;

ಗ್ರಾಹಕರನ್ನು ಕೈ ಬಿಸಿ ಕರೆಯುತ್ತಿವೆ ಹೊಳಲ್ಕೆರೆಯಲ್ಲಿ ಸಿದ್ದಗೊಂಡಿರುವ ಖಾಲಿ ನಿವೇಶನಗಳು…!!!

ಪಟ್ಟಣದಲ್ಲಿ ಹೊಸ ಬಡಾವಣೆಗಳ ಉಗಮ
ಭರದಿಂದ ಸಾಗುತ್ತಿದೆ ನಿವೇಶನಗಳ ಕಾಮಗಾರಿ / ಚದರ ಅಡಿಗೆ ರೂ. ೯೦೦ರಿಂದ ೧೨೫೦ ನಿಗದಿ
ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿ ಡಿ. ೩೧ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಪಟ್ಟಣದ ಶಿವಮೊಗ್ಗ ರಸ್ತೆ, ಚಿತ್ರದುರ್ಗ ರಸ್ತೆ ಹಾಗೂ ಹೊಸದುರ್ಗ ರಸ್ತೆಗಳಲ್ಲಿ ಹೊಸ ಬಡಾವಣೆಗಳ ನಿರ್ಮಾಣವಾಗುತ್ತಿವೆ. ರಸ್ತೆ, ಚರಂಡಿ, ವಿದ್ಯುತ್, ಬೀದಿ ದೀಪಗಳನ್ನೊಳಗೊಂಡ ಸುಸಜ್ಜಿತವಾದ ಲೇಔಟ್‌ಗಳು ಖರೀದಿದಾರರನ್ನು ಕೆ`ಬೀಸಿ ಕರೆಯುತ್ತಿವೆ.
ಶಿವಮೊಗ್ಗ ರಸ್ತೆಯಲ್ಲಿ ತರಳುಬಾಳು ಬಡಾವಣೆ ನಿರ್ಮಾಣವಾಗಿ ಎರಡು ವರ್ಷ ಕಳೆದಿದೆ. ಈಗಾಗಲೇ ಇಲ್ಲಿಯ ೯೦ ನಿವೇಶನಗಳು ಮಾರಾಟವಾಗಿದ್ದು, ಅಗ್ರಿಮೆಂಟ್ ಕೂಡ ಆಗಿವೆ. ಇದರ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದರಿಂದ ರಸ್ತೆಯಿಂದ ೧೨೦ರಿಂದ ೧೩೫ ಅಡಿ ಜಾಗ ಬಿಟ್ಟು ನಿವೇಶನಗಳನ್ನು ಮಾಡಲಾಗಿದೆ. ರಸ್ತೆ ಪಕ್ಕದ ೧೦ ನಿವೇಶನಗಳನ್ನು ವಾಣಿಜ್ಯ ಮಳಿಗೆಗಳಿಗಾಗಿ ಖಾಲಿ ಬಿಡಲಾಗಿದೆ. ಶಿವಕುಮಾರ ಬಡಾವಣೆ ೩೦೦ ನಿವೇಶನಗಳನ್ನು ಸಿದ್ಧಪಡಿಸಲಾಗಿದ್ದು, ೪೦ ನಿವೇಶನಗಳು ಮಾರಾಟವಾಗಿವೆ. ವಾಗ್ದೇವಿ ಶಾಲೆ ಪಕ್ಕ ಇನ್ನೂ ಹೆಸರಿಡದ ಹೊಸ ಬಡಾವಣೆ ನಿರ್ಮಾಣವಾಗುತ್ತಿದ್ದು, ರಸ್ತೆ ಹಾಗೂ ಚರಂಡಿ ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ೧೩೨ ನಿವೇಶನಗಳು ಸಿದ್ಧಗೊಂಡಿವೆ.
ಅರೇಹಳ್ಳಿ ಸಮೀಪ ಎರಡು ಹೊಸ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಆದರೆ ಅರೇಹಳ್ಳಿ ಗ್ರಾಮವನ್ನು ಪುರಸಭೆ ವ್ಯಾಪ್ತಿಯಿಂದ ಕೆ`ಬಿಡಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದು, ತೀರ್ಪಿಗಾಗಿ ಎದುರು ನೋಡುತ್ತಿದ್ದಾರೆ. ಚಿತ್ರದುರ್ಗ ರಸ್ತೆಯಲ್ಲಿ ಶಿವಸಾಯಿ ಬಡಾವಣೆ ನಿರ್ಮಾಣವಾಗಿ ೪ ವರ್ಷಗಳ ಬಳಿಕ ಬನಶಂಕರಿ ಬಡಾವಣೆ ನಿರ್ಮಾಣವಾಗುತ್ತಿದ್ದು, ಶೇ. ೭೦ರಷ್ಟು ಅಭಿವೃದ್ಧಿ ಕೆಲಸ ಮುಗಿದಿದೆ. ಹೊಸದುರ್ಗ ರಸ್ತೆಯಲ್ಲಿ ಸೂರ್ಯ ಲೇಔಟ್ ಹಾಗೂ ಗುಂಡೇರಿ ಕ್ರಾಸ್‌ನಲ್ಲಿನ ಗ್ರಾಮ ಜ್ಯೋತಿ ಬಡಾವಣೆಗಳು ನಿರ್ಮಾಣವಾಗಿ ನಾಲ್ಕು ವರ್ಷಗಳು ಕಳೆದಿವೆ.
