಬಾದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹಾಗೂ ಜೇವರ್ಗಿ ಪುರಸಭೆ ನೈರ್ಮಲ್ಯ ನಿರೀಕ್ಷಕ ರಾಜಶೇಖರ ಹಿರೇಮಠ ಅವರ ಮೇಲಿನ ಹಲ್ಲೆ ಖಂಡಿಸಿ ಜೇವರ್ಗಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಸಿದ್ದು ಸಾಹು ಅಂಗಡಿ ಅವರ ನೇತೃತ್ವದಲ್ಲಿ ಇಂದು ಕರ್ನಾಟಕ ರಾಜ್ಯದ ಗ್ರಹಸಚಿವ ಅರಗ ಜ್ಞಾನೇಂದ್ರ ಅವರಿಗೆ ಜೇವರ್ಗಿ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಮಾತನಾಡಿದ ಅಧ್ಯಕ್ಷ ಸಿದ್ದು ಅಂಗಡಿ ರಾಜ್ಯದಲ್ಲಿ ವೀರಶೈವ ಸಮಾಜದ ಸರಕಾರಿ ನೌಕರರ ಮೇಲೆ ಪದೇ ಪದೇ ಹಲ್ಲೆಗಳು ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಕೂಡಲೇ ರಾಜ್ಯ ಸರಕಾರ ಎಚ್ಚೆತ್ತು ನಮ್ಮ ಸಮಾಜದ ನೌಕರರಿಗೆ ಸೂಕ್ತ ರಕ್ಷಣೆ ಕೊಟ್ಟು ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು ಹಲ್ಲೆ ಮಾಡಿದ ದುಷ್ಕರ್ಮಿಗಳ ಮೇಲೆ ಗುಂಡಾ ಕಾಯ್ದೆಯಡಿ ಬಂಧಿಸಿ ಅಪರಾಧಿಗಳನ್ನು ಗಡೀಪಾರು ಮಾಡುವಂತೆ ಒತ್ತಾಯಿಸಿದರು.
ಒಂದು ವೇಳೆ ಹತ್ತು ದಿನಗಳಲ್ಲಿ ಅಪರಾಧಿಗಳನ್ನು ಬಂಧಿಸದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಮಠಾಧೀಶರ ಮತ್ತು ರಾಜಕೀಯ ನಾಯಕರ ನೇತೃತ್ವದಲ್ಲಿ ಉಗ್ರವಾದ ಹೋರಾಟ ಮತ್ತು ಜೇವರ್ಗಿ ಬಂದ್ ಮಾಡಿ ರಸ್ತೆತಡೆ ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗುರುಲಿಂಗಯ್ಯಸ್ವಾಮಿ ಯನಗುಂಟಿ. ಸೋಮಣ್ಣ ಕಲ್ಲಾ. ಪುರಸಭೆ ಸದಸ್ಯ ಸಂಗನಗೌಡ ಪಾಟೀಲ ರದ್ದೇವಾಡಗಿ .ಮಲ್ಲಿಕಾರ್ಜುನ ಬಿರಾದಾರ. ಅಶೋಕ ಪಾಟೀಲ.ಭಗವಂತರಾಯ ಶಿವಣ್ಣವರ. ಚಂದ್ರಕಾಂತ ಬೆಲ್ಲದ.ಮಲ್ಲಿಕಾರ್ಜುನ ಆದ್ವಾನಿ. ಸಿದ್ದನಗೌಡ ಪಾಟೀಲ ಹಳ್ಳಿ.ಪ್ರಭುಗೌಡ ಪಾಟೀಲ ಸಂಗಮೇಶ ಬೋರಟ್ಟಿ.ಮುದುಗೌಡ ಯನಗುಂಟಿ.ಸಾಹೇಬಗೌಡ ಪಾಟೀಲ.ವಿಶ್ವ ಪಾಟೀಲ ರಾಸಣಗಿ. ಕೇದಾರಲಿಂಗಯ್ಯ ಹಿರೇಮಠ ವಿಶಾಲ ಬಂಕೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

ವರದಿ. ಆನಂದ್ ಸಜ್ಜನ್, ಜೇವರ್ಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
