ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಏತ ನೀರಾವರಿ ಯೋಜನೆಗಳನ್ನು ಈ ವರ್ಷದ ಬಜೆಟ್‌ನಲ್ಲಿ ಮಂಜೂರ ಮಾಡಲು ಮನವಿ…!!!

ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಏತ ನೀರಾವರಿ ಯೋಜನೆಗಳನ್ನು ಈ ವರ್ಷದ ಬಜೆಟ್‌ನಲ್ಲಿ ಮಂಜೂರ ಮಾಡಿ ಅನುದಾನವನ್ನು ಮೀಸಲಿಡುವ ಕುರಿತು ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಯಿತು.

ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಗ್ರಾಮಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಪ್ರತಿ ವರ್ಷ ಬರಗಾಲ ಚಾಯೆ ಮೂಡುತ್ತಿರುವದರಿಂದ ನೀರಿನ ಸಮಸ್ಯೆ ಉದ್ಭವಿಸುತ್ತಿದ್ದು, ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರ ಜಮೀನುಗಳು ಫಲವತ್ತಾದ ಭೂಮಿಗಳಿದ್ದು ನೀರಾವರಿ ಸೌಲಭ್ಯವಿಲ್ಲದೆ. ರೈತರಿಗೆ ಬೆಳೆಗಳಿಗಳನ್ನು ಬೆಳೆಯಲು ತುಂಬಾ ತೊಂದರೆಯಾಗುತ್ತಿದೆ. ಈ ಕೆಳಕಂಡ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೇ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದರಿಂದ ಇಲ್ಲಿನ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರ ಫಲವತ್ತಾದ ಭೂಮಿಗಳಿಗೆ ನೀರು ಇಲ್ಲದೇ ತುಂಬಾ ತೊಂದರೆಯಾಗುತ್ತಿದ್ದು, ಆದ್ದರಿಂದ ಈ ಕೆಳಕಂಡ ಏತ ನೀರಾವರಿ ಯೋಜನೆಗಳನ್ನು ಈ ವರ್ಷದ ಬಜೆಟ್‌ನಲ್ಲಿ ಮಂಜೂರ ಮಾಡಿ ಅನುದಾನವನ್ನು ಮೀಸಲಿಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

1. ಕರಗಾಂವ ಏತ ನೀರಾವರಿ ಯೋಜನೆಯಡಿ ಒಟ್ಟು 14 ಗ್ರಾಮಗಳು ಬರುತ್ತಿದ್ದು, ಅದರ ವಿಸ್ತೀರ್ಣ ಒಟ್ಟು 8119 ಹೆಕ್ಟೇರ್ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.471.00 ಕೋಟಿ ಆಗುತ್ತದೆ. 2. ಜೈ ಹನುಮಾನ ಏತ ನೀರಾವರಿ ಯೋಜನೆಯಡಿ ಒಟ್ಟು 8 ಗ್ರಾಮಗಳು ಬರುತ್ತಿದ್ದು, ಅದರ ವಿಸ್ತೀರ್ಣ ಒಟ್ಟು 4025 ಹೆಕ್ಟೇರ್‌ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.483.66 ಕೋಟಿ ಆಗುತ್ತದೆ.

3. ಬೆಂಡವಾಡ ಏತ ನೀರಾವರಿ ಯೋಜನೆಯಡಿ ಒಟ್ಟು 16 ಗ್ರಾಮಗಳು ಬರುತ್ತಿದ್ದು, ಅದರ ವಿಸ್ತೀರ್ಣ ಒಟ್ಟು 9635 ಹೆಕ್ಟೇರ್ ಪ್ರದೇಶ ಆಗುತ್ತಿದ್ದು, ಅದರ ಅಂದಾಜು ವೆಚ್ಚ ರೂ.796.00 ಕೋಟಿ ಆಗುತ್ತದೆ.

4. ನಾಗರಮುನ್ನೋಳ್ಳಿ ಏತ ನೀರಾವರಿ ಯೋಜನೆಯು ಅಂತರ್ಜಲ ಮಟ್ಟವನ್ನು ಸುಧಾರಿಸಲು 19 ಬ್ಯಾರೇಜುಗಳು/ಚೆಕ್ ಡ್ಯಾಮಗಳನ್ನು ತುಂಬುವ ಪ್ರಸ್ತಾವನೆ ಒಟ್ಟು 2 ಗ್ರಾಮಗಳು ಅದರ ಅಂದಾಜು ವೆಚ್ಚ ರೂ.35.20 ಕೋಟಿ ಆಗುತ್ತದೆ.

ಈ ಸಂದರ್ಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯರಾದ ಶ್ರೀ ಪ್ರಭಾಕರ್ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಂತೇಶ ಕವಟಗಿಮಠ, ಮಾಜಿ ಲೋಕಸಭಾ ಸದಸ್ಯರಾದ ಅಮರ್ಸಿಂಹ್ ಪಾಟೀಲ್, ರಾಯಬಾಗ್ ಮತಕ್ಷೇತ್ರದ ರಾಯಬಾಗ್ ಹಾಗೂ ಚಿಕ್ಕೋಡಿ ತಾಲೂಕಿನ ಮುಖಂಡರು ಉಪಸ್ಥಿತರಿದ್ದರು…

 

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend