;

ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಆವರಣದಲ್ಲಿ 73 ನೆಯ ಗಣರಾಜ್ಯೋತ್ಸವನ್ನು ಆಚರಿಸಲಾಯಿತು…!!!

ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕು. ಕಾನಹೋಸಳ್ಳಿ.
ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಆವರಣದಲ್ಲಿ 73 ನೆಯ ಗಣರಾಜ್ಯೋತ್ಸವನ್ನು ಆಚರಿಸಲಾಯಿತು..
ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಆವರಣದಲ್ಲಿ ವಲಯದ ಮೇಲ್ವಿಚಾರಕರಾದ ಮಲ್ಲಪ್ಪ ಬೆಳ್ಳುಂಡಗಿ ಆಗಲೇ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.ನಂತರ ಮಾತನಾಡಿ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಯೊಬ್ಬರು ಕರೋನಾ ರೂಪಾಂತರಿ ವೈರಸ್ ಮೂರನೇ ಅಲೆ ವ್ಯಾಪಕವಾಗಿ ಹರಡಲು ಆರಂಭಿಸಿದೆ, ಪ್ರತಿಯೊಬ್ಬರೂ ಸ್ಯಾನಿಟೈಸರ್ ಮತ್ತು ಮುಖಕ್ಕೆ ಮಾಸ್ಕ್ ಹಾಕುವುದನ್ನು ಮರೆಯದಿರಿ. ಶಾಲೆಗಳಲ್ಲಿ ಹೋಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು. ಗುರುಗಳು ಹೇಳಿದ ಪಾಠ ಪ್ರವಚನಗಳನ್ನು ಕೇಳಿರಿ. ಸುಮಾರು ಮೂರು ವರ್ಷಗಳಿಂದ ಕರೋನಾ ಸಂಕಷ್ಟವನ್ನು ನಾವುಗಳೆಲ್ಲರೂ ಎದುರಿಸಿದ್ದೇವೆ ಅನುಭವ ಕೂಡ ಸಾರ್ವಜನಿಕರಿಗೂ ಎಲ್ಲರಿಗೂ ಆಗಿದೆ. ಕಾರಣ ತಾವುಗಳೆಲ್ಲರೂ ಕೋವಿಡ್-19 ರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ. ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳದೇ ಇರುವವರು. ತಪ್ಪದೇ ಲಸಿಕೆಯನ್ನು ಹಾಕಿಸಿಕೊಂಡು ಕರೋನ ಸಂಕಷ್ಟದಿಂದ ಪಾರಾಗಿರಿ. ನಂತರನಮ್ಮ ವಸತಿ ನಿಲಯದಲ್ಲಿವಿದ್ಯಾಭ್ಯಾಸ ಮಾಡಲು ಬಂದಿರುವ ನೀವೆಲ್ಲರೂ ಉತ್ತಮ ಮಟ್ಟದಲ್ಲಿ ವಿದ್ಯಾಭ್ಯಾಸ ಮಾಡಿ ನೀವು ಓದುವ ಶಾಲೆಗೂ ಮತ್ತು ನಮ್ಮ ವಸತಿ ನಿಲಯಕ್ಕೆ ಹಾಗೂ ತಂದೆ-ತಾಯಿಗಳಿಗೆ ಹೆಸರು ತರುವಂತಹ ಮಕ್ಕಳಾಗಿರಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ವಸತಿ ನಿಲಯದ ಅಡುಗೆ ಸಿಬ್ಬಂದಿಗಳಾದ,ಅಶೋಕ ಕುಮಾರ.ಕೆ. ಏ ಕೆ ಪ್ರಕಾಶ್, ನಾಗೇಶ್.. ರಾಧಮ್ಮ ರತ್ನಮ್ಮ. ಹಾಗೂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು. ಮತ್ತು ನಿಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು………

 

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;