ಕ್ರೀಡೆಗೆ ಹೆಚ್ಚು ಆದ್ಯತೆ ನೀಡಬೇಕು ಸಬ್ ಇನ್ಸ್ಪೆಕ್ಟರ್ ಬಸವರಾಜ್.!
ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ನೇರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಲಹಳ್ಳಿ ಗ್ರಾಮದಲ್ಲಿ ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ವಾಲ್ಮೀಕಿ ಗೆಳೆಯರ ಬಳಗದ ವತಿಯಿಂದ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡರಾದ ಡಾ ಯೋಗೇಶ್ ಬಾಬು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಬ್ಇನ್ಸ್ಪೆಕ್ಟರ್ ಬಸವರಾಜ್ ಜೀವನದಲ್ಲಿ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಬೇಕು ಯುವಕರು ಮತ್ತು ವಯಸ್ಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು. ಎಲ್ಲರೂ ತಮ್ಮ ತಮ್ಮ ಕಾಯಕದಲ್ಲಿ ತೊಡಗಿದ್ದರೂ ಕೂಡ ತುಸು ಗಳಿಗೆಯನ್ನು ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಯೋಗೇಶ್ ಬಾಬು ಮಾತನಾಡಿ ಇಡೀ ಪ್ರಪಂಚಕ್ಕೆ ಕಣ್ಣೀರಧಾರೆ ಅರಸಿ ಹೋದ ಅಪ್ಪು ನೆನಪು ಯಾವಾಗಲೂ ಶಾಶ್ವತವಾಗಿ ಉಳಿಯುತ್ತದೆ. ವರ ನಟ ಡಾಕ್ಟರ್ ರಾಜಕುಮಾರ್ ಪುತ್ರ ಪುನೀತ್ ರಾಜಕುಮಾರ್ ಎಂತಹ ದೇಹ ಅಂತ ಮೈಕಟ್ಟು ಯಾವಾಗಲೂ ಕ್ರೀಡೆಯಲ್ಲಿ ತೊಡಗಿರುತ್ತಿದ್ದರು ಆದರೂ ಕೂಡ ಇದೆ ಅವರನ್ನು ಕರೆದುಕೊಂಡು ಹೋಯಿತು. ಇಡೀ ಚಲನಚಿತ್ರ ರಂಗಕ್ಕೆ ಬರಿಸಲಾಗದ ನೋವು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಕೇಳಿಕೊಳ್ಳೋಣ. ಅವರಂತೆ ನಾವು ಕ್ರೀಡೆಯಲ್ಲಿ ಹೆಚ್ಚು ಹೊತ್ತು ಕಳೆಯಬೇಕು ವಿಧಿಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೇರ್ಲಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರತ್ನಮ್ಮ, ಮಲ್ಲಿಯಣ್ಣ ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ. ಬಿ ವಿಜಯ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮತ್ತು ಬಿಜೆಪಿ ಯುವ ಮುಖಂಡರಾದ ಮಂಜುನಾಥ್, ಕೋನಸಾಗರ ಪಾಲಯ್ಯ, ನೇರ್ಲಹಳ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪಾಪಣ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಬಂಗಿ ಸುರಯ್ಯ , ತಿಪ್ಪೇಸ್ವಾಮಿ, ರಾಜಣ್ಣ , ಪೆದ್ದಣ್ಣ, ಗಂಗರಾಜು , ಗ್ರಾಮದವರಾದ ಬೋರಯ್ಯ ಮಹೇಶ್ ಕೊಲ್ಲೂರಯ್ಯ ಇನ್ನು ಮುಂತಾದವರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
