ಶಾಲೆಗಳಲ್ಲಿ ಶಿಷ್ಠಾಚಾರ ಗಾಳಿಗೆ,ಶಿಸ್ಥು ಕ್ರಮಕ್ಕೆ ಶಿಕ್ಷಣ ಇಲಾಖೆಗೆ ಒತ್ತಾಯ…!!!

ಶಾಲೆಗಳಲ್ಲಿ ಶಿಷ್ಠಾಚಾರ ಗಾಳಿಗೆ,ಶಿಸ್ಥು ಕ್ರಮಕ್ಕೆ ಶಿಕ್ಷಣ ಇಲಾಖೆಗೆ ಒತ್ತಾಯ..

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆಯ ಹೋಟೆಲ್ ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕೆಲ ಶಿಕ್ಷಕರು ಧಮ್ ಹೊಡೆಯೋ ಹಾಗೂ ಕೆಲ ಶಿಕ್ಷಕರು ಮಧ್ಯ ಸೇವಿಸುವ ಮೂಲಕ ಶಿಕ್ಷಕರು ಶಿಷ್ಟಾಚಾರ ಗಾಳಿಗೆ ತೂರಿದ್ದಾರೆಂದು.ಮತ್ತೆ ಕೆಲ ಟೀಚರ್ ಗಳು ಡ್ರೆಸ್ ಕೋಡ್ ನಿಯಮ ಗಾಳಿಗೆ ತೂರಿದ್ದಾರೆಂದು ಕೆಲವರು ಆರೋಪಿಸಿದ್ದಾರೆ. ಕೆಲ ಸರ್ಕಾರಿ ಹಾಗೂ ಹಲವು ಖಾಸಗೀ ಶಾಲೆಗಳ ಶಿಕ್ಷಕಿಯರು ಡ್ರೆಸ್ ಕೋಡ್ ನಿಯಮಗಳನ್ನು ಮೀರುವುದೆ ಅವರಿಗೆ ರೂಡಿಯಾಗಿದೆ,ಇದು ಮಕ್ಕಳಲ್ಲಿ ಹಾಗೂ ಶಾಲಾ ವಾತಾವರಣವನ್ನು ಹದಗೊಡಿಸಯವ ಸಾಧ್ಯತೆ ಇದೆ.ಕಾರಣ ಶಿಕ್ಷಣ ಇಲಾಖಾಧಿಕಾರಿಗಳು ಶೀಘ್ರವೇ ಶಿಕ್ಷಣ ಇಲಾಖೆಗೆ ಸೂಕ್ತ ನಿರ್ಧೇಶನ ನೀಡಬೇಕಿದೆ ಎಂದು,ಪಟ್ಟಣದ ಕೆಲ ಸಂಘಟನೆಗಳ ಪದಾಧಿಕಾರಿಗಳು ನಾಗರೀಕರು ಈ ಮೂಲಕ ಒತ್ತಾಯಿಸಿದ್ದಾರೆ.ಬಹುತೇಕ ಕಡೆಯ ಶಾಲೆಗಳ ಕೆಲ ಶಿಕ್ಷಕಿಯರು ಪ್ಯಾಷನ್ ಡಿಸೈನರ್ ತರ ಶಾಲೆಗೆ ಹಾಜರಾಗುತ್ತಿದ್ದಾರೆ,ಇದು ನಾಗರೀಕರಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ.ಕಾರಣ ಶಾಲೆಗಳಲ್ಲಿ ಡ್ರೆಸ್ ಕೋಡ್ ನಿಯಮ ಖಡ್ಡಾಯ ಪಾಲನೆಗೆ ಸೂಚಿಸಿ ಆದೇಶಿಸಬೇಕಿದೆ,ಈ ಕುರಿತು ಶಿಕ್ಷಣ ಇಲಾಖಾ ಉನ್ನತಾಧಿಕಾರಿಗಳು ಶೀಘ್ರವೇ ಕ್ರಮ ಜರುಗಿಸಬೇಕೆಂದು ಮಕ್ಕಳ ಪೋಷಕರು ನಾಗರೀಕರು ಸಾರ್ವಜನಿಕರು ಹಾಗೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಮೂಲಕ ಒತ್ತಾಯಿಸಿದ್ದಾರೆ.

*ಧಮ್ ಮಾರೋ ಧಮ್..*-ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ದೂಮ ಪಾನ ಮಾಡುವುದನ್ನು ನಿಷೇದಿಸಿದೆ,ಆದ್ರೆ ಕೂಡ್ಲಿಗಿ ಪಟ್ಟಣದಲ್ಲಿ ಕೆಲವು ಹೋಟೆಲ್ ,ಅಂಗಡಿ ಮುಗ್ಗಟ್ಟುಗಳಲ್ಲಿ ಹಾಗೂ ಹಲಹು ಸಾರ್ವಜನಿಕ ಸ್ಥಳದಲ್ಲಿ, ಧಮ್ ಹೊಡೆಯೋದು ಸ್ಸಾಮಾನ್ಯವಾಗಿದೆ ಎಂದು ದೂರಿದ್ದಾರೆ ಸಾರ್ವಜನಿಕರು. ಸಂಬಂಧಿಸಿದಂತೆ ಶಿಸ್ಥು ಕ್ರಮ ಜರುಗಿಸಬೇಕಾಗಿರೋ ಜಾಗ್ರತೆ ಮೂಡಿಸಬೇಕಾಗಿರುವ ಇಲಾಖೆ ತೂಕಡಿಸುತ್ತಿದೆಯಾ.!?ಇದು ಪ್ರಜ್ಞಾವಂತರ ಪ್ರೇಶ್ನೆಯಾಗಿದೆ.ಸಾಮಾನ್ಯ ಜ್ಞಾನ ಹೊಂದಿರದ ಕಾನೂನಿನ ಕನಿಷ್ಠ ಶಿಷ್ಟಾಚಾರವನ್ನು ಮೀರುವ ಇಂತಹ ಅವಿವೇಕಿಗಳಿಂದಾಗಿ, ನಾಗರೀಕರಿಗೆ ಇವರು ಸೇದಿ ಬಿಟ್ಟ ಹೊಗೆ ಕುಡಿದು ಹಿಂಸೆ ಅನುಭವಿಸುಂತಹ ಸುಸ್ಥಿತಿ ನಿರ್ಮಾಣವಾಗಿದೆ.ನೊಂದವರು ಸಾರ್ವಜನಿಕ ಸ್ಥಳದಲ್ಲಿಯೇ ದೂನಪಾನ ಮಾಡುವವರನ್ನು ಮನಬಂದಂತೆ ಬೈದುಕೊಳ್ಳುವುದು ಸಾಮಾನ್ಯವಾಗಿದೆ,ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವ ಇಲಾಖೆ ಮಾತ್ರ ನಿದ್ರೆಗೆ ಜಾರಿದೆ ಕನಿಷ್ಠ ಕರ್ಥವ್ಯ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.ಇಲ್ಲಿ ಪಾಠಮಾಡೋ ಶಿಕ್ಷಕರು ಶಿಷ್ಟಾಚಾರ ಗಾಳಿಗೆ ತೂರಿರಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ….

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend