ಹಿಜಾಬ್ ಕೇಸರಿ ನಡುವೆ ಜೈನ್ ಸಮುದಾದ ಧರ್ಮ ಮೂರ್ತಿಗೆ ಅವಮಾನ ಮಾಡಿದ ರಾಜಕೀಯ ವ್ಯಕ್ತಿ ಮತ್ತು ಚಿತ್ರನಟನ ವಿರುದ್ಧ ಪ್ರತಿಭಟನೆ…!!!

ಹಿಜಾಬ್ ಕೇಸರಿ ನಡುವೆ ಜೈನ್ ಸಮುದಾದ ಧರ್ಮ ಮೂರ್ತಿಗೆ ಅವಮಾನ ಮಾಡಿದ ರಾಜಕೀಯ ವ್ಯಕ್ತಿ ಮತ್ತು ಚಿತ್ರನಟನ ವಿರುದ್ಧ ಪ್ರತಿಭಟನೆ.

ಕಳೆದ ಒಂದು ವಾರದಿಂದ ನಮ್ಮ ರಾಜ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ವಿವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಆಂತರಿಕ ವಿಷಯದಲ್ಲಿ ತುಂಬಾ ಆಘಾತವನ್ನುಂಟು ಮಾಡಿದೆ ಇದರ ಬಗ್ಗೆ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಕೋರ್ಟ್ ಮೋರೆ ಹೋಗಿದೆ ಇದರ ನಡೆವೆ ಕೆಲವು ವ್ಯಕ್ತಿಗಳು ಇನ್ನಿತರ ಧರ್ಮಗಳ ಹೆಸರನ್ನು ಎಳೆದು ತಂದು ಇನ್ನಷ್ಟು ಸಂಕಷ್ಟವನ್ನು ಉಂಟು ಮಾಡುತ್ತಿದ್ದಾರೆ ಕಾರಣ ಎರಡು ಮೂರು ದಿನದ ಹಿಂದೆ ಚಲನಚಿತ್ರ ನಟ ಪ್ರಥಮ್, ಕಾಂಗ್ರೆಸ್ ಪಕ್ಷದ ಅಯೂಬಖಾನ್ ಹಾಗೂ ಪ್ರಕಾಶ್ ಸುಡಾಳ ಈ ಮೂವರು ಜೈನ್ ಸಮುದಾಯದ ಬಗ್ಗೆ ಅವಹೇಳನವಾಗಿ ಮಾತನಾಡಿ ಶ್ರವಣ ಬೇಳಗೋಳದ ಜೈನ್ ಬಸ್ತಿ ಗೊಮ್ಮಟೇಶ್ವರ ಮೂರ್ತಿಗೆ ಚಡ್ಡಿ ಹಾಕಿಸಿ ಎಂದು ಅವಹೇಳನಕಾರಿಯಾಗಿ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿದ್ದು ಜೈನ್ ಸಮುದಾಯಕ್ಕೆ ಅವಮಾನಿಸಿದ್ದು ತಕ್ಷಣ ಈ ಮೂವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಬಕವಿ ಬನಹಟ್ಟಿ ತಾಲ್ಲೂಕಿನ ಜೈನ್ ಸಮುದಾಯ ತೇರದಾಳ ನಗರದ ಪ್ರಮುಖ ಬೀದಿಗಳಲ್ಲಿ ಹಾದು ರ್ಯಾಲಿ ಮುಖಾಂತರ ಪ್ರತಿಭಟನೆ ನಡೆಸಿ ತೇರದಾಳದ ಉಪತಹಶೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿದರು.

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend