ಸಿಂಧನೂರು : ಕರ್ನಾಟಕ ದಲಿತ ಅಂಬೇಡ್ಕರ್ ಮಹಾಸಭಾ ಮತ್ತು ಭಾರತೀಯ ಪ್ರಜಾ ಸೇನೆ ವತಿಯಿಂದ ಕಾರುಣ್ಯಾ ನೆಲೆ ವೃದ್ಧಾಶ್ರಮದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು. ಈ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾರುಣ್ಯ ಆಶ್ರಮದ ಸಂಸ್ಥಾಪಕ ಚನ್ನಬಸವ ತಾತ ನಮ್ಮ ಸೇವೆಯನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಇಂದ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಕೊಡಿಸಿದೆ ಆದ್ದರಿಂದ ಭಾರತೀಯ ಪ್ರಜಾ ಸೇನೆ ಮತ್ತು ಕರ್ನಾಟಕ ದಲಿತ ಅಂಬೇಡ್ಕರ್ ಮಹಾಸಭಾದ ರಾಷ್ಟ್ರ, ರಾಜ್ಯ, ಜಿಲ್ಲಾ, ನಾಯಕರಿಗೆ ಧನ್ಯವಾದವನ್ನು ತಿಳಿಸಿದರು. ಈ ಪ್ರಶಸ್ತಿ ನನ್ನ ಒಬ್ಬನ ಸಾಧನೆಗೆ ಸಿಕ್ಕ ಫಲವಲ್ಲ ಸಿಂಧನೂರಿನ ಸಮಸ್ತ ಜನತೆಗೆ ಸಿಕ್ಕ ಗೌರವ. ಆಶ್ರಮದಲ್ಲಿ ಅನೇಕ ಜನ ಸೇವೆ ಸಲ್ಲಿಸುತ್ತಿದ್ದಾರೆ ಅವರ ಪರಿಶ್ರಮದಿಂದ ಮತ್ತು ಪತ್ರಿಕಾಮಾಧ್ಯಮದವರ ಸಹಕಾರದಿಂದ ಎಂದು ತಿಳಿಸಿದರು.
ನಂತರ ಮಾತನಾಡಿದ ಮುತ್ತುಸಾಗರ ಕಾರುಣ್ಯಾಶ್ರಮವೂ ಆನೇಕ ಬಡಮಕ್ಕಳ, ಅನಾಥರ, ಬುದ್ದಿಮಾಧ್ಯರಿಗೆ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ಕೆಲಸ ಮಾಡಿದೆ. ಇದಕ್ಕೆಲ್ಲಾ ಕಾರಣರಾದ ಆಶ್ರಮದ ಆಡಳಿತಾಧಿಕಾರಿಗೆ, ಆಶ್ರಮದಲ್ಲಿ ಅಗಲಿರುಳು ಸೇವೆ ಸಲ್ಲಿಸುತ್ತಿರುವವರಿಗೂ ಹಾಗೂ ಆಶ್ರಮದ ದಾನಿಗಳಿಗೂ, ಧನ್ಯವಾದಗಳು. ಇವರುಗಳ ನಿರಂತರ ಸೇವೆಯಿಂದ ಸಿಂಧನೂರಿನ ಹೆಸರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಪಾಮಯ್ಯ, ಶರಣಪ್ಪ ಕೆಂಗಲ್ ಇನ್ನೂ ಅನೇಕರು ಭಾಗವಹಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
