ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ವಿಶ್ವೇಶ್ವರ ಸಜ್ಜನ್ ಮತದಾನ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಹೊಸಹಳ್ಳಿ ಗ್ರಾಮದ ಎಸ್ ಕೆ ಡಿಡಿವಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ರಾಜ್ಯ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಿಗೆ ಮತದಾನ ನಡೆಯಿತು.
ಹೊಸಹಳ್ಳಿಯ ಹೋಬಳಿಯ ಮತದಾರರು ಬೆಳಿಗ್ಗೆಯಿಂದಲೇ ಮತಚಲಾಯಿಸಿದರು. ಹುಲಿಕೆರೆ ಗ್ರಾಮದ ಪ್ರಗತಿಪರ ಕೃಷಿಕರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ವಿಶ್ವೇಶ್ವರ ಸಜ್ಜನ್ ಮತಗಟ್ಟೆ ಸಂಖ್ಯೆ 29 / 8ರಲ್ಲಿ ಮತಚಲಾಯಿಸಿದರು.
ಹೊಸಹಳ್ಳಿ ಹೋಬಳಿಯ ಮತಗಟ್ಟೆ ಕೇಂದ್ರದಲ್ಲಿ ಒಟ್ಟು 281 ಮತದಾರರಿದ್ದು ಅದರಲ್ಲಿ 119 ಪುರುಷರು ಹಾಗೂ21 ಮಹಿಳೆಯರು ಸೇರಿದಂತೆ ಒಟ್ಟು 140 ಮತ ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಮತದಾನ ಸಂಜೆ 4 ಗಂಟೆಗೆ ವರೆಗೆ ನಡೆಯಿತು. ಬೆಳಗ್ಗೆಯಿಂದ ಹಿರಿಯ ಸಾಹಿತಿಗಳು. ಜನಪ್ರತಿನಿಧಿಗಳು. ಗಣ್ಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಕಂಡು ಬಂತು…

ವರದಿ. ವಿರೇಶ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
