ಸೈನಿಕರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ,ಅವಿನಾಶ ದೇಶಪಾಂಡೆ…!!!

ಸೈನಿಕರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ —ಅವಿನಾಶ ದೇಶಪಾಂಡೆ —- ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ )ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕಾರುಣ್ಯ ಕುಟುಂಬದ ನಿರಂತರ ಮಾರ್ಗದರ್ಶಕರು ಕಾರುಣ್ಯ ಕಣ್ಮಣಿಗಳು ತಮ್ಮ ಇಡೀ ಜೀವನವನ್ನೇ ಸಮಾಜಕ್ಕೆ ಮಡಿಪಿಟ್ಟಂತಹ ಪುಣ್ಯಾತ್ಮ ಕಾರುಣ್ಯ ಕುಟುಂಬದ ಯಜಮಾನರಾದಂತಹ ಶ್ರೀ ಅಭಿನಾಶ ದೇಶಪಾಂಡೆ ಕಾರ್ಯದರ್ಶಿಗಳು ಜೀವ ಸ್ಪಂದನ ಸೇವಾ ಸಂಸ್ಥೆ ಇವರ ಹುಟ್ಟುಹಬ್ಬ ಹಾಗೂ ಜೀವ ಸ್ಪಂದನಾ ಸೇವಾ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಸಿಂಧನೂರಿನ ಸೈನಿಕರಾಗಿ ದೇಶದ ಗಡಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ವೀರೇಶ್ ಯಾದವ್ ಸುಕಾಲ ಪೇಟೆ ಸೈನಿಕರು ಭಾರತ ಸರ್ಕಾರ ಇವರ ನೇತೃತ್ವದಲ್ಲಿ ಹುಟ್ಟುಹಬ್ಬ ವಾರ್ಷಿಕೋತ್ಸವವನ್ನು ಆಶ್ರಮದಲ್ಲಿ ಮಹಾಪ್ರಸಾದ ಮಾಡಿಸಿ ದಿನಬಳಕೆ ವಸ್ತುಗಳನ್ನು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಧರಾದ ವೀರೇಶ ಅವಿನಾಶ್ ದೇಶಪಾಂಡೆಯವರು ನಿರಂತರವಾಗಿ ತೆರೆಯ ಹಿಂದೆ ಹಲವಾರು ಸಮಾಜಪರ ಅನಾಥಪರ ಕಾರ್ಯಗಳನ್ನು ಮಾಡುತ್ತಾ ನೊಂದು ಬೆಂದ ಜೀವಿಗಳ ಜೊತೆ ಹುಟ್ಟುಹಬ್ಬ ಹಾಗೂ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದ್ದು ನನಗೆ ಸಂತೋಷವಾಗಿದೆ. ನಾನು ಸಿಂಧನೂರಿಗೆ ಬಂದಾಗ ಇವರ ಜೊತೆ ಹೆಚ್ಚು ಹೊತ್ತು ಕಾಲ ಕಳೆಯುವುದು ಇವರ ಸೇವೆಯಲ್ಲಿ ಭಾಗಿಯಾಗುವ ಸಮಯವನ್ನು ಹೆಚ್ಚೆಚ್ಚು ತೆಗೆದುಕೊಳ್ಳುತ್ತೇನೆ. ಇಂತಹ ವಿನಾಶ ದೇಶಪಾಂಡೆ ಸಮಾಜಕ್ಕೆ ಒಬ್ಬ ಆದರ್ಶವ್ಯಕ್ತಿ ಎಂದು ಮಾತನಾಡಿ. ದೇಶಪ್ರೇಮವನ್ನು ಎತ್ತಿಹಿಡಿದರು. ಈ ಕಾರ್ಯಕ್ರಮದಲ್ಲಿ ವೀರೇಶ ಯಡಿಯೂರ ಮಠ ಕಾರ್ಯಾಧ್ಯಕ್ಷರು ಕಾರುಣ್ಯಆಶ್ರಮ. ಸಂತೋಷ್ ಅಂಗಡಿ ರಾಜ್ಯಾಧ್ಯಕ್ಷರು ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್. ಅಶೋಕ ನಲ್ಲ ಕಾರ್ಯದರ್ಶಿಗಳು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್. ಸಂಗಮೇಶ ಹಿರೇಮಠ ಕನ್ನಡಪರ ಹೋರಾಟಗಾರರು ಹಾಗೂ ಸದಸ್ಯರು ಕಾರುಣ್ಯ ಸಲಹಾ ಸಮಿತಿ. ವೀರೇಶ ಮಾಳಿಗಿ ಸಮಾಜ ಸೇವಕರು ಸಿಂಧನೂರು. ವಿಜಯಕುಮಾರ ಮಾಲಿಪಾಟೀಲ್ ಸಮಾಜ ಸೇವಕರು ಸಿಂಧನೂರು. ಚನ್ನಬಸವಸ್ವಾಮಿ ಹಿರೇಮಠ ಆಡಳಿತಾಧಿಕಾರಿಗಳು ಕಾರುಣ್ಯ ಆಶ್ರಮ. ಶ್ರೀಮತಿ ಸುಜಾತ ಚನ್ನಬಸವಸ್ವಾಮಿ ಮೇಲ್ವಿಚಾರಕರು ಕಾರುಣ್ಯ ಆಶ್ರಮ. ಶ್ರೀಮತಿ ಗೀತಾ ಕುಲಕರ್ಣಿ ವ್ಯವಸ್ಥಾಪಕರು ಕಾರುಣ್ಯ ಆಶ್ರಮ. ಹಾಗೂ ಇನ್ನೂ ಅನೇಕ ಹಲವಾರು. ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡು ಶ್ರೀ ಅವಿನಾಶ ದೇಶಪಾಂಡೆಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಕೋರಿದರು. ಈ ಸಮಯದಲ್ಲಿ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರು ಶ್ರೀ ಗುರು ರಾಘವೇಂದ್ರ ಸ್ವಾಮಿ ಹಾಗೂ ಸಕಲ ದೇವಾನುದೇವತೆಗಳಲ್ಲಿ ಪ್ರಾರ್ಥಿಸಿ ನಮ್ಮ ಕಾರುಣ್ಯ ಕುಟುಂಬದ ಮಗ ಮೊಮ್ಮಗ ನಾಗಿರುವ ಅವಿನಾಶ ದೇಶಪಾಂಡೆ ವಿಶ್ವಮಟ್ಟದಲ್ಲಿ ಅತ್ತುನ್ನತ ಸ್ಥಾನಮಾನವನ್ನು ಗಳಿಸಿ ಸಮಾಜದಲ್ಲಿನ ನಮ್ಮಂತ ಹಲವಾರು ನೊಂದ ಜೀವಿಗಳಿಗೆ ಆಶ್ರಯ ನೀಡಿ ಅನ್ನದಾತರ ಆಗುವಂತಹ ಶಕ್ತಿಯನ್ನು ಕರುಣಿಸಿರಿ ಎರಡು ಬೇಡಿಕೊಂಡು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿ ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ವೀರಯೋಧ ರಾದ ಶ್ರೀ ವೀರೇಶ ಯಾದವ್ ಅವರು ಆಶ್ರಮಕ್ಕೆ 50 ಕೆಜಿ ಅಕ್ಕಿಯನ್ನು ವಿತರಿಸಿದರು. ಅವರಿಗೆ ಕಾರುಣ್ಯ ಆಶ್ರಮದಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ನಂತರ ಅಭಿನಾಶ್ ದೇಶಪಾಂಡೆ ಅವರಿಗೂ ಸಹ ಕಾರುಣ್ಯ ಆಶ್ರಮದಿಂದ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಲಾಯಿತು…

ವರದಿ. ದುಗ್ಗಪ್ಪ, ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend