;

ಸಿಂಧನೂರು ನಗರದ ಎಪಿಎಂಸಿಯ ಗಣೇಶ ದೇವಸ್ಥಾನದಿಂದ ಬೃಹತ್ ಪ್ರತಿಭಟನೆ…!!!

ಸಿಂಧನೂರು : ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಜೋಳ ಖರೀದಿಸಲು ಇರುವ ಮಾನದಂಡಗಳನ್ನು ಕೈಬಿಡಲು ಒತ್ತಾಯಿಸಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಎಪಿಎಂಸಿಯ ಗಣೇಶ ದೇವಸ್ಥಾನದಿಂದ ಬೃಹತ್ ಪ್ರತಿಭಟನೆ ಮೂಲಕ ಬಾಬು ಜಗಜೀವನ ವೃತ್ತ,ಬಸವ ವೃತ್ತದ ಮೂಲಕ ಗಾಂಧಿವೃತ್ತದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಜಮಾಯಿಸಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರಗಳನ್ನು ಕೂಗಿದರು.

ನಾಡಗೌಡ್ರು ರೈತರಿಗೆ ಸುಳ್ಳು ಹೇಳಿ ಅಧಿಕಾರ ಪಡೆದಿದ್ದಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಯವರು ನನ್ನ ಅಪಾಧನೆ ಮಾಡುತಿದ್ದಾರೆ. ಆದರೆ ಸುಳ್ಳು ಹೇಳುವುದು ನಾನಲ್ಲ ನೀವೂ ಎಂದು ತಿರುಗೇಟು ನೀಡಿದರು. ದಾಖಲೆ ಸಮೇತ ಕೊಡುತೇನೆ. ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು. ನಾನು ಸುಳ್ಳು ಹೇಳಿ ನಿಮ್ಮನ್ನು ಸೋತಿಸಿದ್ದಿನಿ ಎಂದು ಜನರಿಗೆ ದಾರಿ ತಪ್ಪಿಸುವ ಕೆಲಸ ಬಿಡಬೇಕು.ನಿಮ್ಮಹಣೆಬರಹದಲ್ಲಿ ಸೋಲುಬೇಕೆನ್ನುವುದು ಇದಿದ್ದರಿಂದ ನೀವು ಸೋತಿದೀರಿ. ನನ್ನ ಮೇಲೆ ಏಕೆ ಸುಳ್ಳು ಆಪಾದನೆ ಮಾಡುತ್ತಿರಿ ಎಂದರು.ನೀವು ಶಾಸಕರಿದ್ದಾಗ ಐಸಿಸಿ ಸಭೆ ನಡೆದಾಗ ಸಚಿವರಾದ ತನ್ವಿರ್ ಸೆಠ್ ಕರೆದುಕೊಂಡು ಬಂದು ಸನ್ಮಾನ ಇಟ್ಟುಕೊಡಿದ್ದಿರಿ. ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವಾಗ ನೀವು “ಸಿಂದನೂರ ಹಬ್ಬದ” ಉತ್ಸಾಹ ದಲ್ಲಿದ್ದೀರಿ, ಕುಮಾರಸ್ವಾಮಿ ಮುಖ್ಯಮಂತ್ರಿ ಇರುವಾಗ ಭದ್ರಾ ನದಿಯಿಂದ ಏಪ್ರಿಲ್ 10ರವರೆಗೆ ನೀರು ಬಿಡಿಸಿ ರೈತರ ನೆರವಿಗೆ ಬಂದಿದ್ದೇನೆ ಎಂದರು. ಕೇಂದ್ರ ಸರಕಾರ ಯಾವುದೇ ಬೆಳೆಯನ್ನನಾದರು ಖರೀದಿ ಮಾಡಿ ಅದನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಬಡವರಿಗೆ ಖರ್ಚು ಮಾಡಿ ಎಂದು ಆದೇಶ ಮಾಡಿದ್ದಾರೆ.
ಬೆಳಗಾವಿ ಅದಿವೇಶದಲ್ಲಿ ತಮ್ಮ ಮನೆಯಲ್ಲಿ ಮದುವೆ ಇದ್ದರೂ ಕೂಡ ಎರಡು ದಿನ ಭಾಗವಹಿಸಿ ರೈತ ಬೆಳೆದ ಜೋಳದ ಬಗ್ಗೆ ಸರಕಾರದ ಜೊತೆ ಚರ್ಚೆ ಮಾಡಿದ್ದೇನೆ. ವಿರೋಧಪಕ್ಷದ ನಾಯಕರ ಜೊತೆಯೂ ಕೂಡ ಜೊತೆ ಚರ್ಚೆಮಾಡಿದ್ದೇನೆ. ನಮ್ಮ ಭಾಗದ ಸಂಸದರು, ಯೋಜನಾ ಆಯೋಗದ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ ರವರ ಜೊತೆ , ಮುಖ್ಯಮಂತ್ರಿಗಳನ್ನು ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಇತ್ತೀಚಿಗೆ ನಡೆದ ಸಬ್ ಕಮಿಟಿ ಮೀಟಿಂಗ್ ನಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿ ಇದರ ಸಂಪೂರ್ಣ ವಿವರ ವಿಸ್ತಾರವಾಗಿ ತಿಳಿಸಿರುವೆ. ಇದನ್ನು ಒಂದು ವಾರದೊಳಗೆ ಸರಿಪಡಿಸದಿದ್ದರೆ ಹೋರಾಟ ಕೊನೆಯ ಭತ್ತಳಿಕೆಯ ಬಾಣ ವಿಧಾನಸೌಧದ ಮುಂದೆ ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಮಾತನಾಡಿದರು.

ನಗರದ ಮಿನಿ ವಿಧಾನಸೌಧದ ಮುಂಭಾಗದ ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ವೆಂಕಟರಾವ್ ನಾಡಗೌಡ ಮಾತನಾಡಿದರು.

ನಂತರ ಮಾತನಾಡಿದ ಮನುಜಮತ ಬಳಗದ ಅಧ್ಯಕ್ಷರಾದ ಡಿ.ಎಚ್ ಕಂಬಳಿ ಮಾತನಾಡಿ ಒಬ್ಬ ರೈತ ಎಕರೆಗೆ 25 ರಿಂದ 30 ಕ್ವಿಂಟಾಲ್ ಜೋಳ ಬೆಳೆಯುತ್ತಾರೆ.ಅದರೆ ಕೇವಲ 20 ಕ್ವಿಂಟಲ್ ಮಾತ್ರ ಖರೀದಿ ಮಾಡಿದರೆ ಒಬ್ಬ ರೈತ ಒಂದು ಎಕರೆ ಮಾತ್ರ ಬಿತ್ತನೆ ಮಾಡುತ್ತಾನಾ ? ಒಬ್ಬ ರೈತ ಕಡಿಮೆ ಅಂದ್ರು 5 ಎಕರೆ ಬಿತ್ತನೆ ಮಾಡಿ 100 ಕ್ವಿಂಟಲ್ ಜೋಳ ಬೆಳಿಯುತ್ತಾನೆ. ಸರ್ಕಾರ 20 ಕ್ವಿಂಟಾಲ್ ಮಾತ್ರ ಖರೀದಿ ಮಾಡಿದರೆ ಉಳಿದ 80 ಕ್ವಿಂಟಲ್ ಜೋಳ ರೈತ ಎಲ್ಲಿ ಮಾರಾಟ ಮಾಡಬೇಕುಎನ್ನುವ ಕಾಮನ್ ಸೆನ್ಸ್ ಇಲ್ಲದ ಸರ್ಕಾರ. ಕುರಿ ಕಾಯುವವನಿಗೆ,ದನ ಕಾಯುವವನಿಗೆ, ಓದದೇ ಇರುವ ಅವಿದ್ಯಾವಂತ ರೈತನಿಗೆ ತಿಳಿಯುತ್ತೆ ಸರ್ಕಾರಕ್ಕೆ ತಿಳಿಯಲ್ವಾ ? ಸರ್ಕಾರಕ್ಕೆ ದೊಡ್ಡ ದೊಡ್ಡ ಸಲಹೆ ಕೊಡುವಂತ ತಜ್ಞರಿದ್ದಾರೆ ಸರ್ಕಾರ ಅದಕ್ಕೊಂದು ವಿಭಾಗ ಮಾಡಿದೆ ಕೃಷಿ ಬೆಲೆ ಆಯೋಗ ತಜ್ಞರು ಏನು ಸಲಹೆ ಕೊಡುತ್ತಿದ್ದಾರೆ. ಕಾಮನ್ ಸೆನ್ಸ್ ಇಲ್ಲದ ಇಂತಹ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಹೇಳಿದರು.

