ಸಿಂಧನೂರು :73ನೇ ಗಣರಾಜ್ಯೋತ್ಸವದ ನಿಮಿತ್ಯ ಮಿನಿ ವಿಧಾನಸೌಧದ ಆವರಣದಲ್ಲಿ ಮಹಾತ್ಮ ಗಾಂಧಿಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಶಾಸಕರಾದ ವೆಂಕಟರಾವ್ ನಾಡಗೌಡ, ದಂಡಾದಿಕಾರಿಗಳಾದ ಮಂಜುನಾಥ ಬೋಗಾವತಿ ರವರು ಪುಷ್ಪನಮನ ಸಲ್ಲಿಸಿ ನಂತರ ಧ್ವಜಾರೋಹಣಾ ನೆರವೇರಿಸಿದರು.
ಸ್ವತಂತ್ರ ನಂತರ ಸರ್ಕಾರ ರಚನೆಯಾದ ಮೇಲೆ ಅದಕ್ಕೊಂದು ಚೌಕಟ್ಟು ಮಾಡಿದ ದಿನವಿದು.
ಭಾರತಕ್ಕೆ ಉತ್ತಮ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಸಂವಿಧಾನದ ರಚನೆಗೆ, ರಚನಾ ಸಮಿತಿಯನ್ನು ನೇಮಿಸಲಾಗಿತ್ತು.1947 ರ ಆಗಸ್ಟ್ 29 ರಂದು ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದವರು ಡಾ.ಬಿ.ಆರ್ ಅಂಬೇಡ್ಕರ್ ನವೆಂಬರ್ 26, 1949 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು, ಪ್ರಜಾಪ್ರಭುತ್ವ ಸರ್ಕಾರ ವ್ಯವಸ್ಥೆಯೊಂದಿಗೆ ಜನವರಿ 26, 1950 ರಂದು ಸಂವಿಧಾನವನ್ನು ಭಾರತದಲ್ಲಿಜಾರಿಗೊಳಿಸಲಾಯಿತು. ಸಂವಿಧಾನದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ,ಬಿ,ಆರ್, ಅಂಬೇಡ್ಕರ್ ರವರ ಸುದೀರ್ಘ ಚರ್ಚೆ ಮತ್ತು ಅವರ ಅನುಭವದ ನಂತರ ವಿಶಾಲವಾದ ಭಾರತಕ್ಕೆ ಭವ್ಯವಾದ ಸಂವಿಧಾನ ರಚನೆ ಮಾಡಿದರು. ನಾವೆಲ್ಲಾ ಆ ಸಂವಿಧಾನ ದಲ್ಲಿ ಕೆಲಸ ಮಾಡಬೇಕು ಎನ್ನುವ ಉದ್ದೇಶ ದಿಂದ ಸಂವಿಧಾನ ರಚನೆ ಮಾಡಿದ್ದಾರೆ. ಸಂವಿಧಾನ ನಾನು ರಚನೆ ಮಾಡಿ ಕೊಟ್ಟಿದ್ದೇನೆ ಜಾರಿಗೆ ತರೋವ ಜನರ ಮೇಲೆ ಸಂವಿಧಾನ ನಿಂತಿದೆ. ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ತನ್ನ ಕೆಲಸವನ್ನು ಮಾಡುತ್ತದೆ. ಹಾಗಾಗಿ ಎಲ್ಲಾ ಗ್ರಂಥಗಳಿಗಿಂತ ಸಂವಿಧಾನಕ್ಕೆ ವಿಶೇಷ ಗೌರವ ಇದೆ. ಸಂವಿಧಾನದ ಗೌರವ ದೊಂದಿಗೆ ಭವ್ಯ ಭಾರತವನ್ನು ಕಟ್ಟೋಣ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ ಅವರ ಕನಸು ನನಸು ಮಾಡುವ ದಿಕ್ಕಿನಲ್ಲಿ ನಡೆಯೋಣ ಎಂದು ಹೇಳಿದರು.ನಂತರ ಕರೋನಾದ ಬಗ್ಗೆ ಜಾಗೃತರಾಗಿ ಮಾಸ್ಕ್ ಧರಿಸಿ,ಅಂತರ ಕಾಯ್ದುಕೊಂಡು ರೋಗ ಬರದ ಹಾಗೇ ಜಾಗ್ರತೆ ವಹಿಸಿ ನಮ್ಮಬದುಕನ್ನು ನಾವೇ ಕಟ್ಟಿಕೊಳ್ಳಬೇಕು ನಾವು ಬದುಕಿದರೆ ಬದುಕು, ಇಲ್ಲವಾದರೆ ಶೂನ್ಯ ಹಾಗಾಗಿ ಬದುಕಬೇಕು ಎನ್ನುವವರು ಮಾಸ್ಕ್ ಧರಿಸಿ ಎಚ್ಚರವಹಿಸಿ ಎಂದು ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು.
ನಗರದ ಮಿನಿ ವಿಧಾನಸೌಧದ ಆವರಣದಲ್ಲಿ 73ನೇ ಗಣರಾಜ್ಯೋತ್ಸವದ ದ್ವಜರೋಹಣವನ್ನು ನೆರವೇರಿಸಿ ನಂತರ ತಾಲೂಕಿನಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಅಮರೇಗೌಡ ವಿರುಪಾಪುರ, ಬಸವರಾಜ ನಾಡಗೌಡ, ಮಲ್ಲಿಕಾರ್ಜುನ ಪಾಟೀಲ್, ತಾಲೂಕು ಆಡಳಿತ ವರ್ಗ,ಶಿಕ್ಷಕರು,ವಿದ್ಯಾರ್ಥಿಗಳು,ವಿವಿಧ ಸಂಘಟನೆ ಮುಖಂಡರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
