ಸಿಂಧನೂರು ಡಿಸೆಂಬರ್ 6 ರಂದು ನಡೆಯಬೇಕಿದ್ದ ಸಾಮೂಹಿಕ ವಿವಾಹ ಮಾರ್ಚ್ 28ಕ್ಕೆ ಮುಂದೂಡಿಕೆ – ಕೆ ವಿರುಪಾಕ್ಷಪ್ಪ.
ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುರುಬರ ಸಂಘದಿಂದ ಡಿಸೆಂಬರ್ 6ರಂದು ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾರ್ಚ್ 28 ಮುಂದೂಡಲಾಗಿದೆ. ಅಕಾಲಿಕ ಮಳೆಯಿಂದಾಗಿ ರೈತರ ಬೆಳೆಗಳು ನಷ್ಟವಾಗಿದ್ದು, ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಮತ್ತು ಬೇಸಿಗೆ ಬೆಳೆ ನಾಟಿ ಮಾಡುವುದರಿಂದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಬಿಡು ಇಲ್ಲವಾದ್ದರಿಂದ ವಿವಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಇಲ್ಲಿವರೆಗೂ ನೊಂದಣಿಯಾದವರಿಗೆ ಮದುವೆ ದಿನಾಂಕ ಬದಲಾವಣಿಗೆ ತಿಳಿಸಲಾಗಿದೆ.
ನಾಳೆ ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಹಾಗೂ ಪ್ರಮುಖರ ಕಾರ್ಯಕರ್ತರ ಸಭೆ ಇದ್ದು. ಈ ಸಭೆಗೆ ಸಚಿವ ಕೆ. ಈಶ್ವರಪ್ಪನವರು ಒಂದು ದಿನದ ಮುಂಚಿತವಾಗಿ ಖಾಸಗಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೊಡಲಿದ್ದಾರೆ. ನರೇಂದ್ರಬಾಬು ರಾಯಚೂರು ಬಳ್ಳಾರಿ ಕೊಪ್ಪಳ ಜಿಲ್ಲೆಗಳ ನಾಯಕರುಗಳು ಭಾಗವಹಿಸಲಿದ್ದಾರೆ. ರಾಯಚೂರು ಕೊಪ್ಪಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಕಾಂಗ್ರೆಸ್ಸಿನ ನಾಯಕರು ದುರಹಂಕಾರದ ಮಾತುಗಳನ್ನಾಡುತ್ತಾರೆ ,ಪ್ರಜಾಪ್ರಭುತ್ವದಲ್ಲಿ ಯಾರಾದರೂ ಗೆಲ್ಲುಬಹುದುದ, ಸೋಲುವುದು, ಅದು ಮತದಾರರು ತೀರ್ಪು ಕೊಟ್ಟ ನಂತರ ಗೊತ್ತಾಗುತ್ತದೆ. ಆದರೆ ಸಿಂಧನೂರು ತಾಲೂಕಿನಲ್ಲಿ ಕಾಂಗ್ರೆಸ್ಸಿನ ಆಂತರಿಕ ಜಗಳ ಮತ್ತು ಜೆಡಿಎಸ್ ಅಭ್ಯರ್ಥಿ ಹಾಕದಿರುವದರಿಂದ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಮತಗಳು ಬಿಜೆಪಿಗೆ ಬಹುಮತ ಸಿಗುತ್ತದೆ. ಇನ್ನೂ ಎರಡೂ ಮೂರು ದಿನಗಳಲ್ಲಿ ನಮ್ಮ ಪಕ್ಷದ ಮತ್ತು ಜೆಡಿಎಸ್ ಪಕ್ಷದ ರಾಜ್ಯ ನಾಯಕರು ತೀರ್ಮಾನ ಮಾಡುವವರು ಎಂದರು.
ಈ ಸಂದರ್ಭದಲ್ಲಿ ಕುರುಬರ ಸಂಘದ ಅಧ್ಯಕ್ಷ ಪೂಜಪ್ಪ ಪೂಜಾರಿ,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ ದೊಡ್ಡ ಬಸವರಾಜ್, ನಂಜುಂಡಯ್ಯ ಇನ್ನೂ ಅನೇಕರಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
