;

ರೈತ ಸಂಘದಿಂದ ಹೆದ್ದಾರಿ ತಡೆದು ಪ್ರತಿಭಟನೆ.!

ರೈತ ಸಂಘದಿಂದ ಹೆದ್ದಾರಿ ತಡೆದು ಪ್ರತಿಭಟನೆ.!

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ತೆಂಗಿನ ಗೌರಸಮುದ್ರ ಹಾಗೂ ಚಿಕ್ಕೇನಹಳ್ಳಿ ಗೇಟ್ ಮದ್ಯೆ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘದಿಂದ ಶುಕ್ರವಾರದಂದು ರಾಷ್ಟಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಅಂಡರ್ ಪಾಸ್ ನಿರ್ಮಾಣ ಮಾಡದ ಕಾರಣ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ ಆದ್ದರಿಂದ ಈ ಬಗ್ಗೆ ಅನೇಕ ಬಾರೀ ಅಂಡರ್ ಪಾಸ್ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಾಗೂ ಪಾದಯಾತ್ರೆ ಕೂಡ ನಡೆಸಲಾಗಿತ್ತು ಆದ್ರೂ ಸಹಾ ಅಧಿಕಾರಿಗಳು ಕಿವಿಗೋಡುತ್ತಿಲ್ಲ. ಆರಂಭದಿಂದಲೂ ಅನೇಕ ಭಾರೀ ಹೋರಾಟ ನಡೆಸಿದರೂ ಸಹಾ ಪ್ರಯೋಜನ ಆಗುತ್ತಿಲ್ಲ ಎಂದೂಪ್ರತಿಭಟನಾಕಾರರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಚಿಕ್ಕೇನಹಳ್ಳಿ ತೆಂಗಿನಗೌರಸಮುದ್ರ ಹಾಗೂ ಬಸವೇಶ್ವರನಗರ ಸೇರಿದಂತೆ  ಸುತ್ತಲಿನ ಹಲವು ಗ್ರಾಮಸ್ಥರು ಪಾಲ್ಗೊಂಡಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;