ಕೇಸರಿಯೇ ರಾಷ್ಟ್ರಧ್ವಜ ಆಗಬೇಕು ಎನ್ನುತ್ತಿರುವ ಸಚಿವ ಈಶ್ವರಪ್ಪನವರೇ…!!!

ಕೇಸರಿಯೇ ರಾಷ್ಟ್ರಧ್ವಜ ಆಗಬೇಕು ಎನ್ನುತ್ತಿರುವ ಸಚಿವ ಈಶ್ವರಪ್ಪನವರೇ :

ಇಂದಿನ ಭಾರತೀಯ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು (ತಿರಂಗ) 1947 ರ ಜುಲೈ 22 ರಂದು ಡಾ.ಬಿ ಆರ್ ಅಂಬೇಡ್ಕರ್ ಅವರ ಅಧ್ಯಕ್ಷತೆಯ ರಚನಾ ಸಭೆಯಲ್ಲಿ ಅನುಮೋದಿಸಲಾಯಿತು.

ನಮ್ಮ ತ್ರಿವರ್ಣ ಧ್ವಜವು ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ನಾಲ್ಕು ರೇಖೆಗಳಿರುವ ನೀಲಿ ಬಣ್ಣದ ಅಶೋಕ ಚಕ್ರವಿದೆ.

ದೇಶದ ವೈವಿಧ್ಯಮಯ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ಅಮರತ್ವದ ಸಂಕೇತವೇ ನಮ್ಮ ರಾಷ್ಟ್ರಧ್ವಜ.

ನಮ್ಮ ಸ್ವತಂತ್ರ್ಯ ದೇಶದ ಸಮಗ್ರತೆಯ ಮತ್ತು ಐಕ್ಯತೆಯ ಸಂಕೇತವಾಗಿರುವ ರಾಷ್ಟ್ರ ಧ್ವಜದ ಅವಹೇಳನ, ಅಗೌರವ ಮತ್ತು ಅಪ ನಂಬಿಕೆಯು ರಾಷ್ಟ್ರ ದ್ರೋಹವಾಗಿರುತ್ತದೆ.

ಇನ್ನು ಭಾರತದ ಸಂವಿಧಾನ ಬದ್ಧವಾದ ತ್ರಿವರ್ಣ ಧ್ವಜದ ಉಳಿವಿಗಾಗಿ ಬಲಿದಾನಕ್ಕೂ ನಾವು ಸದಾ ಸಿದ್ದವಾಗಿರಬೇಕು ಮತ್ತು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ.

ಭಾರತ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರ‌ಲಾಲ್ ನೆಹರು ಅವರು 1947 ಜುಲೈ 22 ರಂದು ನಮ್ಮ ರಾಷ್ಟ್ರ ಧ್ವಜವನ್ನು ದೇಶಕ್ಕೆ ಅರ್ಪಿಸಿದರು.

ಇಂದಿಗೂ ಸಹ ದೇಶದ ರಾಷ್ಟ್ರೀಯ ಹಬ್ಬಗಳ ಆಚರಣೆ ಮತ್ತು ಇನ್ನಿತರೆ ವಿಶೇಷ ಸಂದರ್ಭದಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಬಳಸಲಾಗುತ್ತದೆ.

ಈ ಹಿನ್ನಲೆಯಲ್ಲಿ ಭಾರತದ ದೇಶದ ಧ್ವಜದ ಮಹತ್ವ ಮತ್ತು ಅದರ ಇತಿಹಾಸ ತಿಳಿಯದೇ ಕೇಸರಿ ಧ್ವಜವನ್ನೇ ರಾಷ್ಟ್ರ ಧ್ವಜ ಮಾಡಲು ಹೊರಟಿರುವ ಸಚಿವ ಕೆ ಎಸ್ ಈಶ್ವರಪ್ಪ ಅವರ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಲಿ.

ಜೊತೆಗೆ ಸಂವಿಧಾನ ಬದ್ಧವಾದ ರಾಷ್ಟ್ರೀಯ ಚಿಹ್ನೆಗಳನ್ನು ಅಗೌರವದಿಂದ ಕಾಣುತ್ತಿರುವುದಕ್ಕೆ ವಿಧಾನಸಭಾ ಅಧ್ಯಕ್ಷರು ಇವರ ಮೇಲೆ ಸದನದ ಒಳಗೆ ಕಠಿಣ ಕ್ರಮ ಜರುಗಿಸಲಿ ಎಂದು ಈ ಮೂಲಕ ಆಗ್ರಹಿಸುತ್ತೇನೆ!

ಇನ್ನು

ಚುನಾವಣೆ ಹತ್ತಿರ ಬಂತೆಂದರೆ ಬಿಜೆಪಿಗರಿಗೆ ದೇಶವೂ ಮುಖ್ಯವಲ್ಲ, ಜನರೂ ಮುಖ್ಯವಲ್ಲ ಎಂಬಂತಾಗಿದ್ದು ಇವರೊಳಗೆ ಸದಾ ಒಬ್ಬ ದೇಶದ್ರೋಹಿ ಅಡಗಿರುತ್ತಾನೆ ಎನ್ನುವುದಕ್ಕೆ ಈಶ್ವರಪ್ಪನವರ ಈ ಮಾತುಗಳೇ ಸಾಕ್ಷಿಯಾಗಿದೆ.

ಭಾರತದ ಸಂವಿಧಾನಕ್ಕೆ ದುರುದ್ದೇಶಪೂರ್ವಕವಾಗಿಯೇ ಅಗೌರವ ಸೂಚಿಸುವ ಇಂತಹವರು ಜನ ಪ್ರತಿನಿಧಿ ಸ್ಥಾನದಲ್ಲಿರುವುದು ನಮ್ಮ ಪ್ರಜಾಪ್ರಭುತ್ವದ ದುರ್ದೈವ.

ನಮ್ಮತ್ರಿವರ್ಣಧ್ವಜನಮ್ಮಹೆಮ್ಮೆ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend