ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕು ವಿಶ್ವ ಕ್ಯಾನ್ಸರ್ ದಿನಾಚರಣೆ…!!!

ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕು
ವಿಶ್ವ ಕ್ಯಾನ್ಸರ್ ದಿನಾಚರಣೆ.
ಚಿಕ್ಕಜೋಗಿಹಳ್ಳಿ :-ಸಮುದಾಯ ಆರೋಗ್ಯ ಕೇಂದ್ರದಿಂದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ
ಜನಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮ ಕುರಿತುವೈದ್ಯಾಧಿಕಾರಿಗಳಾದ ಶಿವಪ್ರಕಾಶ್ ಅವರು ಮಾತನಾಡಿ.ಕ್ಯಾನ್ಸರ್ ಬಗ್ಗೆ ಅಜ್ಞಾನ. ಜಾಗೃತಿಯ ಕೊರತೆ. ಅನಾರೋಗ್ಯಕರ ಹವ್ಯಾಸಗಳು. ಮುಖ್ಯ ಕಾರಣಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ಮದ್ಯಪಾನ. ಹೆಚ್ಚಾಗಿ ತಂಬಾಕು ಸೇವನೆ, ಕ್ಯಾನ್ಸರಿಗೆ ಕಾರಣವಾಗುತ್ತದೆ, ಶ್ವಾಸಕೋಶದ ಕ್ಯಾನ್ಸರ್, ಗಂಟಲುಕ್ಯಾನ್ಸರ್, ಅನ್ನನಾಳ, ಹೊಟ್ಟೆ ಮತ್ತು ಕರುಳು ಕ್ಯಾನ್ಸರ್ ಮೂತ್ರಕೋಶ ಕ್ಯಾನ್ಸರ್ ಗೆ ಒಳಗಾಗುವ ಸಂಭವಹೆಚ್ಚಿರುತ್ತದೆ. ಧೂಮಪಾನ ಬಿಡಿ ಸಿಗರೇಟ್ ಸೇದುವುದರಿಂದ ಸುತ್ತಲಿನ ಜನರ ಮೇಲೂ ಪರಿಣಾಮ ಬೀರುತ್ತದೆ. ಕಾರಣ ಒಳ್ಳೆಯ ಹವ್ಯಾಸವನ್ನು ಒಳ್ಳೆಯ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಇತ್ತೀಚಿನ ದಿನಗಳಲ್ಲಿ ತಮ್ಮ ಜೀವನಶೈಲಿ ಬದಲಾವಣೆಯಾಗುತ್ತಿದೆ.

ಫಾಸ್ಟ್ ಫುಡ್ ನಿಯಂತ್ರಣದ ಜೊತೆಗೆ ದೇಹದ ತೂಕವನ್ನು ಮಿತಿಯಲ್ಲಿ ಇಡುವುದರಿಂದ ಕ್ಯಾನ್ಸರ್ ಅಲ್ಲದೆ ಇನ್ನಿತರ ರೋಗಗಳನ್ನು ದೂರ ಮಾಡಬಹುದು. ಆದಷ್ಟು ಪ್ರತಿಯೊಬ್ಬರು ತಂಬಾಕು, ಮಧ್ಯಪಾನ,, ಕೆಲವರು ನಸಿಪುಡಿ ಉಪಯೋಗಿಸುತ್ತಾರೆ. ಇಂತಹ ಹವ್ಯಾಸಗಳನ್ನು ಬಿಟ್ಟು ಕ್ಯಾನ್ಸರ್ ರೋಗದಿಂದ ಪಾರಾಗಿರಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.ಈ ಶಿಬಿರದಲ್ಲಿ ಡಾ. ಶಿವಪ್ರಕಾಶ್, ಡಾ. ಜೀವಿತ, ಡಾ. ನವೀನ್, ಹಾಗೂ NCD ಸಿಬ್ಬಂದಿಗಳು, ICTC ಸಿಬ್ಬಂದಿಗಳು, RKSK ಸಿಬ್ಬಂದಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend