ಸಿಂಧನೂರು: ಗ್ರಾಮೀಣ ಮಂಡಲ ಕಾರ್ಯಕಾರಿಣಿ ಸಭೆಯನ್ನು ನಗರದ ಸತ್ಯಾ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕಾರಿಣಿ ಸಭೆಯನ್ನು ರಾಜ್ಯ ಶಿಕ್ಷಕರ ಪ್ರಕೋಷ್ಠ ಸಂಚಾಲಕರಾದ ಶಿವಬಸಪ್ಪ ಮಾಲಿಪಾಟೀಲ್ ರಾಯಚೂರು ಇವರು ನಡೆಸಿಕೊಟ್ಟರು . ಕಾರ್ಯಕ್ರಮವನ್ನು ಸಸಿಗೆ ನಿರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಕೋಲ್ಲಾ ಶೇಷಗಿರಿರಾವ್ ಮಾತನಾಡಿ ಪೆಟ್ರೋಲ್ ಡಿಸೆಲ್ ಏರಿಕೆ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾಕೆ ಕಡಿಮೆ ಮಾಡಿಲ್ಲ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ 10ರೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಸರಕಾರ 7ರೂ.ಕಡಿಮೆ ಮಾಡಿದೆ.ಆದರೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಯಾಕೆ ಕಡಿಮೆ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅವರು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದವರು. ನರೇಂದ್ರ ಮೋದಿ ಸರ್ಕಾರ ಏಳು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ಇದರಿಂದ ಕಾಂಗ್ರೆಸ್ ಪಕ್ಷದವರಿಗೆ ನಡಕು ಹುಟ್ಟಿಸಿದೆ.ಸಿದ್ದರಾಮಯ್ಯನವರು ಮೋದಿಜಿಯವರನ್ನು ಬೈಯುವುದರಿಂದ ತಾನು ದೊಡ್ಡ ವ್ಯಕ್ತಿಯಾಗಬಹುದೆಂದು ಮಾತನಾಡುತ್ತಾರೆ. ಅದರಿಂದ ಮೋದಿಜಿಯವರಿಗೆ ಗೌರವ ಹೆಚ್ಚಾಗುತ್ತದೆ,ಹೊರತು ಕಡಿಮೆಯಾಗುವ ಪ್ರಶ್ನೆಯೇ ಇಲ್ಲಾ.ಕಾಂಗ್ರೇಸ್ ,ಮತ್ತು ಜೆಡಿಎಸ್ ನವರು ನಾವೂ ರೈತರ ಪರ ಎಂದು ಹೇಳುತ್ತಾರೆ. ಆದರೆ ಸಮ್ಮಿಶ್ರ ಸರಕಾರದಲ್ಲಿ ನಮ್ಮ ಭಾಗದ ರೈತರ ಜೀವನಾಡಿ ತುಂಗಭದ್ರಾ ಭಾಗದ ರೈತರಿಗೆ ಎರಡು ಬೆಳೆಗೆ ಬೇಕಾಗುವಷ್ಟು ನೀರು ಇದ್ದರು, ಯಾಕೆ ನೀರು ಬಿಡಲಿಲ್ಲ. ಎಐಸಿಸಿ ಮತ್ತು ಉಸ್ತುವಾರಿ ಮಂತ್ರಿಗಳು ವೆಂಕಟರಾವ್ ನಾಡಗೌಡ ಇದ್ದರು ,ಕೂಡಾ ಯಾಕೆ ಬಿಡಲಿಲ್ಲ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನೀರು ಕಡಿಮೆ ಇದ್ದರೂ ಎರಡೂ ಬೆಳೆಗಳಿಗೆ ನೀರು ಕೊಟ್ಟಿದ್ದೇವೆ, ರೈತರ ಪರವಾದ ಸರಕಾರ ಇದ್ದರೆ ಅದು ಬಿಜೆಪಿ ಸರಕಾರ ಮಾತ್ರ ಎಂದರು.
ನಂತರ ಅಮರೇಗೌಡ ವಿರುಪಾಪೂರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರಣಪ್ಪಗೌಡ ನಕ್ಕುಂದಿ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ಅಮರೇಶ ರೈತನಗರ, ಜಿಲ್ಲಾ ಕಾರ್ಯದರ್ಶಿಗಳಾದ ಶೈಲಜಾ ಷಡಕ್ಷರಪ್ಪ, ಶಿವನಗೌಡ ಗೋರೆಬಾಳ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಎಂ. ದೊಡ್ಡ ಬಸವರಾಜ್ ಭಾಗವಹಿಸಿದ್ದರು. ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ. ಹನುಮೇಶ್ ಸಾಲಗುಂದ ವಹಿಸಿದ್ದರು. ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ವಕೀಲರು, ಹನುಮಂತರೆಡ್ಡಿ ಹುಡಾ ಸ್ವಾಗತಿಸಿ ವಂದಿಸಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