ಕೋಟ್
ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಿಂದ ಪುರಸಭೆ ಯಾಗಿ ಮೇಲ್ದರ್ಜೆಗೇರಿದ ಬಳಿಕ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ರಸ್ತೆ ಅಗಲೀಕರಣ, ದ್ವಿಪಥ ಹಾಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ನಿವೇಶನಗಳ ಮಾರಾಟಕ್ಕೆ ಕೋವಿಡ್ ಅಡ್ಡಿಯಾಗಿತ್ತು. ಆದರೆ ಈಗ ಕೋವಿಡ್ ಇಳಿಮುಖವಾಗಿರುವುದರಿಂದ ಖರೀದಿದಾರರು ಮುಂದೆ ಬರುತ್ತಿದ್ದಾರೆ. ರಸ್ತೆ ಪಕ್ಕದ ನಿವೇಶನ ಚದುರ ಅಡಿಗೆ ರೂ. ೧೨೫೦, ಅದರ ಹಿಂದಿನ ನಿವೇಶನಕ್ಕೆ ರೂ. ೧೧೫೦, ರೂ. ೯೦೦ ನಿಗದಿ ಮಾಡಲಾಗಿದೆ.
– ಜಿ. ಕಾಂತರಾಜ್, ಶ್ರೀಶಿವಕುಮಾರಸ್ವಾಮಿ ಬಡಾವಣೆ ಮಾಲೀಕ
ಕೋಟ್
ಪುರಸಭೆ ನಿಯಮಗಳಿಗೆ ತಕ್ಕಂತೆ ಬಡಾವಣೆ ನಿರ್ಮಾಣವಾಗಬೇಕು. ಮೂಲ ಸೌಕರ್ಯಗಳನ್ನು ಸಂಪೂರ್ಣವಾಗಿ ಒದಗಿಸಿರಬೇಕು. ಎಲ್ಲವೂ ಹೆ`ಟೆಕ್ ಆಗಿರಬೇಕು. ಎಲ್ಲ ಪರಿಶೀಲಿಸಿದ ಬಳಿಕ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಅನುಮೋದನೆ ಕೊಡಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಸುಸಜ್ಜಿತವಾದ ನಿವೇಶನಗಳು ಸಿಗಲಿವೆ. ಇಡೀ ರಾಜ್ಯದಲ್ಲಿಯೇ ಅತ್ಯುತ್ತಮವಾದ ಪುರಸಭೆ ಕಟ್ಟಡ ನಿರ್ಮಾಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿದೆ. ಸುತ್ತಲಿನ ಕೆರೆಗಳು ತುಂಬಿವೆ. ಶಾಸಕ ಎಂ. ಚಂದ್ರಪ್ಪನವರ ಶ್ರಮದಿಂದಾಗಿ ಪಟ್ಟಣಕ್ಕೆ ವಾಣಿವಿಲಾಸ ಸಾಗರ ನೀರು ಬರಲಿದ್ದು, ಇಲ್ಲಿನನಿವಾಸಿಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ.
– ಎ. ವಾಸಿಂ, ಪುರಸಬೆ ಮುಖ್ಯಾಕಾರಿ
ಹೊಳಲ್ಕೆರೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಡಾವಣೆಗಳು
ನಿವೇಶನ ಖರೀದಿದಾರರನ್ನು ಕೆ`ಬೀಸಿ ಕರೆಯುತ್ತಿರುವ ಬಡಾವಣೆಪಟ್ಟಣದಲ್ಲಿ ಹೊಸ ಬಡಾವಣೆಗಳ ಉಗಮ

ನಿವೇಶನ ಖರೀದಿದಾರರನ್ನು ಕೆ`ಬೀಸಿ ಕರೆಯುತ್ತಿರುವ ಬಡಾವಣೆ…

ವರದಿ.ಸುರೇಶ್, ಕೆ, ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *