;

ರಾಯಚೂರಿನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ನ್ಯಾಯದೀಶರನ್ನು, ಸೇವೆಯಿಂದ ವಜಾಗೊಳಿಸಿ ಹಾಗೂ ರಾಜ್ಯದಿಂದ ಗಡಿಪಾರು ಮಾಡುವಂತೆ ಪ್ರತಿಭಟನೆ ಮಾಡಲಾಯಿತು…!!!

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಸೋಮವಾರದಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ ಕೃಷ್ಣಪ್ಪ ಸ್ಥಾಪಿತ)ದಿಂದ ಜನವರಿ 26 ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ನಡೆದ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಇವರನ್ನು ಗಡಿಪಾರು ಮಾಡುವಂತೆ ಹಾಗೂ ವೃತ್ತಿಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆಯ ಮೂಲಕ ನೂರಾರು ಜನಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿ ಮಾನ್ಯ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಕೊಡುವುದರ ಮೂಲಕ ಮನವಿ ಮಾಡಿಕೊಂಡರು ಈ ಸಂದರ್ಭದಲ್ಲಿ ವಿ.ಎಸ್.ಎಲ್. ಸರ್ಕಲ್ ನಲ್ಲಿ ಎಲ್ಲ ಪ್ರತಿಭಟನಾಕಾರರು ಜಮಾಯಿಸಿ ಘೋಷಣೆಗಳು ಕೂಗುವುದರ ಜೊತೆಗೆ ಡಿ.ಎಸ್.ಎಸ್ ಸಂಚಾಲಕರಾದ ರಾಮಕೃಷ್ಣ ಹೆಗಡೆಯವರು ಪರಿಶಿಷ್ಟ ಜಾತಿಯಲ್ಲಿ 106 ಜಾತಿಗಳಿದ್ದು ಈ ದಿವಸ ಮಾದಿಗ ಸಮುದಾಯ ಹಾಗೂ ಕೆಲ ಸಮುದಾಗಳು ಮಾತ್ರ ಪ್ರತಿಭಟನೆ ಮಾಡಲು ಬೀದಿಗಳಿವೆ ಮಹಾಮಾನವತಾವಾದಿ ಸಂವಿಧಾನ ಶಿಲ್ಪಿ ಡಾ//ಬಾಬಾಸಾಹೇಬ್ ಸಾಹೇಬ್ ಅಂಬೇಡ್ಕರ್ ಫೋಟೋವನ್ನು ತೆಗೆದರೆ ಮಾತ್ರ ನಾನು ಧ್ವಜಾರೋಹಣ ಮಾಡುತ್ತೇನೆಂದು ಮನುವಾದ ಬುದ್ಧಿಯಿಂದ ಅವಮಾನ ಮಾಡಿದಂತ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಮಾದಿಗ ಸಮುದಾಯ ಮಾತ್ರ ಸಂಡೂರು ತಾಲೂಕಿನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೆ ಈ ಸಂದರ್ಭದಲ್ಲಿ ಡಿಎಸ್ಎಸ್ ನ ತಾಲೂಕು ಸಂಘಟನಾ ಸಂಚಾಲಕರುಗಳು ಮಲ್ಲೇಶ್ ಕಮತೂರ್ ಹನುಮಂತರೆಡ್ಡಿ ಸುಬ್ಬಣ್ಣ ಅಪ್ಪೇನಳ್ಳಿ ರಾಮಸ್ವಾಮಿ ಹೊಸಳ್ಳಿ ಕುಮಾರ YTG ದೇವೇಂದ್ರಪ್ಪ ದೌಲತ್ ಪುರ ಗಂಗಾಧರ ಭುಜಂಗನಗರ ಹಾಗೂ ನೂರಾರು ಪ್ರತಿಭಟನಕಾರರು ಭಾಗವಹಿಸಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *