ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲ್ಲೂಕು. ಕಾನಹೊಸಹಳ್ಳಿ.
ವ್ಯಕ್ತಿ ಕಾಣೆ ಪ್ರಕರಣ ದಾಖಲು.
ಕಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಚೌಡಾಪುರ ಗ್ರಾಮದ. ನಾಗೇಂದ್ರಪ್ಪ ತಂದೆ ಲೇಟ್ ಗೋವಿಂದಪ್ಪ 45 ವರ್ಷ ಈತನು ದಿನಾಂಕ7.2.2022 ರಂದು ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ಹೊಲಕ್ಕೆ ನೀರು ಕಟ್ಟುತ್ತೇನೆ ಎಂದು ಹೇಳಿ ಮನೆಯಿಂದ ಹೋದವನು ಮತ್ತೆ ಮನೆಗೆ ವಾಪಾಸು ಬಂದಿರುವುದಿಲ್ಲ ಈತನನ್ನು ಪತ್ತೆ ಹಚ್ಚಿ ಕೊಡಿ ಎಂದು ಕಾಣೆಯಾದ ವ್ಯಕ್ತಿ ನಾಗೇಂದ್ರಪ್ಪ ನ ಹೆಂಡತಿ ಶ್ರೀಮತಿ ಮಾರಕ್ಕ.ದಿನಾಂಕ. 9.2.2022 ರಂದು ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ. ಈ ದೂರಿನ ಅನ್ವಯ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣಚಾಮನೂರು ಹಾಗೂ ಹೆಚ್ ನಾಗರತ್ನಮ್ಮನವರು ಪ್ರಕರಣ ದಾಖಲಿಸಿಕೊಂಡು. ಕಾಣೆಯಾದ ವ್ಯಕ್ತಿ ನಾಗೆಂದ್ರ ಪನು ಎಲ್ಲಿಯಾದರೂ ಸುಳಿವು ಸಿಕ್ಕಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ತಿಳಿಸಲುಸಾರ್ವಜನಿಕರಲ್ಲಿ ಕೋರಿರುತ್ತಾರೆ.
ದೂರವಾಣಿ ಸಂಖ್ಯೆ- 9480805784
9964088544…

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
