ವಿಜಯನಗರ ಶ್ರೀ ಕೃಷ್ಣ ದೇವಾರಾಯ ವಿವಿಯ ವಿರುದ್ಧ. ಜಿ.ಬಿ.ಅರ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಂದ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ!!
ವಿಜಯನಗರ ಜಿಲ್ಲೆ ಹೂವಿನ ಹಡಗಲಿ: ಪಟ್ಟಣದ ಜಿ ಬಿ ಅರ್ ಕಾಲೇಜಿನ ವಿದ್ಯಾರ್ಥಿಗಳು ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ, ಪರೀಕ್ಷಾ ಶುಲ್ಕವನ್ನ ಹೆಚ್ಚಿಸಿದ ಕಾರಣಕ್ಕೆ ವಿವಿಯ ನಡೆಯನ್ನ ಖಂಡಿಸಿ ಪರೀಕ್ಷೆ ಬಹಿಷ್ಕಾರ ಮಾಡಿ ಪ್ರತಿಭಟಿಸಿದರು.
ಕಲ್ಯಾಣ ಕರ್ನಾಟಕ ಭಾಗ ಅತ್ಯಂತ ಹಿಂದೂಳಿದಿದ್ದು. ಜನರೆಲ್ಲ.ಮೂಲಭೂತ ಅವಶ್ಯಕತೆಗೆ ಕಷ್ಟ ಪಡುವ ಮತ್ತು ಕೋವಿಡ್ ಸೋಂಕಿನಿಂದ ಅರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಶುಲ್ಕ ಹೆಚ್ಚಿಸಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ ಪದವಿಯ 1.3..5 ನೇ ಸೆಮಿಸ್ಟರ್ ನ ಪರೀಕ್ಷೆ ಗಳು ಫೆಬ್ರವರಿ – ಮಾರ್ಚ್ ನಲ್ಲಿ ನಡೆಯುತ್ತವೆ .ಪ್ರತಿ ವರ್ಷ ಪರೀಕ್ಷೆ ಶುಲ್ಕ 150 ರೂ ಇರುತ್ತಿತ್ತು.. ಆದರೆ ಈ ವರ್ಷ 1050 ರೂಪಾಯಿಗೆ ಹೆಚ್ಚಿಸಿದ್ದಾರೆ. ಆದ ಕಾರಣ ಮೊದಲಿನ ಪರೀಕ್ಷಾ ಶುಲ್ಕವನ್ನ ಮುಂದುವರೆಸಬೇಕು ಎಂಬುದು ವಿದ್ಯಾರ್ಥಿಗಳ ಮನವಿ.
ವರದಿ : ಅಜಯ. ಚ
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
