ಮೊಳಕಾಲ್ಮುರು: ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಸಾರಥಿಗಳು: ಹಬೀಬುಲ್ಲಾ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದ ಕನ್ನಡ ಭವನದಲ್ಲಿ ಸಮಾಜ ಪರಿವರ್ತನಾ ಸೇವಾ ಸಂಸ್ಥೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ “ಗುರುವಂದನಾ ಕಾರ್ಯಕ್ರಮ” ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ ಮುಖ್ಯ ಶಿಕ್ಷಕರಾದ ಹಬೀಬುಲ್ಲಾ ಅವರು, ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಸಾರಥಿಗಳು”ದೇಶ ಕಾವಲು ಕಾಯಲು ಸೈನಿಕರು ಹೇಗೆ ಮುಖ್ಯವೋ, ಹಾಗೆಯೇ ಮಕ್ಕಳ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯ.ಪ್ರೀತಿ, ಸೇವೆ, ತ್ಯಾಗ ಮೊದಲಾದ ಗುಣಗಳ ಪ್ರತಿರೂಪವೇ ಶಿಕ್ಷಕ, ಹಾಗಾಗಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದಾಗಿದೆ.
ಒಬ್ಬ ವೈದ್ಯ ನಿರ್ಲಕ್ಷ್ಯ ವಹಿಸಿದರೆ ರೋಗಿ ಸಾಯುತ್ತಾನೆ, ಒಬ್ಬ ಎಂಜಿನಿಯರ್ ನಿರ್ಲಕ್ಷ್ಯ ವಹಿಸಿದರೆ ಕಟ್ಟಡ ಬಿದ್ದು ಹೋಗುತ್ತದೆ. ಆದರೆ ಒಬ್ಬ ಶಿಕ್ಷಕ ನಿರ್ಲಕ್ಷ್ಯ ವಹಿಸಿದರೆ ಸಮಾಜದ ಸ್ವಾಸ್ಥ್ಯವೇ ಹಾಳಾಗುತ್ತದೆ. ಆದ್ದರಿಂದ ಶಿಕ್ಷಕರು ಹೆಚ್ಚು ಹೆಚ್ಚು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಸೈನಿಕರಾಗಬೇಕು, “ಪ್ರೀತಿಯಿಲ್ಲದ ಸೇವೆ ವ್ಯರ್ಥ”ಹಾಗಾಗಿ ಪ್ರೀತಿಯಿಂದ ಕೆಲಸ ಮಾಡಿ, ಮಕ್ಕಳಿಗೆ ಸ್ವಾವಲಂಬಿ, ಸ್ವಾಭಿಮಾನಿ ದೇಶಸೇವೆಯ ಪ್ರತೀಕವಾಗಿ ರೂಪಿಸಬೇಕು ಎಂದು ಹೇಳಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಾಪಣ್ಣ ಮಾತನಾಡಿ, “ಗುರುವಿನ ಗುಲಾಮನಾಗುವ ತನಕ, ದೊರೆಯದಣ್ಣ ಮುಕುತಿ”ಗುರುಗಳಿಗೆ ಪ್ರೀತಿಸಿ ಗೌರವಿಸೋಣ, ಗುರುಗಳಿಗೆ ವಿಧೇಯರಾಗದೆ ಹೋದರೆ ಕಲಿಯಲು ಸಾಧ್ಯವಾಗುವುದಿಲ್ಲ, ಒಳ್ಳೆಯ ಮೌಲ್ಯಗಳನ್ನು ಕಲಿಯಬೇಕು. ಪ್ರತಿಯೊಬ್ಬರ ಜೀವನದಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಹಾಗಿದ್ದಾಗ ಮಾತ್ರ ಜೇವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಕುಮಾರಿ ಪದ್ಮಾವತಿ ಮಾತನಾಡಿ ಗುರಿ ಇಲ್ಲದ ಬಾಳು, ಗರಿ ಇಲ್ಲದ ಹಕ್ಕಿಯಂತೆ ಹಾಗಾಗಿ ನಾವೆಲ್ಲರೂ ಗುರು, ಮತ್ತು ಗುರಿಯನ್ನು ಇಟ್ಟುಕೊಂಡು ಜೇವನದಲ್ಲಿ ವಿಜಯಿಶಾಲಿಗಳಾಗೋಣ ಶಿಕ್ಷಕರು ನಮಗೆ ಜ್ಞಾನ ತುಂಬಿ, ಘನತೆ, ಗೌರವದಿಂದ ಬದುಕುವುದನ್ನು ಕಲಿಸುವ ಭಾಗ್ಯಶಿಲ್ಪಿಗಳು ಆಗಿದ್ದಾರೆ. ಹಾಗಾಗಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ , ಆದರ್ಶದ ಹೆಜ್ಜೆ ಹಾಕುತ್ತಾ ಘನತೆಯ ಬದುಕನ್ನು ಬದುಕೋಣ ಎಂದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಎಸ್.ಪರಮೇಶ್, ನಿವೃತ್ತ ಶಿಕ್ಷಕರಾದ ರುದ್ರಯ್ಯ, ಶಿಕ್ಷಕರಾದ ನಾಗಭೂಷಣ್, ಕೆ. ಟಿ. ಸುವರ್ಣಬಾಯಿ, ಜಯಸುಧ, ತಿಮ್ಮಕ್ಕ, ಪಿ. ಪದ್ಮಾವತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಭಂಗಿ ಸುರಯ್ಯ, ತಿಪ್ಪೇಸ್ವಾಮಿ ಚಂದ್ರಣ್ಣ, ಮಲಿಯಣ್ಣ ಮೊದಲಾದವರು ಉಪಸ್ಥಿತರಿದ್ದರು…

ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
