;

ನ್ಯಾಯದೀಶರನ್ನು ಸೇವೆಯಿಂದ ವಜಾಗೊಳಿಸಲು – ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಒತ್ತಾಯ…!!!

ನ್ಯಾಯದೀಶರನ್ನು ಸೇವೆಯಿಂದ ವಜಾಗೊಳಿಸಲು – ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಒತ್ತಾಯ.

ಸಿಂಧನೂರು : ಜನವರಿ 26 ರಂದು ರಾಯಚೂರು ಜಿಲ್ಲಾ ನ್ಯಾಯಾಲಯದ ಸತ್ರ ನ್ಯಾಯಾಧೀಶರಾದ, ಮಲ್ಲಿಕಾರ್ಜುನಗೌಡ ಗಣ ರಾಜ್ಯೋತ್ಸವ ದಿನದಂದು ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದಿರಿಸಿ ದ್ವಜಾರೋಹಣ ಮಾಡಿದ್ದನ್ನು ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ. ಹಾಗೂ ಸದರಿ ನ್ಯಾಯಾಧೀಶರನ್ನು ದೇಶದ್ರೋಹದ ಪ್ರಕರಣ ದಾಖಲಿಸಿ, ಜೈಲಿಗೆ ತಳ್ಳಿ, ಸೇವೆಯಿಂದ ಅಮಾನತ್ ಮಾಡಬೇಕೆಂದು ಒಕ್ಕೂಟವು ಆಗ್ರಹಿಸಿದರು.

ಎಲ್ಲರೂ ಸಮಾನತೆಯಿಂದ, ಭ್ರಾತೃತ್ವದಿಂದ ಸಮಾನ ಹಕ್ಕುಗಳನ್ನು ಕೊಡಮಾಡಿರುವ ಸಂವಿಧಾನ ಶಿಲ್ಪಿ,ಬಾಬಾ ಸಾಹೇಬ ಅಂಬೇಡ್ಕರ್‌ಗೆ ಅವಮಾನ ಮಾಡಿದಂತಹ ನ್ಯಾಯಾಧೀಶರು ಈ ದೇಶದ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ನ್ಯಾಯ ಹೇಳುವವರೆ, ಅನ್ಯಾಯ ಮಾಡಿದರೆ, “ ಬೇಲಿಯೇ ಎದ್ದು ಹೊಲ ಮೇಯಿದರೆ” ಕಾಯುವವರು ಯಾರು ಎಂಬಂತಾಗಿದೆ. ಇದು ವ್ಯವಸ್ಥಿತವಾಗಿ, ಉದ್ದೇಶಪೂರ್ವಕವಾಗಿ, ಹಿಂದೂ ಮೂಲಭೂತವಾದಿ, ಮನುವಾದಿಗಳ, ಸಂಘಪರಿವಾರದ ಕೃಪಾಪೋಷಿತ ಹೇಯ ಕೃತ್ಯವಾಗಿದೆ. ಜಾತಿವ್ಯವಸ್ಥೆ, ವರ್ಣವ್ಯವಸ್ಥೆ ಲಿಂಗ ತಾರತಮ್ಯಗಳನ್ನು ಮುಂದುವರೆಸುವ ಸನಾತನವಾದಿ,ಗೋಲ್‌ವಾಲ್ಕರ್, ಸಾರ್ವಕರ್ ಸಾರಿರುವಂತ, ಜನತಂತ್ರ ವಿರೋಧಿ ನಡೆಯಾಗಿದೆ.ಕಾರಣ ನ್ಯಾಯಾಧೀಶ ಮಲ್ಲಿಕಾರ್ಜುನಗೌಡನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಸೇವೆಯಿಂದ ವಜಾಗೊಳಿಸಬೇಕು. ನ್ಯಾಯಾಂಗದ ವ್ಯವಸ್ಥೆಯಲ್ಲಿ ಮೀಸಲಾತಿ ಜಾರಿಯಾಗಬೇಕು. ಈ ಹಿಂದೆ ಇವರು ಕಾರ್ಯನಿರ್ವಹಿಸಿದ ರಾಯಚೂರು ಸೇರಿದಂತೆ ಎಲ್ಲಾ ನ್ಯಾಯಾಲಯಗಳಲ್ಲಿನ ದಲಿತರಿಗೆ ಸಂಬಂಧಿಸಿದ, ಕೇಸ್‌ಗಳನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದರು .

ನಗರದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದ ತಹಸೀಲ್ದಾರ ಕಛೇರಿವರೆಗೆ ದಿಕ್ಕಾರಗಳನ್ನು ಕೂಗುತ್ತಾ ಮಾನ್ಯ ದಂಡಾದಿಕಾರಿಗಳಾದ ಮಂಜುನಾಥ ಬೋಗಾವತಿಯವರ ಮುಖಾಂತರ ಮುಖ್ಯ ನ್ಯಾಯಾಧೀಶರು ಸರ್ವೋಚ್ಛ ನ್ಯಾಯಾಲಯ ನವದೆಹಲಿ, ಮುಖ್ಯ ನ್ಯಾಯಾಧೀಶರು
ಉಚ್ಛ ನ್ಯಾಯಾಲಯ
ಬೆಂಗಳೂರು ಇವರಿಗೆ ಮನವಿ ಪತ್ರ ಸಲ್ಲಿಸಿದರು .

ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರಾದ, ಎಂ.ಗಂಗಾಧರ, ಹನುಮಂತ ಹಂಪನಾಳ,ಭೀಮೇಶ ಕವಿತಾಳ, ಈರಣ್ಣ, ಹನುಮಂತಪ್ಪ ಗೋಮರ್ಸಿ, ಹುಲುಗಪ್ಪ ಮಲ್ಕಾಪೂರು, ನೀರುಪಾದಿ ಸಾಸಲಮರಿ, ಸೈಯದ್ ರಬ್ಬಾನಿ ಜಾಗೀರದಾರ ಘಟನೆಯ ಕುರಿತು ಮಾತನಾಡಿದರು.

ರಾಮಣ್ಣ ಗೋನ್ವಾರ್, ಸೈಯದ್ ಖಾದರ ಸುಭಾನಿ, ವಿಜಯಕುಮಾರ,ಮಾಬುಸಾಬ ಬೆಳ್ಳಟ್ಟಿ,ದೌಲಸಾಬ ದೊಡ್ಡಮನಿ, ಸುರೇಶ ಎಲೆಕೂಡ್ಲಿಗಿ, ಶರಣಬಸವ ಮಲ್ಲಾಪೂರ, ವಿರೇಶ ಹಂಚಿನಾಳ, ಪಿ.ಎಸ್.ಕೊಟ್ರೇಶ, ಶಿವುಕುಮಾರ ಕಟ್ಟಿಮನಿ, ಹೆಚ್.ಆರ್.ಹೊಸಮನಿ, ಮುದಿಯಪ್ಪ ಹನುಮನಗರ ಕ್ಯಾಂಪ್, ದೊಡ್ಡ ಬಸವ ಬೂದಿವಾಳ, ವಿರುಪಣ್ಣ ಕರೇಗುಡ್ಡ, ಲಕ್ಷ್ಮಣ ಬೋವಿ, ಹಂಸರಾಜ ಮಾಡಸಿರವಾರ, ಮೌಲಪ್ಪ ವಲ್ಕಂದಿನ್ನಿ, ಈರಪ್ಪ ಗೋಮರ್ಸಿ, ಪರಶುರಾಮ ತಿಡಿಗೋಳ, ರಾಮಕೃಷ್ಣ ಗಸ್ತಿ, ಸಂಗಮೇಶ ಮೂಳ್ಳೂರು, ಮಲ್ಲಿಕಾರ್ಜುನ್ ದೀನಸಮುದ್ರ, ಅಮರೇಶ ಪೂಜಾರಿ ಸೇರಿದಂತೆ ಒಕ್ಕೂಟದ ಸದಸ್ಯರೇಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು…

 

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;