;

ಮೈಲನಹಳ್ಳಿ ದಿನೇಶ್ ಗೆ ಕಲ್ಯಾಣ ರತ್ನ ಶ್ರೀ ಪ್ರಶಸ್ತಿಯ ಗರಿ…!!!

ಮೈಲನಹಳ್ಳಿ ದಿನೇಶ್ ಗೆ ಕಲ್ಯಾಣ ರತ್ನ ಶ್ರೀ ಪ್ರಶಸ್ತಿಯ ಗರಿ

ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯ ಯುವ ಮುಖಂಡ, ಧಾರ್ಮಿಕ & ಸಾಮಾಜಿಕ ಚಿಂತಕ ಮೈಲನಹಳ್ಳಿ ದಿನೇಶ್ ಕುಮಾರ್ ಅವರಿಗೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಸಸ್ತಾಪೂರ ಸುಕ್ಷೇತ್ರದ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಪ್ರಭುಗಳ ಆನಂದಾಶ್ರಮದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ್ ನವರು ಏರ್ಪಡಿಸಿದ್ದ ಬೀದರ್ ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕಲ್ಯಾಣ ರತ್ನ ಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಿದ್ದಾರೆ. ನಾಡಿನ ಅನೇಕ ಮಠಗಳ ಆಪ್ತರಾಗಿ ಕಳೆದ 15 ವರ್ಷಗಳಿಂದ ಧಾರ್ಮಿಕ ಸೇವೆಯಲ್ಲಿ ತೊಡಗಿರುವ ಇವರು ಅನೇಕ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ.

ಸಾಹಿತ್ಯ ಸೇವೆಯ ಜೊತೆಗೆ ಹಲವು ದಿನಪತ್ರಿಕೆಯಗಳಲ್ಲಿ ವಿಶೇಷ ಅಂಕಣಗಳ ಜೊತೆಗೆ ಜನಪರ ಸುದ್ದಿಗಳನ್ನ ಬರೆದಿರುವ ಇವರು ಯುವ ಪತ್ರಕರ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಶ್ರೀ ಯುತರಿಗೆ ಧಾರ್ಮಿಕ, ಸಾಮಾಜಿಕ ಮತ್ತು ಮಾಧ್ಯಮ ಸೇವೆಯನ್ನು ಪರಿಗಣಿಸಿ ಕಲ್ಯಾಣ ರತ್ನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದರು…..

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;