;

ಹಿರೇಕುಂಬಳಗುಂಟೆ ಎಸ್ಡಿಎಂಸಿ ಅಧ್ಯಕ್ಷರಿಂದ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿಗ್ರಾಮವಾದ ಹಿರೇಕುಂಬಳಗುಂಟೆ ಉ.ಸ.ಹಿ.ಪ್ರಾ.ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸರಳವಾಗಿ ನೆಡೆಯಿತು.ನೂತನ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ದಾದಾಪೀರ್ ಸಾಹೇಬ್ ಕಾರ್ಯಕ್ರದ ಅಧ್ಯಕ್ಷರಾಗಿ ಧ್ವಜಾರೋಹಣ ನೆರವೇರಿಸಿದರು.
ಅವರು ಶಾಲಾ ಅಭಿವೃದ್ಧಿ ಕಾರ್ಯಕ್ಕೆ ತುಂಬುಮನದ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮ ಕುರಿತು ಶ್ರೀ ಮಂಜುನಾಥ ಅವರು “ಪ್ರತಿ ಭಾರತೀಯರ ಮನದಲ್ಲಿ ರಾಷ್ಟ್ರೀಯತೆಯನ್ನು, ದೇಶಭಕ್ತಿಯ ಭಾವನೆಯನ್ನು ,ಪ್ರತಿ ಪ್ರಜೆಯುಸಹ ದೇಶಕ್ಕಾಗಿ ತನ್ನದೇ ಕೊಡುಗೆಯನ್ನು ನೀಡುವಂತಹ ಸುದಿನ.” ಮಕ್ಕಳ ಛದ್ಮವೇಷಗಳು ಅತ್ಯರ್ಕಷಕ ವಾಗಿದ್ದವು. ಎಂದು ನುಡಿದರು.
ಮುಖ್ಯಗುರುಗಳಾದ ಶ್ಯಾಮಸುಂದರ ಸಪಾರೆ ಯವರು ನಮ್ಮ ನಾಡು “ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು” ಕಾರಣ ಇಳಕಲ್ಲು,ಮೊಳಕಾಲ್ಮೂರು ಸೀರೆಗಳನ್ನು ಬಳಸಿ ದಕ್ಷಿಣ ಭಾರತದ ಏಕೈಕ ರಾಜ್ಯವಾಗಿ ಪಥಸಂಚಲನದಲ್ಲಿ ಭಾಗಿಯಾಗಿ ಕರಕುಶಲತೆಯನ್ನು ಎತ್ತಿಹಿಡಿದಿದೆ. ಹಾಗೆಯೇ ಪಂಚ ಪದ್ಮಗರಿಗಳನ್ನು ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮನಾಡು ಬಿಂಬಿತವಾಗಿದೆ .ಮಕ್ಕಳೇ ತಮ್ಮ ಭವಿಷ್ಯ ತಮ್ಮ ಕೈಯಲ್ಲಿದ್ದು ಸಾಧಿಸಿ ದೇಶಸೇವೆ ಮಾಡುವ ಛಲದಿಂದ ಮುನ್ನುಗ್ಗಿರಿ ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರಾದ ಶ್ರೀ ಸೋಮಲಿಂಗಪ್ಪ,ಕುಬೇರಗೌಡ, ನಿಂಗಪ್ಪ,ಶಿವಮೂರ್ತಿ, ರಫೀಜಾಬೀ, ನೇತ್ರಾವತಿ, ಶಮೀಂ ,ಶಿಕ್ಷಕರಾದ, ಶಾರದ,ರೂಪ,ಹನುಮಂತರಡ್ಡಿ,ರಫೀಕ್, ಬಸವರಾಜ,ಶರಣಯ್ಯ, ಪೋಷಕರು, ನಾಗರಿಕರು, ಮಕ್ಕಳು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;