;

ಸಿಂಧನೂರು : ಶಾಸಕ ನಾಡಗೌಡರಿಂದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನೆ…!!!

ಸಿಂಧನೂರು : ಶಾಸಕ ನಾಡಗೌಡರಿಂದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನೆ.

ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂದು ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಬಾರ್ಡ್ ಯೋಜನೆಯಲ್ಲಿ ಸುಮಾರು 1200.ರೂ ಲಕ್ಷ ವೆಚ್ಚದಲ್ಲಿ 60 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಈ ಸೌಲಭ್ಯವನ್ನು ಗ್ರಾಮೀಣ ಜನರು ಉಪಯೋಗಿಸಿಕೊಳ್ಳಿ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು. ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಹೊಸ ಶಾಲೆ ಕಟ್ಟಲಾಗಿದೆ.ಪ್ರತಿಯೊಬ್ಬರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ,ಗ್ರಾಮೀಣ ಜನರು ಅತೀ ಹೆಚ್ಚು ನೀರನ್ನು ಪೋಲು ಮಾಡಲಾಗುತ್ತಿದೆ ಎಂದರು. ಈ ಆಸ್ಪತ್ರೆಯ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಉತ್ತಮ ಗುಣಮಟ್ಟದಲ್ಲಿ 15 ತಿಂಗಳ ಒಳಗೆ ಕೆಲಸ ಮುಗಿಸಿ ಎಂದು ಗುತ್ತೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಿಂಧನೂರು ವತಿಯಿಂದ ಇಂದು ಕಲ್ಲೂರು ಗ್ರಾಮದಲ್ಲಿ ನಬಾರ್ಡ್ ಯೋಜನೆಯಲ್ಲಿ 60 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನಾ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಲ್ಲೂರು ಹತ್ತಿರ ಇರುವ ಎರಡು ಎಕರೆ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ 60 ಹಾಸಿಗೆಯುಳ್ಳ ತಾಯಿ ಮಕ್ಕಳ ಆಸ್ಪತ್ರೆಯಗುದ್ದಲಿಪೂಜೆಯನ್ನು ಕ್ಷೇತ್ರದ ಸಂಸದರಾದ ಕರಡಿ ಸಂಗಣ್ಣ ಮತ್ತು ಶಾಸಕ ವೆಂಕಟರಾವ್ ನಾಡಗೌಡ ಗುದ್ದಲಿ ಪೂಜೆ ನೆರವೇರಿಸಿದರು ನಂತರ 79 ಲಕ್ಷ ರೂಪಾಯಿ ವೆಚ್ಚದಲ್ಲಿ ಕಲ್ಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳು ಕೊಠಡಿಗಳನ್ನು ಉದ್ಘಾಟಿಸಿದರು.36 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಭೂತಲದಿನ್ನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳು ಉದ್ಘಾಟನೆ ಮಾಡಿದರು.ನಂತರ ವಿವಿಧ ವಾರ್ಡಗಳಲ್ಲಿ ತಮ್ಮ ಹುಟ್ಟು ಹಬ್ಬವನ್ನು ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಳ್ಳುತ್ತ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ವಾರ್ಡ್ ನಂ 31ರಲ್ಲಿ 36 ಲಕ್ಷ ವೆಚ್ಚದಲ್ಲಿ ಸಿಸಿ ಮತ್ತು ಚರಂಡಿ, ವಾರ್ಡ್ ನಂ 30 ರಲ್ಲಿ ಸಿಸಿ ಮತ್ತು ಚರಂಡಿ 27 ಲಕ್ಷ,ವಾರ್ಡ್ ನಂ 5 ರಲ್ಲಿ ಸಿಸಿ ಮತ್ತು ಚರಂಡಿ 25 ಲಕ್ಷ, ವಾರ್ಡ್ ನಂ 10ರಲ್ಲಿ ಸಿಸಿ ಮತ್ತು ಚರಂಡಿ ನಿರ್ಮಾಣ 25 ಲಕ್ಷ,ವಾರ್ಡ ನಂ 12 ಮತ್ತು 13 ರಲ್ಲಿ ಸಿಸಿ ಮತ್ತು ಚರಂಡಿ 75 ಲಕ್ಷ, ವಾರ್ಡ್ ನಂ 14 ರಲ್ಲಿ ಶಂಕರ್ ಆಸ್ಪತ್ರೆ ಹತ್ತಿರ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ 50ಲಕ್ಷ,ವಾರ್ಡ್ ನಂ 16ರಲ್ಲಿ 25ಲಕ್ಷ ಮತ್ತು 17ರಲ್ಲಿ 27ಲಕ್ಷ ಸಿಸಿರಸ್ತೆ ಹಾಗೂ ಚರಂಡಿ ನಿರ್ಮಾಣ ವಾರ್ಡ್ ನಂ19ರಲ್ಲಿ ಸಿಸಿ ಮತ್ತು ಚರಂಡಿ ನಿರ್ಮಾಣ 33 ಲಕ್ಷ, ಗಾಂಧಿನಗರದ ಶಿವಾಲಯದಲ್ಲಿ 36 ಲಕ್ಷ ರೂ ವೆಚ್ಚದಲ್ಲಿ ಸಿಸಿ ಮತ್ತು ಚರಂಡಿ ನಿರ್ಮಾಣ ಗುದ್ದಲಿ ಪೂಜೆ ಮಾಡುವುದರ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ‌

ಈ ಸಂದರ್ಭದಲ್ಲಿಅಮರೇಗೌಡ ವಿರುಪಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು,ಧರ್ಮನ ಗೌಡ,ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಾಟಗಲ್, ಸಿ.ಎಸ್ ಪಾಟೀಲ್,ವಿರುಪಾಕ್ಷಪ್ಪಮೂರ್ತಿ ನಗರ ಪೌರಾಯುಕ್ತರು, ನಿಂಗಪ್ಪ PDO ಬೂತಲದಿನ್ನಿ, ಡಾ.ವಿಶ್ವನಾಥರೆಡ್ಡಿ ಆರೋಗ್ಯಧಿಕಾರಿ,ನಾಗನ ಗೌಡ ಗ್ರಾಮ ಪಂಚಾಯತ್ ಸದಸ್ಯರು ಬೂತಲದಿನ್ನಿ,ಕಾಳಿಂಗ ರೆಡ್ಡಿ, ಸೋಮನಾಥ್ ನಾಯಕ ಮತ್ತು ಪಕ್ಷದ ಮುಖಂಡರು ಭಾಗಿಯಾಗಿದ್ದರು…

 

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;