;

ಹಣಕ್ಕಾಗಿ ಕುಟುಂಬಸ್ಥರ ಖೆಡ್ಡಕ್ಕೆ, ಬಂದಿಸುವಲ್ಲಿ ಯಶಸ್ವಿಯಾದ ಸರ್ಜಾಪುರ ಪೊಲೀಸರು…!!!

ಹಣಕ್ಕಾಗಿ ಕುಟುಂಬಸ್ಥರ ಖೆಡ್ಡಕ್ಕೆ

ಆನೇಕಲ್ : ತಮ್ಮ ಪರಿಚಯಸ್ಥರ ಮನೆಯಲ್ಲಿ ಒಡವೆಗಳನ್ನು ಅಡವಿಟ್ಟು ಕಳ್ಳತನ ಆರೋಪ ಹೊರಿಸಿ ಸುಲಭ ರೀತಿಯಲ್ಲಿ ಹಣ ಮಾಡುತ್ತಿದ್ದ ಗ್ಯಾಂಗ್ ನ್ನ ಸರ್ಜಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಂಧಿತ ಆರೋಪಿಗಳಿಂದ 25 ಲಕ್ಷ ಮೌಲ್ಯದ ಚಿನ್ನಾಭರಣ ಬೆಳ್ಳಿ ನಗದು ವಶಪಡಿಸಿಕೊಳ್ಳಲಾಗಿದೆ.

ಹಣಕ್ಕಾಗಿ ಕುಟುಂಬವೇ ಕಳ್ಳರಾದ ಇಂಟರೆಸ್ಟಿಂಗ್ ಸ್ಟೋರಿ ಇದು. ತಮ್ಮ ಬಳಿ ಇರುವ ಎಲ್ಲಾ ಚಿನ್ನಾಭರಣವನ್ನು ಪರಿಚಿತನೊಬ್ಬನ ಮೂಲಕ ಗಿರವಿ ಇಟ್ಟು ಹಣ ಪಡೆದುಕೊಳ್ಳುವುದು ಬಳಿಕ ಒಡವೆಗಳು ಕಳುವಾಗಿದೆ ಎಂದು ದೂರು ನೀಡುವುದು..ನಾವು ದೇವಸ್ಥಾನಕ್ಕೆ ಹೊರ ಹೋಗಿದ್ದಾಗ ಈ ವೇಳೆ ಒಡವೆ ಕಳ್ಳತನವಾಗಿದೆ ಎಂದು ಆರೋಪಿಗಳಲ್ಲಿ ಒಬ್ಬನಾದ ರವಿ ಪ್ರಕಾಶ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡದರು

ಎಲ್ಲಾ ಆಯಾಮಗಳ ತನಿಖೆ ನಡೆಸಿದ ನಂತರ
ಕೊನೆಗೆ ಮನೆಯವರ ಮೇಲೆ ಸಂಶಯ ವ್ಯಕ್ತಪಡಿಸಿ ತನಿಖೆಗಿಳಿದಾಗ ಸ್ಪೋಟಕ ಸತ್ಯ ಬಯಲಾಗಿತ್ತು.

ಆರೋಪಿಗಳು ಈ ಹಿಂದೆ ಸಹ ಯಶವಂತಪುರ ಸೇರಿದಂತೆ ಎರಡು ಪೊಲೀಸ್ ಠಾಣೆಯಲ್ಲಿ ಇದೇ ರೀತಿ ಒಡವೆ ಕಳವು ಪ್ರಕರಣ ದಾಖಲು ಮಾಡಿ ಒಡವೆ ಪಡೆದುಕೊಂಡಿದ್ದರು ಎಂಬ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಇಡೀ ಮನೆ ಮಂದಿಯನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಅಸಲಿ ಕಹಾನಿ ಬಯಲಾಗಿದೆ.

ಕುಟುಂಬದದ ಯಜಮಾನ ರವಿ ಪ್ರಕಾಶ್ , ಮಗ ಮಿಥುನ್ ಕುಮಾರ್, ಆತನ ಹೆಂಡತಿ ಸಂಗೀತಾ, ತಂಗಿ ಆಶಾ ಮತ್ತು ಆಕೆಯ ಗಂಡ ಚರಣ್ ಹಾಗೂ ಮಿಥುನ್ ಕುಮಾರ್ ಪ್ರಯತಮೆ ಅಸ್ಮಾ ಹಾಗೂ ಸ್ನೇಹಿತ ದೀಪಕ್ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ..

 

ವರದಿ. ಸುರೇಶ್. ಕೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;