ಪ್ರತಿ ರೈತರಿಂದ 20 ಕ್ವಿಂಟಾಲ್ ಎನ್ನುವ ಮಿತಿಯನ್ನು ಹಾಕಲಾಗಿದೆ. ಇದರಿಂದ ರೈತರಿಗೆ ಯಾವುದೇ ಲಾಭ ಆಗುವುದಿಲ್ಲ. ರೈತರು ಎಕರೆಗೆ 25 ಕ್ವಿಂಟಾಲ್ ಜೋಳ ಬೆಳೆಯುತ್ತಾರೆ. ತಾವು ಕೇವಲ 20 ಕ್ವಿಂಟಾಲ್ ಖರೀದಿಸಿದರೆ ಉಳಿದ ಜೋಳ ಎಲ್ಲಿ ಮಾರುವುದು ತಿಳಿಯದಾಗಿದೆ. ಕಳೆದ ಸಾರಿ ಇದೆ ರೀತಿ ಮಾಡಿದಾಗ ಅತಿ ಕಡಿಮೆ ಪ್ರಮಾಣದ ಖರೀದಿಯಾದ,ಈ ನಿಯಮವನ್ನುಸಡಿಲಿಸಿ ಎಕರೆಗೆ 15 ಕ್ವಿಂಟಾಲ್‌ನಂತೆ ಎಷ್ಟು ಎಕರೆ ಇರುತ್ತದೆ, ಅಷ್ಟು ಖರೀದಿಸಲಾಯಿತು. ಕಳೆದ ಸಾರಿ ರಾಜ್ಯದಲ್ಲಿ 8 ಲಕ್ಷ ಕ್ವಿಂಟಾಲ್ ( 80ಸಾವಿರ ಟನ್ ) ನಿಗದಿ ಮಾಡಲಾಗಿದೆ. ತಾವು ಮಿತಿಯನ್ನು ತೆಗೆಯದಿದ್ದರೆ ಗುರಿಯನ್ನು ಮುಟ್ಟಲಾಗದು, ತಾವು ಈಗಾಗಲೇ ರೈತರ ಎಲ್ಲಾ ಚೋಳ ಖರೀರಿಸುವುದಾಗಿ ಮಾಧ್ಯಮದ ಮೂಲಕ ತಿಳಿಸಿರುವಿರಿ ಮತ್ತು ಕೇಂದ್ರ ಸರ್ಕಾರ ಕೂಡ ಮಿತಿ ಹಾಕಿರುವುದಿಲ್ಲ. ಅಲ್ಲದೇ ತಾವು ಚೋಳ ಹಾಗೂ ರಾಗಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಹಂಚುವುದಾಗಿ ಕೂಡ ತಿಳಿಸಿರುವಿರಿ , ಆದ್ದರಿಂದ ತಮ್ಮ ಹೇಳಿಕೆಯಂತೆ ಜೋಳ ಬೆಳೆದಿರುವ ರೈತರಿಗೆ ಅನುಕೂಲ ಮಾಡಲು ಮಿತಿಯನ್ನು ತೆಗೆದುಹಾಕಿ, ಕಳೆದ ವರ್ಷದಂತೆ ಜೋಳ ಖರೀದಿ ಆದೇಶ ನೀಡಿ ರೈತರ ನೆರವಿಗೆ ಬರಬೇಕು ಮತ್ತು ಮಳೆಯಿಂದ ಹಾನಿಯಾದ ಭತ್ತ ಬೆಳೆದ ರೈತರಿಗೆ ಕೇಂದ್ರ ಸರಕಾರದ ಅನುದಾನದ ಜೊತೆಗೆ ರಾಜ್ಯ ಸರ್ಕಾರದ ಅನುದಾನ ಸೇರಿಸಿ ಹೆಕ್ಟೇರಿಗೆ 25 ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಿದ್ದೀರಿ,ಆ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವರಾಜ ನಾಡಗೌಡ,ಶಿವನಗೌಡ ಎನ್, ಅಭಿಷೇಕ ನಾಡಗೌಡ, ಹನುಮೇಶ ಕೆ, ನದಿಮುಲ್ಲಾ, ಅಜಯದಾಸರಿ, ಜಿಲಾನಿಪಾಷ, ಇನ್ನೂ ಅನೇಕ ರೈತರು ಪಕ್ಷದ ಮುಖಂಡರು ಭಾಗವಹಿಸಿದ್ದರು…..

 

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend