ನಾಯಕನಹಟ್ಟಿ: ಪ್ರತಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ.!
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ: ಪಟ್ಟಣದ 1ನೇ ವಾರ್ಡ್ನಲ್ಲಿ ಇಂದು ಜಿಲ್ಲಾಡಳಿತದಿಂದ ನಡೆದ ಕೋವಿಚ್ ಲಸಿಕಾ ಮೇಳದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಲವು ಮನೆಗಳಿಗೆ ತೆರಳಿ ಗ್ರಾಮದ ಮಹಿಳೆಯರೊಂದಿಗೆ ಆತ್ಮೀಯವಾಗಿ ಬೆರೆತರು, ಸಮೀಪದ ಜಾಗನೂರಹಟ್ಟಿ ಗ್ರಾಮದಲ್ಲಿ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಮೇರೆಗೆ ಇಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಜಾಗನೂರಹಟ್ಟಿ ಗ್ರಾಮಕ್ಕೆ ತೆರಳಿತು ಚನ್ನಮ್ಮಎಂಬುವವರ ಮನೆಗೆ ಜಿಲ್ಲಾಧಿಕಾರಿ ತೆರಳಿದಾಗ ಅವರನ್ನು ಮನೆಯೊಳಗೆ ಕರೆದುಕೊಂಡು ಹೋದ ಚಿನ್ನಮ್ಮ ಊಟ ಮಾಡಿ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಮನೆಯ ತುಂಬೆಲ್ಲಾ ಓಡಾಡಿ, ಅಡುಗೆಮನೆ ವೀಕ್ಷಿಸಿ ನಂತರ ಚಿನ್ನಮ್ಮತಯಾರಿಸಿದ ಹುರಿದ ಬೆಂಡೆಕಾಯಿ ಮಿಶ್ರಿತ ಕೆಂಪು ಚಟ್ಟಿಯನ್ನು ಸೇವಿಸಿ ರುಚಿಕಟ್ಟಾಗಿದೆ ಎಂದು ಮೆಚ್ಚಿಕೊಂಡರು, ಅಡುಗೆ ಸೈವ್ ನೆಲದ ಮೇಲಿಟ್ಟು ಅಡುಗೆ ಮಾಡುವುದು ಅಪಾಯಕಾರಿ ಎಂದು ಚಿನ್ನಮ್ಮನಿಗೆ ಸಲಹೆ ನೀಡಿದರು. ಚೆನ್ನಮ್ಮನೀಡಿದ ಹಸಿ ಶೇಂಗಾವನ್ನು ತಿನ್ನುತ್ತಾ ಜಿಲ್ಲಾಧಿಕಾರಿ ಗ್ರಾಮದೆಲ್ಲೆಡೆ ಸಂಚರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜನರ ಆರೋಗ್ಯದ ಹಿತದೃಷ್ಟಿಯಿಂದ ನಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿಲಸಿಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೆಲವರು ಬಾಯಿಗೆ ಬಂದಂತೆ ಆರೋಗ್ಯ ಸಿಬ್ಬಂದಿಯನ್ನು ಬಯ್ಯುತ್ತಾರೆ. ಹಾಗಾಗಿ ಸಾರ್ವಜನಿಕರು ಸೌಹಾರ್ದಯುತವಾಗಿ ವರ್ತಿಸಿ ಲಸಿಕಾ ಮೇಳವನ್ನು ಯಶಸ್ವಿ ಗೊಳಿಸಬೇಕು. ಗ್ರಾಮೀಣ ಪ್ರದೇಶದ ಜನರು ಯಾವುದೇ ಮೌಢ, ಮಾಹಿತಿ ಕೊರತೆ, ಹಾಗೂ ಲಸಿಕೆ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳಿಗೆ ಕಿವಿಗೊಡ. ಬಾರದು, ಪ್ರತಿಯೊಬ್ಬರೂ ಲಸಿಕೆ ಪಡೆದು ಕೋವಿಡ್ ಮುಕ್ತ ಸಮಾಜ ನಿರ್ಮಾಣ ಮಾಡಬೇಕು’ ಎಂದರು, ಈ ಸಂದರ್ಭದಲ್ಲಿ ತಾಸಿಲ್ದಾರ್ ಎನ್ ರಘುಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೋಡಿ ಭೀಮರಾಯ, ಡಾಕ್ಟರ್ ಅಶೋಕ್, ಆರೋಗ್ಯ ನಿರೀಕ್ಷಕ ರುದ್ರಮುನಿ ಟಿ, ಚೇತನ್ ಕುಮಾರ್, ಎಎಸ್ಐ ನಾಗರಾಜ್, ಆರೋಗ್ಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು….

ವರದಿ, ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
