ಕಾವ್ಯ ಓದು ಅಭಿಯಾನ
ಹೂವಿನ ಹಡಗಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಿಸುವ ಸುಳ್ಳು ಸುದ್ದಿಗಳನ್ನು ನಂಬದೆ
ವಾಸ್ತವ ವಿಚಾರಗಳನ್ನು ಅರಿಯಿರಿ ಎಂದು
ಪ್ರೊ.ಶಾಂತಮೂರ್ತಿ ಕುಲಕರ್ಣಿ ಹೇಳಿದರು.
ಪಟ್ಟಣದ ಜಿ ಬಿ ಆರ್
ಮಹಾವಿದ್ಯಾಲಯದಲ್ಲಿ
ಕನಸು ಸಂಸ್ಥೆ ಕೊಂಬಳಿ.ಮತ್ತು
ಕನ್ನಡ ಸಂಘದ ವತಿಯಿಂದ
ನಾಡಹಬ್ಬ ಕನ್ನಡ ರಾಜ್ಯೋತ್ಸವದ ನಿಮ್ಮಿತ್ತ
ಪದವಿ ವಿದ್ಯಾರ್ಥಿಗಳಿಗೆ ಮಂಗಳವಾರ ಮತ್ತು
ಬುಧವಾರ ಆಯೋಜಿಸಿದ್ದ
ಕನ್ನಡ ಕಾವ್ಯ ಓದು ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಬೇಂದ್ರೆ ಗೋಕಾಕ್ ಡಿ ವಿ ಜಿ
ಯು ಆರ್ ಅನಂತಮೂರ್ತಿ
ಪಿ ಲಂಕೇಶ್ ಮೊದಲಾದ
ಮಹಾನ್ ಕವಿಗಳ ಕಾವ್ಯ ಕೃತಿಗಳನ್ನು ಹೆಚ್ಚು ಅಧ್ಯಯನ ಮಾಡಬೇಕು ಎಂದರು.
ಕವಿ ಸುರೇಶ ಅಂಗಡಿ
ಸಮಾಜದ ವಾಸ್ತವ ಸಂಗತಿಗಳು ಕಾವ್ಯದ ವಿಷಯಗಳಾಗಬೇಕು.
ಜನಸಾಮಾನ್ಯರ ನೋವುಗಳು ಕಾವ್ಯದಲ್ಲಿ
ಹೊರಹೊಮ್ಮುಬೇಕು ಎಂದರು.
ಉಪನ್ಯಾಸಕರಾದ
ಬಸವರಾಜ, ಪರಶುರಾಮ ನಾಗೋಜಿ, ಕನಸು ಸಂಸ್ಥೆಯ ಅಜಯ್ ಚಲವಾದಿ, ಮಂಜುನಾಥ ಕೊಂಬಳಿ ಮಾತನಾಡಿದರು.
ಡಾ.ವೈ.ಚಂದ್ರಬಾಬು ಅಧ್ಯಕ್ಷತೆ ವಹಿಸಿದ್ದರು.
ಕಾವ್ಯ ಓದು ಅಭಿಯಾನದಲ್ಲಿ
ಎಲ್ ಅಶ್ವಿನಿ,ರೇಖಾ ಪಿ
ಕೆ ಸುಷ್ಮಾ,ಗುರುಬಸವರಾಜ
ವಿ ಕಾವ್ಯ,ರೂಪಾ ಸಿ
ಕೊಟ್ರೇಶ, ಪುಷ್ಪಾವತಿ
ಚೈತ್ರ,ಸುಪ್ರಿತಾ,ದೀಪಾ, ಪವಿತ್ರ, ಬಿ ಹನುಮಂತಪ್ಪ
ಆದರ್ಶ, ಪ್ರೀತಿ ಕರ್ಣಂ
ವೆಂಕಟೇಶ್, ಕೆ ಚೈತ್ರ
ಕೀರ್ತಿ,ಹೆಚ್ ಎಂ ನಂದೀಶ
ರೇಷ್ಮಾ, ಪ್ರಶಾಂತ್,
ಸಂತೋಷ್ ಇತರರು
ಕವಿತೆ ವಾಚಿಸಿದರು.
ಸ್ಪರ್ಧೆಯ ವಿಜೇತರಿಗೆ
ಪುಸ್ತಕ ನೀಡಿ ಗೌರವಿಸಲಾಯಿತು.
ವಿಜೇತರಿಗೆ ಹೂವಿನ ಹಡಗಲಿಯ ಸಿಂಚನ ಪ್ರಕಾಶನದ ಶ್ರೀ ಸುರೇಶ ಅಂಗಡಿ ಅವರು ನೀಡಿದ್ದರು…

ವರದಿ.ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
