ನರೇಗಾ ಯೋಜನೆ ಅಡಿಯಲ್ಲಿ 100 ಮಾನವ ದಿನಗಳನ್ನು ಪೂರೈಸಿದವರಿಗೆ ಉನ್ನತಿ ಯೋಜನೆಯಡಿಯಲ್ಲಿ ತರಬೇತಿ…!!!

ನರೇಗಾ ಯೋಜನೆ ಅಡಿಯಲ್ಲಿ 100 ಮಾನವ ದಿನಗಳನ್ನು ಪೂರೈಸಿದವರಿಗೆ ಉನ್ನತಿ ಯೋಜನೆಯಡಿಯಲ್ಲಿ ತರಬೇತಿ.

ಸಿಂಧನೂರ : ಸಿಂಧನೂರು ತಾಲೂಕಿನ ಭೂತಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ 100 ಮಾನವ ದಿನಗಳನ್ನು ಪೂರೈಸಿದ ಮಹಿಳೆಯರಿಗೆ ಎನ್.ಆರ್.ಎಲ್.ಎಂ ಸಹಭಾಗಿತ್ವದಲ್ಲಿ SBI RSETI ರಾಯಚೂರು ಸಂಸ್ಥೆ ವತಿಯಿಂದ ಆರು ದಿನಗಳ ಕಾಲ ಉನ್ನತಿ ಯೋಜನೆ ಅಡಿಯಲ್ಲಿ ಫೈಲ್ ಮೇಕಿಂಗ್, ಎನ್ವಲೆಪ್ ಕವರ್ ಮೇಕಿಂಗ್, ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್ ತಯಾರಿಕೆಗೆ ಸಂಬಂಧಿಸಿದಂತೆ ಮಹಿಳೆಯರಿಗೆ ತರಬೇತಿ ನೀಡಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕರಾದ ವೀರಭದ್ರಗೌಡ ಗಚ್ಚಿನಮನೆ ಮಾತನಾಡಿ, ತರಬೇತಿ ಪಡೆದ ಮಹಿಳೆಯರು ಮನೆಯಲ್ಲಿ ತಯಾರು ಮಾಡುವ ಮೂಲಕ ಅಥವಾ ಮಹಿಳೆಯರು ಗುಂಪಾಗಿ ಸಣ್ಣ ಉದ್ಯಮವನ್ನು ಆರಂಭಿಸುವ ಮೂಲಕ ಸ್ವಂತ ಉದ್ಯೋಗ ಮಾಡಲು ಗುಂಪಿನ ಮಹಿಳೆಯರಿಗೆ ಎನ್.ಆರ್ ಎಲ್.ಎಂ ಕಡೆಯಿಂದ ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗುವುದು
ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.

ಈ ತರಬೇತಿಯಲ್ಲಿ ತರಬೇತುದಾರ ಸಂಸ್ಥೆಯಿಂದ ನಿರ್ದೇಶಕರಾದ ಬಾಬುರಾವ್ ಬೋರಾಳೆ ತಮ್ಮ ಸಂಸ್ಥೆಯಿಂದ ದೊರಕುವ ಇತರ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಾಲತಿ ಮಿರಜ್ಕರ್, ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಾಗವೇಣಿ, ವಲಯ ಮೇಲ್ವಿಚಾರಕರಾದ ಮೌನೇಶ್, ಮುಖ್ಯ ಪುಸ್ತಕಬರಹಗಾರರಾದ ರೇಣುಕಾ,ಸ್ಥಳೀಯ ಸಂಪನ್ಮೂಲ ವ್ಯಕ್ತಿ ರಂಜಾನ್ ಬಿ ಹಾಗೂ ತರಬೇತಿ ಪಡೆದ ಮಹಿಳೆಯರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend