ಮಾನಸಿಕ ಖಿನ್ನತೆಯನ್ನು ಮನಸಲ್ಲಿ ಅಳವಡಿಸಿಕೊಳ್ಳದೆ ಮನಸ್ಸಿನಿಂದ ತೆಗೆದುಹಾಕಿ — ಹರ್ಷಾನಂದ ಗುರೂಜಿ.
ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಹೆಸರಾಂತ ಆಧ್ಯಾತ್ಮಿಕ ಯೋಗ ಚಿಂತಕರಾದ ಹರ್ಷಾನಂದ ಗುರೂಜಿ ಸರಳ ಶಾಂತಿ ಯೋಗ ಕೇಂದ್ರ ಹಿರೇವಂಕಲಕುಂಟಾ ತಾ/ ಯಲಬುರ್ಗ” ಹಿರಿಯ ನಾಗರಿಕರಿಗೆ ತಿಳುವಳಿಕೆ ಹಾಗೂ ಮನಸ್ಸಿನ ನೆಮ್ಮದಿ ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಮಾಜದಲ್ಲಿ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಪಡೆದ ನೀವುಗಳೆಲ್ಲ ನಿಮ್ಮ ಮನಸ್ಸಿನಲ್ಲಿರುವ ಮಾನಸಿಕ ಖಿನ್ನತೆಯನ್ನು ಮನಸ್ಸಿನಲ್ಲಿ ಅಳವಡಿಸಿಕೊಳ್ಳದೆ ತೆಗೆದುಹಾಕಿ ಉತ್ತಮ ಆರೋಗ್ಯದಿಂದ ಇರುವಷ್ಟು ದಿನ ಬಾಳಿ ಬದುಕಬೇಕು. ಜೀವನದಲ್ಲಿ ಮೂರು ಅಂಶಗಳೆಂದರೆ ಬರುವುದು, ಇರುವುದು, ಹೋಗುವುದು ಈ ಜೀವನ ಎನ್ನುವುದು ಒಂದು ನಾಟಕ ಇದ್ದಹಾಗೆ ಇದರಲ್ಲಿ ಹಲವಾರು ಘಟನೆಗಳಲ್ಲಿ ನಾವು ಸಿಲುಕಿ ಹಾಕಿಕೊಂಡು ನಂತರ ಅದಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕಾಗುತ್ತದೆ. ಇಂದಿನ ಪರಿಸ್ಥಿತಿಗೆ ನಮ್ಮ ಜೀವನದ ಘಟನೆಗಳನ್ನೆಲ್ಲಾ ಮರೆತು ಕಡೆಯ ಕ್ಷಣದಲ್ಲಿ ಸುಖ-ಶಾಂತಿ-ನೆಮ್ಮದಿ ಬೇಕಂದರೆ ನೀವುಗಳೆಲ್ಲ ಆಶ್ರಮದಲ್ಲಿ ಕರ್ತವ್ಯ ಮಾಡುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗಳಿಗೂ ಸಹ ಪ್ರೀತಿಯನ್ನು ಧಾರೆ ಎರೆದಾಗ ಅವರ ಭಾವನೆಗಳನ್ನು ಅರಿತುಕೊಂಡು ಅವರೊಂದಿಗೆ ಬೆರೆತು ಬಾಳಿ ಬದುಕಬೇಕು. ಬರುವುದು ಎಂದರೆ, ಹುಟ್ಟು ಇರುವುದು ಎಂದರೆ ಜೀವನ, ಹೋಗುವುದು ಎಂದರೆ ಸಾವು ಈ ಮೂರರ ಮಧ್ಯೆ ಮಾನವನು ದಾನವ ಸಾಧಕ ಸಂಪತ್ಬರಿತ ಬಡವ ಬಿಕ್ಷುಕ ಎನ್ನುವ ಹಲವಾರು ಪದಗಳೊಂದಿಗೆ ಜಗತ್ತಿನಲ್ಲಿ ಜೀವಿಸುತ್ತಾನೆ. ಆದುದರಿಂದ ನೀವೆಲ್ಲಾ ನಿಮ್ಮದೇ ಆದಂತಹ ಬದುಕನ್ನು ಕಾರುಣ್ಯ ಕುಟುಂಬದಲ್ಲಿ ಕಟ್ಟಿ ಕೊಂಡಿದ್ದೀರಿ ಇಷ್ಟಕ್ಕೂ ನೀವು ಪುಣ್ಯ ಮಾಡಿರುವುದರಿಂದ ಇಂತಹ ಕಾರುಣ್ಯ ಕುಟುಂಬಕ್ಕೆ ಹಿರಿಯರಾಗಿದ್ದೀರಿ ಎಂದು ಹರ್ಷಾನಂದ ಗುರೂಜಿಯವರು ಹಿರಿಯ ಅನಾಥ ನಾಗರಿಕರಿಗೆ ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಈ ಪ್ರವಚನದ ಮೂಲಕ ಅವರ ಮನಸ್ಸಿನಲ್ಲಿರುವ ಮಾನಸಿಕ ಖಿನ್ನತೆಯನ್ನು ತೆಗೆದು ಹಾಕಿದರು.
ಈ ಆಧ್ಯಾತ್ಮಿಕ ಯೋಗ ಪ್ರವಚನದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ, ಮೇಲ್ವಿಚಾರಕರಾದ ಸುಜಾತ ಚನ್ನಬಸವಸ್ವಾಮಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಗಳಾದ ನಾಗೇಶ ಸ್ವಾಮಿ,ವ್ಯವಸ್ಥಾಪಕರಾದ ಗೀತಾ ಕುಲಕರ್ಣಿ ಹಾಗೂ ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿಗಳಾದ ಅವಿನಾಶ್ ದೇಶಪಾಂಡೆ, ಸಮಾಜಸೇವಕರಾದ ಚನ್ನ ವೀರನಗೌಡ,ಸ್ಥಳೀಯರಾದ ಶರಣಬಸವರಾಜ ಪಿಡಬ್ಲ್ಯೂಡಿ ಕ್ಯಾಂಪ್ ಉಪಸ್ಥಿತರಿದ್ದರು. ನಂತರ ಗುರೂಜಿಯವರಿಗೆ ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
