ಸಂಗೀತ, ನೃತ್ಯಗಳಿಂದ ಜೀವನದಲ್ಲಿ ಶಿಸ್ತು ಹಿರಿಯ ಸಾಹಿತಿ ಡಾ. ವೃಷಭೇಂದ್ರ ಚಾರ್.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ದಿವಂಗತ ಅಕ್ಕಸಾಲಿ ನೀಲಕಂಠ ಆಚಾರಿ ಹಾಗೂ ದಿವಂಗತ ಇವರ 46 ವರ್ಷದ ಪುಣ್ಯಸ್ಮರಣೆ ನಿಮಿತ್ತ ಮನೆ ಅಂಗಳದಲ್ಲಿ ಸಂಗೀತ ಕಾರ್ಯಕ್ರಮ ಜರಗಿತು.
ಹಿರಿಯ ಸಾಹಿತಿ ಡಾ. ವೃಷಭೇಂದ್ರ ಚಾರ್ ಮಾತನಾಡಿ ಸಂಗೀತ ನೃತ್ಯ ಕಲೆಗಳಿಂದ ಹೃದಯ ಸಂಪನ್ನತೆ. ಸಂಸ್ಕೃತಿ ಮತ್ತು ಮಾನವೀಯ ನೈತಿಕತೆ ಹೆಚ್ಚಿಸುವುದಲ್ಲದೆ ಶಿಸ್ತುಬದ್ಧ ಜೀವನ ಸಾಗಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಭಾಗವಹಿಸಿದ ಕಲಾವಿದರಾದ ಸೋಮಶೇಖರಯ್ಯ ಅಗ್ರಹಾರ. ನಾಗರಾಜಯ್ಯ ಅಗ್ರಹಾರ. ವೀರೇಶ ಕನಕಗಿರಿ. ಸುನಿಲ್ ಆಚಾರ್. ಲೋಕೇಶ್. ಕುಮಾರಸ್ವಾಮಿ ಸೊಂಡೂರು. ನಾಗರಾಜ್ ನಿಂಬಳಗೆರೆ ಹಾಗೂ ಮಾರಿಕಾಂಬ ಭಜನಾ ಮಂಡಳಿಯ ಸದಸ್ಯರು ಹಾಗೂ ಇದೇ ಸಂದರ್ಭದಲ್ಲಿ ಎ ನೀಲಕಂಠ ಆಚಾರ್. ನಿರಂಜನ್ ಆಚಾರ್ ಶರಣಗೌಡರು ರೇಣುಕಾರಾಧ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು..

ವರದಿ. ವಿರೇಶ್, ಕೆ, ಎಸ್, ಹೊಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
